ಕುಕ್ಕೆ ಸುಬ್ರಮಣ್ಯ; ಭಗವತ್ಭಕ್ತರ ನಂಬಿಕೆ ಪುರಾತನ ಕಾಲದಿಂದಲೂ ನಡೆದು ಬಂದಂತಹ ವಿಶೇಷವಾದಂತಹ ಉಚಿತ ಸೇವೆಗಳಲ್ಲಿ ಎಡೆಸ್ನಾನ ಸೇವೆಯು ಒಂದು.
ಮಾರ್ಗಶಿರ ಮಾಸ, ಶುಕ್ಲ ಪಕ್ಷದ ಚೌತಿ ,ಪಂಚಮಿ,ಷಷ್ಠಿ ಯಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅಂಗಣದಲ್ಲಿ , ಶ್ರೀ ದೇವರಿಗೆ ಮಹಾಪೂಜೆ ಆದ ಬಳಿಕ, ಎಲೆಯನ್ನು ಇಟ್ಟು ದೇವರಿಗೆ ಮಾಡಿದಂತ ಅನ್ನ ಹಾಗೂ ಎಲ್ಲಾ ಬಗೆಯ ಭಕ್ಷಗಳನ್ನು ಬಡಿಸಿ ಗೋವಿಗೆ ನೀಡಲಾಗುತ್ತದೆ.
ಗೋವು ನೈವೇದ್ಯವನ್ನ ಸ್ವೀಕರಿಸಿದ ಬಳಿಕ ಸ್ವಇಚ್ಛೆ ಇಂದ ಸೇವೆಯನ್ನು ಮಾಡಬೇಕು ಎಂಬ ಭಕ್ತರು ಗೋವಿಗೆ ನೈವೇದ್ಯವಾದ
ಎಲೆಯ ಮೇಲೆ ಉರುಳು ಸೇವೆಯನ್ನ ಮಾಡುತ್ತಾರೆ.
إرسال تعليق