ಕುಕ್ಕೆ ಸುಬ್ರಹ್ಮಣ್ಯ;ನ,30,ಕೆಟ್ಟ ಮನಸ್ಸುಗಳ ನಾಶವಾಗಿ ಒಳ್ಳೆಯ ಮನಸ್ಸುಗಳ ಮೆಲೈಸಲಿ ಸುಬ್ರಹ್ಮಣ್ಯ ನ ಷಷ್ಠಿ ಮಹೋತ್ಸವ ದ ಸಂದೇಶವೇ ಅದು ಕೆಟ್ಟದನ್ನು ಮಾಡುವರರನ್ನು ನಾಶ ಮಾಡಿದೆ ಎಂದು ಸಹಾಯಕ ಆಯುಕ್ತ ಜುಬಿನ್ ಮಹಾಪತ್ರ ನುಡಿದರು. ಅವರು
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಷಷ್ಠಿ ಮಹೋತ್ಸವದ ಲಕ್ಷ ದೀಪೋತ್ಸವ ದಂದು ಕುಣಿತಾ ಭಜನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವೇದಿಕೆಯಲ್ಲಿ ಕಾರ್ಯನಿರ್ವಾಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರುಗಳಾದ ಸತೀಶ್ ಕೂಜುಗೋಡು, ಲೋಲಾಕ್ಷ ಕೈಕಂಬ, ಅಚ್ಚುತ ಆಲ್ಕಬೆ ಪವನ್ ಎಂ.ಡಿ, ಸುದೀರ್ ಶೆಟ್ಟಿ, ವಿಮಾಲ ರಂಗಯ್ಯ, ಶಿವರಾಮ ರೈ, ಗಣೇಶ್ ಮತ್ತಿತರು ಉಪಸ್ಥಿತರಿದ್ದರು.
ಸುಮಾರು 120 ಕ್ಕಿಂತಲೂ ಅಧಿಕ ಭಜನಾ ತಂಡಗಳು ಕುಣಿತ ಭಜನೆ ಯಲ್ಲಿ ಭಾಗವಹಿಸಿದ್ದವು.
ಸುಧೀರ್ಘ2.30 ಗಂಟೆಗಳ ಕುಣಿತಾ ಭಜನಾ ಕಾರ್ಯಕ್ರಮ ಜರುಗಿತ್ತು. ರಾಜಗೋಪುರದಿಂದ ಆರಂಭಗೊಂಡು ಕೆ.ಎಸ್.ಆರ್. ಟಿ ಸಿ ಬಸ್ ತಂಗುದಾಣ ಹೋಗುವಲ್ಲಿ ವರೆಗೆ ಕುಣಿತ ಭಜನೆ ನಡೆಯಿತು. ಕೆ.ಯೋಗೀಶ್ ಕಿಣಿ ಕಾರ್ಕಳ ಅವರು ಕುಣಿತ ಭಜನೆ ನಡೆಸಿಕೊಟ್ಟರು.
Post a Comment