ಕೊಯಿಲ;ತಾಲೂಕಿನ ಗಡಿ ಭಾಗದಲ್ಲಿ ಕಸದ ರಾಶಿ: ತ್ಯಾಜ್ಯದ ಉಸ್ತುವಾರಿ ಯಾರಿಗೆ? ಕೊಯಿಲ & ಹಿರೆಬಂಡಾಡಿ ಕಸ ಸಮರ..!
ಎಂಬ ಶೀರ್ಷಿಕೆ ಅಡಿಯಲ್ಲಿ ಕೊಯಿಲ ಗ್ರಾಮದ ,ಬಡ್ಡಮೆ ಗಂಡಿಬಾಗಿಲು ಇಂದ ಬೊಳುಮ್ಬುಡ ತೆರಳುವ ರಸ್ತೆ.
ರಸ್ತೆ ಬದಿಯಲ್ಲಿ ಸರಕಾರಿ ಜಾಗದಲ್ಲಿ ವಾಹನಗಳಲ್ಲಿ ಕಸ,ತ್ಯಾಜ್ಯಗಳನ್ನು ತಂದು ಸುರಿಯುತ್ತಾರೆ.ಎಂದು ಡಿ.11ರಂದು ಸ್ಥಳದ ಚಿತ್ರ, ವಿಡಿಯೋ ,ಸರ್ವೇ ನಂಬರ್,ಸ್ಥಳದ ದಿಶಾಂಕ್ ನಕ್ಷೆ,ದಾಖಲೆಗಳನ್ನು ಮಾದ್ಯಮದಲ್ಲಿ ವರದಿಮಾಡಿದ್ದೆವು.
ಉಭಯ ತಾಲೂಕು ಹಾಗೂ ಗ್ರಾಮಗಳ ಗಡಿಯಲ್ಲಿ ಕಸದ ರಾಶಿ, ತ್ಯಾಜ್ಯಗಳನ್ನೂ ಸುರಿದಿದ್ದಾರೆ,
ಎಂದು ಕೊಯಿಲ ಹಾಗೂ ಹಿರೇಬಂಡಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಹಾಗೂ ವರ್ಡ್ ಸದಸ್ಯರಿಗೆ ತಿಳಿದ್ದೆವು.
ತಕ್ಷಣ ಕ್ರಮಕ್ಕೆ ಮುಂದಾದ ಅಧ್ಯಕ್ಷೆ ಪುಷ್ಪಶುಭಾಷ್ ಶೆಟ್ಟಿ,ಪಂಚಾಯತ್ ಸದಸ್ಯರು ಹಾಗೂ ಗ್ರಾ. ಪಂ.ಅಬಿವೃದ್ಧಿ ಅಧಿಕಾರಿ ಸಂದೇಶ;
ಗಡಿ ವಿವಾದ ಹಾಗೂ ಕಸದ ವಿಲೇವಾರಿ ಬಗ್ಗೆ ತಕ್ಷಣ ಕ್ರಮಕ್ಕೆ ಮುಂದಾದ ಕೊಯಿಲ ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಶುಭಾಷ್ ಶೆಟ್ಟಿ ಹಾಗೂ ಸದಸ್ಯರು, ಗ್ರಾ. ಪಂ.ಅಬಿವೃದ್ಧಿ ಅಧಿಕಾರಿ ಸಂದೇಶ, ಡಿ.12 ರಂದು ನಾವು ತಿಳಿಸಿದ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸುತ್ತಾರೆ,ತನಿಖೆ ಸಂದರ್ಭದಲ್ಲಿ ಕಸದ ರಾಶಿಯಲ್ಲಿ ಕೆಲವು ಪತ್ರಗಳು,ದುಡ್ಡು ಕಟ್ಟಿದ ಬಿಲ್ಲುಗಳು ಪತ್ತೆಯಾಗಿದ್ದು ಅದರ ಆಧಾರದ ಮೇಲೆ ಕಸ ಸುರಿದ ವ್ಯಕ್ತಿಯನ್ನು ಹಾಗೂ ಕಸ ಸುರಿದ ಮನೆಯವರನ್ನು ಪತ್ತೆ ಹಚ್ಚಿದ್ದಾರೆ.
