ನಗರದ ಪ್ರತಿಷ್ಠಿತ ಸಾಂಸ್ಕೃತಿಕ ಸಂಸ್ಥೆಯಾದ ಸೌರಭ ಸಂಗೀತ ನೃತ್ಯ ಕಲಾ ಪರಿಷತ್ತಿನ ಗುರು ಡಾ. ಶ್ರೀ ವಿದ್ಯಾ ಅವರ ಶಿಷ್ಯೆ ಕುಮಾರಿ ದನ್ವಿ ಎಂ. ಇವರು ಪ್ರಸಕ್ತ ಸಾಲಿನ ಸಾಂಸ್ಕೃತಿಕ ಸಂಪನ್ಮೂಲಗಳು ಮತ್ತು ತರಬೇತಿ ಕೇಂದ್ರದಿಂದ ಭರತನಾಟ್ಯ ವಿಭಾಗದಲ್ಲಿ ನೀಡಲಾಗುವ ಪ್ರತಿಷ್ಠಿತ ಸ್ಕಾಲರ್‌ಶಿಪ್‌ಗೆ ಆಯ್ಕೆಯಾಗಿದ್ದಾರೆ. ಈ ಸ್ಕಾಲರ್‌ಶಿಪ್ ಅನ್ನು ನವದೆಹಲಿಯ ಸಂಸ್ಕೃತಿ ಸಚಿವಾಲಯ (Ministry of Culture) ವತಿಯಿಂದ ನೀಡಲಾಗುತ್ತದೆ.
ದನ್ವಿ ಎಂ. ಇವರು ನಗರದ St. Lawrence Bondel ಶಾಲೆಯಲ್ಲಿ ಏಳನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಕಳೆದ ಏಳು ವರ್ಷಗಳಿಂದ ಭರತನಾಟ್ಯ ಮತ್ತು ಶಾಸ್ತ್ರೀಯ ಸಂಗೀತದಲ್ಲಿ ತೊಡಗಿಸಿಕೊಂಡು ಅಭ್ಯಾಸ ಮಾಡುತ್ತಿದ್ದಾರೆ. ತಮ್ಮ ಪರಿಶ್ರಮ, ನಿಷ್ಠೆ ಮತ್ತು ಕಲೆಯ ಮೇಲಿನ ಆಸಕ್ತಿಯಿಂದ ಈ ಸಾಧನೆಯನ್ನು ಮಾಡಿರುವುದು ವಿಶೇಷವಾಗಿದೆ.
ಇವರು ಮಾಯಿಲಪ್ಪ ಮತ್ತು ಸುನೀತಾ ದಂಪತಿಗಳ ಪುತ್ರಿಯಾಗಿದ್ದು, ಅವರ ಸಾಧನೆಗೆ ಕುಟುಂಬದವರು, ಗುರುಗಳು ಹಾಗೂ ಕಲಾಭಿಮಾನಿಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
إرسال تعليق