ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯವು ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ತೃತೀಯ ಸ್ಥಾನ.

  
  ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಬ್ಯಾಡ್ಮಿಂಟನ್ ಸ್ಪರ್ಧೆಯು ಫಾದರ್ ಮುಲ್ಲಾಸ್ ಕಾಲೇಜು ಮಂಗಳೂರಿನಲ್ಲಿ ದಿನಾಂಕ ಅಕ್ಟೋಬರ್ 18 ಮತ್ತು 19 ರಂದು ನಡೆಯಿತು. ಶಾರೀರಿಕ ಶಿಕ್ಷಣ ನಿರ್ದೇಶಕ ಡಾ. ದಿನೇಶ್ ಕೆ ಅವರ ಮಾರ್ಗದರ್ಶನದಲ್ಲಿ ಕೆ ಎಸ್ ಎಸ್ ಕಾಲೇಜು ತಂಡವು ಫಿಲಿಮಿನರಿ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿ, ಚಾಂಪಿಯನ್ಶಿಪ್ ಸ್ಪರ್ಧೆಯಲ್ಲಿ ಕ್ವಾಟರ್ ಫೈನಲ್ ನಲ್ಲಿ ಸೈಂಟ್ ಅಲೋಶಿಯಸ್ ತಂಡವನ್ನು ಮಣಿಸಿತು. ಸೆಮಿಫೈನಲ್ ಪ್ರವೇಶಿಸಿ ಮೂಡಬಿದ್ರೆಯ ಆಳ್ವಾಸ್ ಕಾಲೇಜನ್ನು ಎದುರಿಸಿ ತೃತೀಯ ಸ್ಥಾನವನ್ನು ಗಳಿಸಿರುತ್ತದೆ.
 ಕಾರ್ತಿಕ್ ಕಕ್ಕೆಪದವು, ಕೌಶಿಕ್ ಕಕ್ಕೆ ಪದವು ಯಜ್ಞೇಶ ,ಷಣ್ಮುಖ ಮತ್ತು ಹೃದಯ್ ಬ್ಯಾಡ್ಮಿಂಟನ್ ತಂಡದಲ್ಲಿದ್ದರು.

Post a Comment

Previous Post Next Post