ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಸಮಾಜಶಾಸ್ತ್ರ ವಿಭಾಗದಿಂದ ಅಧ್ಯಯನ ಭೇಟಿ.

 
  ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ, ಸಮಾಜಶಾಸ್ತ್ರ ವಿಭಾಗದಿಂದ ದಿನಾಂಕ 25 ಹಾಗೂ 26 .10.2024 ರಂದು ಎಚ್. ಡಿ. ಕೋಟೆ ಬೆಳ್ಳೆ ಹಾಡಿ ಮೈಸೂರು ಜಿಲ್ಲೆ ಆದಿವಾಸಿ ಪ್ರದೇಶಕ್ಕೆ ಅಧ್ಯಯನ ಭೇಟಿಯನ್ನು ಹಮ್ಮಿಕೊಳ್ಳಲಾಯಿತು. ಆದಿವಾಸಿ ಹಾಡಿಗಳನ್ನು ಭೇಟಿ ಮಾಡಿ ಜೀವನ ಪದ್ಧತಿಯನ್ನು ಹಾಗೂ ಸಂಸ್ಕೃತಿಯನ್ನು ವಿದ್ಯಾರ್ಥಿಗಳು ಅರಿತುಕೊಂಡರು. ತದನಂತರ ಮೈಸೂರಿನ ಚಾಮುಂಡಿ ಬೆಟ್ಟ ಹಾಗೂ ಅರಮನೆಯನ್ನು ವಿದ್ಯಾರ್ಥಿಗಳು ವೀಕ್ಷಿಸಿದರು. ಒಟ್ಟು 30 ವಿದ್ಯಾರ್ಥಿಗಳು ಮಹಾವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಮನೋಹರ ಹಾಗೂ ಉಪನ್ಯಾಸಕಿ ಆರತಿ ಕೆ. ಅಧ್ಯಯನ ಬೇಟಿಯಲ್ಲಿ ಪಾಲ್ಗೊಂಡರು.

Post a Comment

Previous Post Next Post