ಕಡಬ ಬಸ್ ನಿಲ್ದಾಣದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಉದ್ಘಾಟನೆ – ಪ್ರಯಾಣಿಕರಿಗೆ ಸೌಲಭ್ಯ ವಿಸ್ತರಣೆ.

ಕಡಬ: (31/03/2026) ಬೆಳಿಗ್ಗೆ ಸುಮಾರು 10:30ಕ್ಕೆ ಕಡಬದ ಬಸ್ ತಂಗುದಾಣದಲ್ಲಿ ನೂತನ ಸೌಲಭ್ಯಗಳ ಉದ್ಘಾಟನಾ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.
ಪ್ರಯಾಣಿಕರ ಅನುಕೂಲಕ್ಕಾಗಿ ಅಳವಡಿಸಲಾದ ಅಕ್ವಾಗಾರ್ಡ್ ಅಲ್ಕಾಲೈನ್ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಕುಳಿತುಕೊಳ್ಳುವ ಆಶನಗಳ (ಬೆಂಚ್) ವ್ಯವಸ್ಥೆಯನ್ನು ಈ ಸಂದರ್ಭದಲ್ಲಿ ಅಧಿಕೃತವಾಗಿ ಉದ್ಘಾಟಿಸಲಾಯಿತು. 
ಪಟ್ಟಣ ಪಂಚಾಯತ್ ಅಧ್ಯಕ್ಷೆಯವರ ಕೋರಿಕೆ ಮೇರೆಗೆ ಕಡಬದ ಇಬ್ಬರು ಸ್ಥಳೀಯ ವರ್ತಕರು ಈ ವ್ಯವಸ್ಥೆ ಮಾಡಿಕೊಟ್ಟು ಸಹಕರಿಸಿದ್ದು, ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು JMJ ಆಸ್ಪತ್ರೆ ಕಡಬ ನೀಡಿರುವುದು ಗಮನಾರ್ಹವಾಗಿದೆ.
ಇದರೊಂದಿಗೆ, ಪಟ್ಟಣ ಪಂಚಾಯತ್ ವತಿಯಿಂದ ಬಸ್ ನಿಲ್ದಾಣದ ದುರಸ್ತಿ ಕಾರ್ಯ, ಸುಣ್ಣ-ಬಣ್ಣ ಬಳಿದು ನವೀಕರಣ, ಹಾಗೂ ಹೊಸ ನೀರಿನ ಟ್ಯಾಂಕ್ ಅಳವಡಿಸುವ ಕಾರ್ಯ ಕೈಗೊಳ್ಳಲಾಗಿದೆ. ಇದರಿಂದ ಸಾರ್ವಜನಿಕರಿಗೆ ಸ್ವಚ್ಛ ಹಾಗೂ ಸುಸಜ್ಜಿತ ವಾತಾವರಣದಲ್ಲಿ ಬಸ್ ಸೇವೆ ಪಡೆಯುವ ಅವಕಾಶ ಲಭಿಸಿದೆ. ಈ ಕಾರ್ಯವು ಸ್ಥಳೀಯ ಅಭಿವೃದ್ಧಿಯತ್ತ ಸಾಗುತ್ತಿರುವ ಮಹತ್ವದ ಹೆಜ್ಜೆಯಾಗಿದೆ.
ಕಾರ್ಯಕ್ರಮವನ್ನು ಪಟ್ಟಣ ಪಂಚಾಯತ್ ಅಧ್ಯಕ್ಷೆ ತಮ್ಮನ್ನಾ ಜಬೀನ್ ಉದ್ಘಾಟಿಸಿದರು.
 ಈ ವೇಳೆ ಸ್ಥಾಯಿ ಸಮಿತಿ ಅಧ್ಯಕ್ಷ ಅನಿಫ್ ಕೆ.ಎಂ., ಪಟ್ಟಣ ಪಂಚಾಯತ್ ಉಪಾಧ್ಯಕ್ಷೆ ಲೀಲಾವತಿ ಶಿವರಾಮ್, ಸದಸ್ಯರಾದ ದಯಾನಂದ ಪಿಜಕ್ಕಳ, ಕೃಷ್ಣಪ್ಪ ಬೈಲಂಗಡಿ, ರೋಹಿತ್ ಪಣೆಮಜಲು, ಶ್ರೀಮತಿ ಅಕ್ಷತಾ ಮಣಿಮುಂಡ, ಗಣೇಶ್, ಕೃಷ್ಣಪ್ಪ ನಾಯ್ಕ್, ಶ್ರೀಮತಿ ಕುಸುಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಲೀಲಾವತಿ,ಸಿಬ್ಬಂದಿಗಳಾದ ಹರೀಶ್ ಬೇದ್ರಾಜೆ ಹಾಗೂ  ಸ್ಥಳೀಯರಾದ ಸತೀಶ್ ಭೂಮಿಕಾ, ಸೈಯದ್ ಇಕ್ಬಾಲ್, ಹಾಗೂ ಕೆಎಸ್‌ಆರ್‌ಟಿಸಿ ಸಂಚಾರ ನಿಯಂತ್ರಕ ಕುಶಾಲಪ್ಪ ಗೌಡ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಒಟ್ಟಾರೆ, ಈ ನೂತನ ಸೌಲಭ್ಯಗಳು ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ಒದಗಿಸುವುದರ ಜೊತೆಗೆ ಕಡಬ ಬಸ್ ನಿಲ್ದಾಣದ ಸೌಲಭ್ಯವನ್ನು ಇನ್ನಷ್ಟು ಅಭಿವೃದ್ಧಿಯಾಗಲಿದೆ.

Post a Comment

أحدث أقدم