ಅಧ್ಯಕ್ಷರು ವಿಚಾರಿಸುವಾಗ ಒಪ್ಪಿಕೊಳ್ಳದ ತ್ಯಾಜ ಸುರಿದ ಮನೆಯವರು;
ಹೌದು ಮನೆಯಲ್ಲಿ ಕಾರ್ಯಕ್ರಮವನ್ನು ಮಾಡಿ ಹಳಸಿದ ಆಹಾರ ಪದಾರ್ಥ ,ಪ್ಲಾಸ್ಟಿಕ್ ತಟ್ಟೆಗಳು ಗೋಣಿಚೀಲಗಳು ಗಬ್ಬೆದ್ದು ನಾರುತ್ತಿದ್ದ ಈ ಕಸದ ರಾಶಿಯಿಂದ ಹೇಗೋ ಕಷ್ಟ ಪಟ್ಟು ಸುರಿದವರ ಸುಳಿವನ್ನ ಪತ್ತೆ ಮಾಡುತ್ತಾರೆ, ಅವರ ಮನೆಯನ್ನು ಪತ್ತೆ ಹಚ್ಚಿ ಅಲ್ಲಿಗೆ ತೆರಳಿ ವಿಚಾರಿಸಿದಾಗ, ನಾವು ಸುರಿದಿಲ್ಲ,ನಾವಲ್ಲ, ಪಕ್ಕದ ಮನೆಯವರು ಸುರಿದಿರಬೇಕು ಎಂದು ಬೊಗಳೆ ಬಿಡುತ್ತಾರೆ.
ಖಡಕ್ಕಾಗಿ ಎಚ್ಚರಿಸಿದ ಅಧ್ಯಕ್ಷರು ನಾನು ನಿಮ್ಮಮೇಲೆ ಕಾನೂನು ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳುತ್ತಾರೆ. ಇದಕ್ಕೂ ಒಪ್ಪದ ತ್ಯಾಜ್ಯಗಳನ್ನು ವಾಹನದ ಮೂಲಕ ತಂದು ಸುರಿದ ಮನೆಯವರ ಮೇಲೆ ಕಾನೂನು ಕ್ರಮಕ್ಕೆ ಮುಂದಾಗಿ ಅಧ್ಯಕ್ಷರು ಪಂಚಾಯತ್ ನಿಂದ ನೋಟಿಸ್ ಜಾರಿ ಮಾಡುತ್ತಾರೆ.
ನೋಟಿಸ್ ಜಾರಿಯಾದ ಬೆನ್ನಲ್ಲೇ ಕಸ ಎಸೆದ ಮನೆಯವರು ದಂಡ ಕಟ್ಟಿದ್ದಾರೆ;
ಇದೀಗ ಕಸ ಎಸೆದ ಎರಡು ಮನೆಯವರಿಂದ ತಲಾ 5000/- ದಂತೆ ಒಟ್ಟು 10,000ರೂ ದಂಡ ವಸೂಲಿ ಮಾಡಿದ್ದಾರೆ. ಕಸ ಎಸೆಯದಂತೆ ಎಚ್ಚರಿಕೆ ನೀಡಿದ್ದಾರೆ. ಕಸವನ್ನು ತೆರವುಗೊಳಿಸಲಾಗುವುದು ಎಂದು ಮಾದ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ಕೊಯಿಲ ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಶುಭಾಷ್ ಶೆಟ್ಟಿ ಹಾಗೂ ಗ್ರಾಮಪಂಚಾಯತ್ ಸದಸ್ಯರ ಹಾಗೂ ಗ್ರಾ. ಪಂ.ಅಬಿವೃದ್ಧಿ ಅಧಿಕಾರಿ ಸಂದೇಶ ಅವರ ಪ್ರಕೃತಿ ಮೇಲಿನ ಕಾಳಜಿ,ಪ್ರಾಮಾಣಿಕ ಪ್ರಯತ್ನ ಹಾಗೂ ಕರ್ತವ್ಯಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ.
Post a Comment