ಕುಕ್ಕೆ ಸುಬ್ರಹ್ಮಣ್ಯ; ಶ್ರೀ ಕ್ಷೇತ್ರದಲ್ಲಿ ವಿಶೇಷವಾಗಿ ಪ್ರತಿವರ್ಷ ಅಖಂಡ ಭಜನೆ ಕಾರ್ಯಕ್ರಮ ನಡೆಯುತ್ತಾ ಬಂದಿದೆ.ಕಡಬ ತಾಲೂಕು ಸೇರಿದಂತೆ,ದಕ್ಷಿಣ ಕನ್ನಡ ಜಿಲ್ಲೆಯ ಬೇರೆ ಬೇರೆ ತಾಲೂಕಿನಿಂದ ಭಜನಾ ತಂಡಗಳು ಭಾಗವಹಿಸಿ ದೇವರ ಸೇವೆ ಮಾಡುತ್ತಿದ್ದಾರೆ.
ಮಲಗಿ ಪರಮಾದರದಿ ಪಾಡಲು, ಕುಳಿತು ಕೇಳುವ, ಕುಳಿತರೆ ನಿಲ್ಲುವ, ನಿಂತರೆ ನಲಿವ, ನಲಿದರೆ ನಾ ನಿನಗೆ ಒಲಿವೆ ಎಂದು, ದಾಸರೇ ಹೇಳಿದ್ದಾರೆ.ಭಜನೆ ಇಂದ ಪುರಂದರದಾಸರು ಕಂಡುಕೊಂಡ ಸತ್ಯ.
ಭಜನೆ ಅಂದರೆ ಅದು ಬರಿ ಹಾಡುಗಾರಿಕೆ ಅಲ್ಲ ,ಅದು ಭಗವಂತನ ಮನೋಮಂದಿರವನ್ನು ಪ್ರವೇಶಿಸಲು ಸಾಧನಾ. ಎಂದು ಹಿರಿಯರು ಹೇಳಿದ್ದಾರೆ.
ಸರಕಾರಿ ಸೇವೆ ಒತ್ತಡಗಳು, ಗ್ರಾಮ ಪಂಚಾಯತ್ ಕಾರ್ಯದರ್ಶಿಯಾಗಿ ಇಡೀ ಗ್ರಾಮದ ಜವಾಬ್ದಾರಿ ಈ ಮಧ್ಯೆ ತಮ್ಮ ಬಿಡುವಿನ ಸಮಯದಲ್ಲಿ, ಭಕ್ತಿಯಿಂದ ಭಜನೆ ಮಾಡುತ್ತಿರುವ ಕಾರ್ಯದರ್ಶಿಯವರು ಕುಕ್ಕೆ ಸುಬ್ರಮಣ್ಯ ದೇವಸ್ಥಾನದ ಅಖಂಡ ಭಜನಾ ಕಾರ್ಯಕ್ರಮದಲ್ಲಿ ನಮಗೆ ಕಾಣಿಸಿಕೊಂಡಿದ್ದಾರೆ.
ಭಜನೆ ಹಾಡುವುದರಿಂದ ಮಾನಸಿಕ ನೆಮ್ಮದಿ ,ದೈಹಿಕ ಆರೋಗ್ಯ, ಜೊತೆಗೆ ಭಗವಂತನ ಅನುಗ್ರಹ ಖಂಡಿತವಾಗಿ ಸಿಗುತ್ತದೆ.
ಇಷ್ಟೆಲ್ಲ ಭಜನೆ ಮಾಡಿದರು ಕಾರ್ಯದರ್ಶಿ, ಮೋನಪ್ಪ ಅವರ ಬಗ್ಗೆ ಯಾಕೆ ಅಷ್ಟು ಉತ್ಸಾಹ ತೋರಿ ವರದಿಯನ್ನ ಬರೆದಿದ್ದೇವೆ, ಎಂದರೆ ಅವರು ಸುಮಾರು ವರ್ಷಗಳಿಂದ ಕುಕ್ಕೆ ಸುಬ್ರಮಣ್ಯ ಗ್ರಾಮ ಪಂಚಾಯತ್ ಕಾರ್ಯದರ್ಶಿಗಳಾಗಿ, ಬಳ್ಪ ಗ್ರಾಮದ ಪಿಡಿಓ ಆಗಿ, ಸರಕಾರಿ ಸೇವೆಗಳನ್ನ ನಿರ್ವಹಿಸಿಕೊಂಡು ಬಂದಿರುವಂತ ಒಬ್ಬ ನಿಷ್ಠಾವಂತ ಸರಕಾರಿ ಅಧಿಕಾರಿ, ಸರಕಾರಿ ಅಧಿಕಾರಿ ಭಜನೆ ಮಾಡಬಾರದೆ? ಎಂದು ನೀವು ಕೇಳಬಹುದು.
ಅದಲ್ಲ ನಾವು ಹೇಳುತ್ತಿರುವುದು ಒಬ್ಬ ಅಧಿಕಾರಿಯಾಗಿದ್ದು ಅವರ ಉತ್ಸಾಹ ,ಸರಕಾರಿ ಕರ್ತವ್ಯ,ಒತ್ತಡದ ಕೆಲಸ ಈ ಮದ್ಯೆ ನೆಮ್ಮದಿಯನ್ನು ಪಡಿಬೇಕು ದೇವರ ಬಗ್ಗೆ ಭಜನೆಯನ್ನು ಮಾಡಬೇಕು ಎಂಬ ಹಂಬಲ,ನಂಬಿಕೆ ಹಾಗೂ ಭಕ್ತಿ ಇದನ್ನು ಗುರುತಿಸುವುದು ನಮ್ಮೆಲ್ಲರ ಕರ್ತವ್ಯ, ದೇವರ ಮುಂದೆ ಅಧಿಕಾರಿಗಳು ಹಾಗೂ ನಾವೆಲ್ಲರೂ ಒಂದೇ ಅಲ್ಲವೇ?
ಈ ಅಧಿಕಾರಿ ಅವರಿಗೆ ಶುಭವಾಗಲಿ.
إرسال تعليق