*ಕೌಕ್ರಾಡಿ ಗ್ರಾಮ ಪಂಚಾಯತ್ ಸದಸ್ಯರಿಗೆ ಗೌರವ ಸನ್ಮಾನ *.**

ಫೆ.19 ರಂದು ಕಡಬ ತಾಲೂಕು ಕೌಕ್ರಾಡಿ ಗ್ರಾಮಪಂಚಾಯತ್ ಸಭಾಂಗಣದಲ್ಲಿ ಗ್ರಾಮ ಪಂಚಾಯತ್ ಸದಸ್ಯರನ್ನು ಗ್ರಾಮಾ ಭಿವೃದ್ಧಿ ಅಧಿಕಾರಿ ಮತ್ತು ಪಂಚಾಯತ್ ಕಾರ್ಯದರ್ಶಿಗಳ ನೇತೃತ್ವದಲ್ಲಿ ಪಂಚಾಯತ್ ಸಿಬಂದಿಗಳು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು.
   ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷರಾದ ಉದಯ ಕುಮಾರ್ ಗೌಡ ಅಧ್ಯಕ್ಷನಾಗಿ ಕಳೆದ 15 ತಿಂಗಳಿನಿಂದ ನನ್ನಿಂದ ಸಾಧ್ಯವಾದಷ್ಟು ಗ್ರಾಮದ ಅಭಿವೃದ್ಧಿ ಕಾರ್ಯಗಳಲ್ಲಿ ನಿಸ್ವಾರ್ಥ ಮನೋಭಾವದಿಂದ ಪ್ರಾಮಾಣಿಕವಾಗಿ ತೊಡಗಿಸಿಕೊಂಡಿದ್ದೇನೆ . ಅಲ್ಲದೆ ಸದಸ್ಯರ ಮತ್ತು ಪಂಚಾಯತ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳುಹಾಗೂ ಸಂಜೀವಿನಿ ಒಕ್ಕೂಟದವರು ನೀಡಿದ ಸಹಕಾರವನ್ನು ತುಂಬು ಮನಸ್ಸಿನಿಂದ ಶ್ಲಾಘಿಸಿದರು.
ಸದಸ್ಯರುಗಳು ಅನಿಸಿಕೆ ವ್ಯಕ್ತಪಡಿಸಿ ಅಧ್ಯಕ್ಷರು ಮತ್ತು ಪಂಚಾಯತ್ ಸಿಬ್ಬಂದಿಗಳು ನೀಡಿದ ಸಹಕಾರವನ್ನು ನೆನಪಿಸಿಕೊಂಡರು.
ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೋಹನ್ ಕುಮಾರ್, ಕಾರ್ಯದರ್ಶಿ ದೇವಿಕಾ,ಉಪಾಧ್ಯಕ್ಷರು ವನಿತಾ ಸದಸ್ಯರಾದ ಜನಾರ್ಧನ, ಸುಧಾಕರ್,ಲೋಕೇಶ್ ಬಿ, ರೋಹಿ, ದಿನೇಶ್,ವಿಶ್ವನಾಥ್ ಗೌಡ, ಮಹೇಶ್ ಸವಿತ, ದೇವಕಿ, ಪುಷ್ಪಾವತಿ, ಭವಾನಿ, ಶೈಲಾ, ಡೈಸಿ, ರತ್ನಾವತಿ, ಸಂದ್ಯಾ,ಗುತ್ತಿಗೆದಾರ ವಿನೋದ್ ಕುಮಾರ್ 
ಪಂಚಾಯತ್ ಸಿಬ್ಬಂದಿಗಳಾದ ಕಸ್ತೂರಿ, ಮಂಜುಳಾ, ವಿದ್ಯಾ ಕಟ್ಟೆಮಜಲು, ಪುರಂದರ, ವಿದ್ಯಾ, ಪ್ರೇಮಾ,ಅಶ್ರಫ್ ಮತ್ತು ಸಂಜೀವಿನಿ ಒಕ್ಕೂಟದ ಸಿಬ್ಬಂದಿಗಳಾದ ಸ್ವರ್ಣಲತಾ, ಚಂದ್ರಿಕಾ,ಗ್ರಂಥಾಲಯ ಮೇಲ್ವಿಚಾರಕಿ ವಿಮಲಾ ಮೊದಲಾದವರು ಉಪಸ್ಥಿತರಿದ್ದರು.

Post a Comment

أحدث أقدم