ಮಂಗಳೂರು: 2021ರಲ್ಲಿ ಉರ್ವಾ ಪೊಲೀಸ್ ಠಾಣೆಯಲ್ಲಿ ವರದಿಯಾಗಿದ್ದ ಕೊಲೆ ಯತ್ನ ಪ್ರಕರಣದ ಆರೋಪಿ ಇಬ್ಬರ ವರ್ಷಗಳಿಂದ ವಿದೇಶದಲ್ಲಿ ತಲೆಮರೆಸಿಕೊಂಡಿದ್ದನ್ನು ಪತ್ತೆ ಹಚ್ಚಿ ಮಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಉರ್ವಾ ಪೊಲೀಸ್ ಠಾಣೆಯ ಪ್ರಕರಣ ಸಂಖ್ಯೆ 07/2021, ಕಲಂಗಳು 143, 147, 148, 301, 323, 324, 307, 504, 506 ರೀಡ್ ವಿತ್ 149 ಐಪಿಸಿ ಅಡಿಯಲ್ಲಿ ದಾಖಲಾಗಿದ್ದ ಈ ಪ್ರಕರಣದಲ್ಲಿ ಆರೋಪಿ ಮೊಹಮ್ಮದ್ ಸಿನಾನ್ (24), ತಂದೆ: ಮಹಮ್ಮದ್ ಸಲೀಂ, ವಾಸ: ಯಾಸಿನ್ ಕಂಪೌಂಡ್, ಕುದ್ರೋಳಿ, ಮಂಗಳೂರು ಎಂಬಾತನು ಕಳೆದ ಎರಡು ವರ್ಷಗಳಿಂದ ಘನ ನ್ಯಾಯಾಲಯಕ್ಕೆ ಹಾಜರಾಗದೆ ವಿದೇಶದಲ್ಲಿ ಅಡಗಿಕೊಂಡಿದ್ದ.
ಆತನ ವಿರುದ್ಧ ಘನ ನ್ಯಾಯಾಲಯವು ವಾರೆಂಟ್ ಹೊರಡಿಸಿದ್ದರಿಂದ, ವಾರೆಂಟ್ ಜಾರಿಗೊಳಿಸುವ ಉದ್ದೇಶದಿಂದ ಭಾರತ ಸರ್ಕಾರದ ಬ್ಯೂರೋ ಆಫ್ ಇಮಿಗ್ರೇಶನ್, ನವದೆಹಲಿ ಇವರ ಮೂಲಕ ಎಲ್.ಓ.ಸಿ (Look Out Circular) ತೆರೆಯಲಾಗಿತ್ತು.
ಈ ಕ್ರಮದ ಹಿನ್ನೆಲೆ ಅಕ್ಟೋಬರ್ 8, 2025ರಂದು ಆರೋಪಿ ಕತಾರ್‌ನಿಂದ ಮಂಗಳೂರಿಗೆ ವಿಮಾನ ಮೂಲಕ ಆಗಮಿಸಿದ ಸಂದರ್ಭದಲ್ಲಿ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಮಿಗ್ರೇಶನ್ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದು ಉರ್ವಾ ಪೊಲೀಸ್ ಠಾಣಾ ಅಧಿಕಾರಿಗಳಿಗೆ ಹಸ್ತಾಂತರಿಸಿದರು.
ನಂತರ ಪೊಲೀಸರವರು ಆತನನ್ನು ಘನ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ಅಲ್ಲದೆ ಆರೋಪಿ ನ್ಯಾಯಾಲಯದ ಕಲಾಪಗಳಿಗೆ ಹಾಜರಾಗದೆ, ಜಾಮೀನು ನಿಯಮ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಉರ್ವಾ ಪೊಲೀಸ್ ಠಾಣೆಯಲ್ಲಿ ಹೊಸ ಪ್ರಕರಣ (Crime No. 100/2025, ಕಲಂ: 269 BNS) ಅಡಿಯಲ್ಲಿ ದಾಖಲಾಗಿದೆ.
👉 ಈ ಪ್ರಕರಣದ ತನಿಖೆ ಉರ್ವಾ ಪೊಲೀಸ್ ಠಾಣಾ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಮುಂದುವರಿದಿದೆ.
إرسال تعليق