ಕುಕ್ಕೆ ಶ್ರೀ ಸುಬ್ರಹ್ಮಣ್ಯ ಶ್ರೀ ಕ್ಷೇತ್ರದಲ್ಲಿ ಇಂದಿನ ದಿನ 255 ಭಕ್ತರಿಂದ ಎಡೆಸ್ನಾನ ಸೇವೆ.

ಕುಕ್ಕೆ ಸುಬ್ರಮಣ್ಯ; ಭಗವತ್ಭಕ್ತರ ನಂಬಿಕೆ ಪುರಾತನ ಕಾಲದಿಂದಲೂ ನಡೆದು ಬಂದಂತಹ ವಿಶೇಷವಾದಂತಹ ಉಚಿತ ಸೇವೆಗಳಲ್ಲಿ ಎಡೆಸ್ನಾನ ಸೇವೆಯು ಒಂದು.
ಮಾರ್ಗಶಿರ ಮಾಸ, ಶುಕ್ಲ ಪಕ್ಷದ ಚೌತಿ ,ಪಂಚಮಿ,ಷಷ್ಠಿ ಯಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅಂಗಣದಲ್ಲಿ , ಶ್ರೀ ದೇವರಿಗೆ ಮಹಾಪೂಜೆ ಆದ ಬಳಿಕ, ಎಲೆಯನ್ನು ಇಟ್ಟು ದೇವರಿಗೆ ಮಾಡಿದಂತ ಅನ್ನ ಹಾಗೂ ಎಲ್ಲಾ ಬಗೆಯ ಭಕ್ಷಗಳನ್ನು ಬಡಿಸಿ ಗೋವಿಗೆ ನೀಡಲಾಗುತ್ತದೆ.
ಗೋವು ನೈವೇದ್ಯವನ್ನ ಸ್ವೀಕರಿಸಿದ ಬಳಿಕ ಸ್ವಇಚ್ಛೆ ಇಂದ ಸೇವೆಯನ್ನು ಮಾಡಬೇಕು ಎಂಬ ಭಕ್ತರು ಗೋವಿಗೆ ನೈವೇದ್ಯವಾದ
ಎಲೆಯ ಮೇಲೆ ಉರುಳು ಸೇವೆಯನ್ನ ಮಾಡುತ್ತಾರೆ. 
ಪಂಚಮಿಯ ಶುಭ ದಿನವಾದ ಇಂದು ಸುಮಾರು 255 ಭಕ್ತರು ಸೇವೆಯನ್ನ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತಾಧಿಕಾರಿ ಜುಬಿನ್ ಮಹಾ ಪಾತ್ರ, ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಯ್ಯಪ್ಪ ಅರವಿಂದ ಸುತಗುಂಡಿ, ದೇವಸ್ಥಾನದ ಅರ್ಚಕರು, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರು,ಸಿಬ್ಬಂದಿ ವರ್ಗದವರು ಶ್ರೀ ಕ್ಷೇತ್ರದ ಭಕ್ತರು ಉಪಸ್ಥಿತರಿದ್ದರು.

Post a Comment

Previous Post Next Post