ಕುಕ್ಕೆ ಸುಬ್ರಹ್ಮಣ್ಯ ಷಷ್ಠಿಮಹೋತ್ಸವದ ಸಂಭ್ರಮ-ಆಡಳಿತಾಧಿಕಾರಿಗಳಿಂದ ಪೂರ್ವತಯಾರಿ ಬಗ್ಗೆ ಪರಿಶೀಲನೆ.

ಕುಕ್ಕೆ ಸುಬ್ರಹ್ಮಣ್ಯ; ನ,28,ಕುಕ್ಕೆ ಸುಬ್ರಹ್ಮಣ್ಯ ಷಷ್ಠಿಮಹೋತ್ಸವ ಪ್ರಾರಂಭವಾಗಿದೆ, ಜಾತ್ರೆಗೆ ಪೂರ್ವತಯಾರಿ ನಡೆಯುತ್ತಿದ್ದು ,
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಬರುವ ಭಗವದ್ಭಕ್ತರಿಗೆ ಯಾವುದೇ ಸಮಸ್ಯೆಗಳು ಆಗಬಾರದು ,ಎಲ್ಲಾ ಭಗವದ್ಭಕ್ತರು ಶ್ರೀ ಕ್ಷೇತ್ರಕ್ಕೆ ಆಗಮಿಸಿ ದೇವರ ಬ್ರಹ್ಮರಥೋತ್ಸವ,"ನಾಡಿನಹಬ್ಬ" ಈ ಒಂದು ಅದ್ದೂರಿ ಸಮಾರಂಭದಲ್ಲಿ ಪಾಲ್ಗೊಂಡು ಶ್ರೀ ದೇವರ ಅನುಗ್ರಹ ಪಡೆಯಬೇಕು ಎಂಬ ಉದ್ದೇಶದಿಂದ ಮಾನ್ಯ ಪುತ್ತೂರು ಸಹಾಯ ಆಯುಕ್ತರು ಹಾಗೂ ಆಡಳಿತ ಅಧಿಕಾರಿಗಳದ ಜುಬಿನ್ ಮಹಾಪಾತ್ರ ಅವರು  ಊಟದ ವ್ಯವಸ್ಥೆ ಬಗ್ಗೆ, ಪಾರ್ಕಿಂಗ್, ಶುಚಿತ್ವದ ಬಗ್ಗೆ, ದೇವಸ್ಥಾನದ ವಿದ್ಯುತ್ ಅಲಂಕಾರ ಮಾಡುವ ಬಗ್ಗೆ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಮಾರ್ಗದರ್ಶನ ಜೊತೆಗೆ ಸಲಹೆ ಸೂಚನೆಗಳನ್ನು ನೀಡಿದರು.
ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಸುಬ್ರಹ್ಮಣ್ಯ ಪೋಲೀಸ್ ಠಾಣಾಧಿಕಾರಿ ಕಾರ್ತಿಕ್,ಸಹಾಯ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್ ಎಂಜಿನಿಯರ್ ಉದಯಕುಮಾರ್,
ಉಪಸ್ಥಿತರಿದ್ದರು.

Post a Comment

أحدث أقدم