ಮಾರ್ಚ್ 2ರಂದು ನೆಲ್ಯಾಡಿ ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಂದ ನೂತನ ತಂತ್ರಜ್ಞಾನ ಆಧಾರಿತ AI ಮತ್ತು STEM ಪ್ರದರ್ಶನ ನಡೆಯಿತು.
ಪ್ರದರ್ಶನ ಉದ್ಘಾಟಿಸಿ ಮಾತನಾಡಿ ದ ಸಂಸ್ಥೆಯ ಪ್ರಾಂಶುಪಾಲರಾದ ಡಾ. ವರ್ಗಿಸ್ ಕೈಪನಡ್ಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಪ್ರಥಮಬಾರಿಗೆ AI ಶಿಕ್ಷಣವನ್ನು 1 ನೇ ತರಗತಿಯಿಂದಲೇ ಪರಿಚಯಿಸಿದ ಶಿಕ್ಷಣ ಸಂಸ್ಥೆ ನಮ್ಮದು,ಅಲ್ಲದೆ ಸುಸಜ್ಜಿತ STEM ಲ್ಯಾಬ್ ಕೂಡ ಹೊಂದಿದ್ದೇವೆ, 1ನೇ ತರಗತಿಯಿಂದ 9ನೇ ತರಗತಿಯವರೆಗೆ ವಿದ್ಯಾರ್ಥಿಗಳಿಗೆ AI ಶಿಕ್ಷಣ ನೀಡುವುದಲ್ಲದೆ ವಿದ್ಯಾರ್ಥಿಗಳಿಂದಲೇ ವಿವಿಧ ಮಾದರಿಯ ತಂತ್ರಜ್ಞಾನ ಆಧಾರಿತ ಮಾದರಿಗಳನ್ನು ಮಾಡಲಾಗಿದೆ, ಬೆಂಗಳೂರಿನ How N why ಸಂಸ್ಥೆ ಯ ಸಹಕಾರದಿಂದ ತರಗತಿಗಳು ನಡೆಯುತ್ತಿದ್ದುಹೌ N ವೈ ಸಂಸ್ಥೆಯು ದೇಶದಾಧ್ಯಂತ ಸುಮಾರು 1,50,000 ಕ್ಕೂ ಮಿಕ್ಕಿವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡುತ್ತಿದೆ ಸಂಸ್ಥೆಯ ಇಂಜಿನಿಯರ್ ಸಂಸ್ಥೆಯ ಕ್ಯಾಂಪಸ್ನಲ್ಲಿದ್ದು ಶಿಕ್ಷಕ ಜುಬಿನ್ ಪ್ರಸ್ತುತ ವಿದ್ಯಾರ್ಥಿಗಳಿಗೆ ಬೋಧಿಸುತ್ತಿದ್ದಾರೆ ಎಂದರು.
ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ಸುಮಾರು 25 ಕ್ಕೂ ಮಿಕ್ಕಿ ವಿವಿಧ ಮಾದರಿಯ ಪ್ರಾಜೆಕ್ಟ್ಗಳನ್ನು ಪ್ರದರ್ಶಿಸಿದರು.ಕಾಡನೆಗಳ ಬರವನ್ನು ಎಚ್ಚರಿಸುವ ಸೈರನ್,ಗ್ರಾಸ್ ಕಟ್ಟರ್,ಸೆನ್ಸರ್ ಸ್ಟ್ರೀಟ್ ಲೈಟ್,ಮೊಬೈಲ್ ವೈಫೈ ಸೆನ್ಸರ್,ಮನೆಗೆ ಉಪಯೋಗಿಸಬಹುದಾದ ಸ್ಟೇರ್ ಕೇಸ್ ಲೈಟ್ ಸೆನ್ಸರ್ ಹೀಗೆ ವಿವಿಧ ಆಕರ್ಷಕ ವಿವಿಧ ಪ್ರಾಜೆಕ್ಟ್ಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು ವಿದ್ಯಾರ್ಥಿಗಳ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮಕ್ಕಳನ್ನು ಪ್ರೋತ್ಸಾಹಿಸಿದರು.
إرسال تعليق