ಮಾರ್ಗಶಿರ ಮಾಸ ಶುಕ್ರಪಕ್ಷದ ಷಷ್ಠಿಯಾ ಶುಭ ದಿನದಂದು, ಕುಕ್ಕೆ ಸುಬ್ರಹ್ಮಣ್ಯ ದೇವರು ಬ್ರಹ್ಮರಥದಲ್ಲಿ ರಥಭೀದಿಯಲ್ಲಿ ಉತ್ಸವ ನಡೆಯಲಿದೆ.
ಈ ಸಂದರ್ಭದಲ್ಲಿ ಬ್ರಹ್ಮರಥಕ್ಕೆ ಯಾವುದೇ ಹಾನಿಯಾಗಬಾರದು ಎಂಬ ಮುಂಜಾಗ್ರತ ಕ್ರಮದಿಂದ,
ಕುಕ್ಕೆಯಲ್ಲಿ ಪುರಾತನ ಕಾಲದಲ್ಲೂ ನಡೆದುಬಂದ ಒಂದು ಸಂಪ್ರದಾಯ, ಕೋಪ್ಪರಿಗೆ ಏರಿದ ಮೇಲೆ ಕುಕ್ಕೆ ನಿವಾಸಿಗಳು ಯಾರು ಮರ ಹತ್ತುವುದಿಲ್ಲ, ಮರ ಕಡಿಯುವುದಿಲ್ಲ.
ಆದ್ದರಿಂದ ಈ ಅನಿವಾರ್ಯ ಸಂದರ್ಭದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವರ ಭಕ್ತಾರಾದ ಮರದ ವ್ಯಾಪಾರಿ ಸುಂಕದಕಟ್ಟೆ ಖಾದರ್ ಎಂಬುವರನ್ನು ಕೇಳಿಕೊಂಡಾಗ ಅವರು ಸಂತೋಷದಿಂದ ಒಪ್ಪಿ ಅವರು ಹಾಗೂ ಅವರ ತಂಡದವರು, ಕುಕ್ಕೆಗೆ ಬಂದು ಉಚಿತವಾಗಿ ಮರದ ಗೆಲ್ಲುಗಳನ್ನು ತೆರವುಗೊಳಿಸಿದ್ದಾರೆ.
ಜಾತಿ ಧರ್ಮ ಭೇದ ಮರೆತು ನಾವೆಲ್ಲರೂ ಒಂದಾಗಿ ಬಾಳೋಣ, ಕುಕ್ಕೆ ಸುಬ್ರಹ್ಮಣ್ಯ ದೇವರ ಸೇವೆಯನ್ನು ಮಾಡೋಣ ಎಲ್ಲರಿಗೂ ಒಳ್ಳೆಯದಾಗಲಿ ,ನಮ್ಮ ಸಮಾಜ ಒಳ್ಳೆದಾಗಲಿ ,ನಮ್ಮ ದೇಶ ಒಳ್ಳೆಯದಾಗಲಿ ಎಂಬ ಸಂದೇಶವನ್ನ ಸಾರಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಿಂದ ಕೇಳಿಕೊಂಡಾಗ ನಾನು ಬಂದು ಶ್ರೀ ದೇವರ ಸೇವೆಯನ್ನು ಮಾಡಿದ್ದೇನೆ, ಸುಮಾರು ವರ್ಷಗಳಿಂದ ಕುಕ್ಕೆ ಸುಬ್ರಮಣ್ಯ ಪರಿಸರದಲ್ಲಿ ಉದ್ಯೋಗಗಳನ್ನು ಮಾಡುತ್ತಿದ್ದೇನೆ ಹಾಗೂ ಎಲ್ಲರಿಗೂ ದೇವರು ಒಂದೇ ಎಂದು ಈ ಸೇವೆಯನ್ನ ಮಾಡುತ್ತಿದ್ದೇನೆ ಇಂದು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮ ಜೊತೆ ಮಾತನಾಡಿದ ಗ್ರಾಮ ಪಂಚಾಯತ್ ಸದಸ್ಯರಾದ ಹರೀಶ್ ಇಂಜಾಡಿಯವರು,
ಖಾದರ್ ಅವರು ಸುಬ್ರಹ್ಮಣ್ಯ ದೇವರ ಭಕ್ತರಾಗಿದ್ದು ಹಲವಾರು ವರ್ಷಗಳಿಂದ ಕುಕ್ಕೆ ಸುಬ್ರಮಣ್ಯ ಪರಿಸರದಲ್ಲಿ ವ್ಯಾಪಾರ ವ್ಯವಹಾರಗಳನ್ನು ಮಾಡುತ್ತಾ ಬಂದಿದ್ದಾರೆ.
ಸಮಾಜ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡು ಸಂಘ ಸಂಸ್ಥೆಗಳಿಗೆ ಸಹಕಾರವನ್ನು ಮಾಡುತ್ತಾ ಬಂದಿದ್ದಾರೆ.
ಕೊಡುಗೈ ದಾನಿಯಾದ ಖಾದರ್ ಅವರು ಜಾತಿ ಧರ್ಮ ಮರೆತು ಸುಬ್ರಹ್ಮಣ್ಯದಲ್ಲಿ ಎಲ್ಲರಿಗೂ ಸಹಕಾರ ಮಾಡುತ್ತಬಂದಿದ್ದಾರೆ.
ಮರದ ಗೆಲ್ಲುಗಳನ್ನು ತೆರವು ಮಾಡಬೇಕು ಎಂದು ಕೇಳಿಕೊಂಡಾಗ ತಕ್ಷಣ ಅವರು ಹಾಗೂ ಸಿಬ್ಬಂದಿಗಳು ಬಂದು ಉಚಿತವಾಗಿ ತೆರವುಮಾಡಿ ತನ್ನಿಂದಾದ ಸೇವೆ ಸಲ್ಲಿಸಿದ್ದಾರೆ.
ಇದರಿಂದ ಸಮಾಜಕ್ಕೆ ಏನು ಸಂದೇಶ ಅಂದರೆ ಸುಬ್ರಹ್ಮಣ್ಯ ದೇವರ ಜಾತ್ರೆ , ಜಾತಿ ಧರ್ಮ ಭೇದ ಇಲ್ಲದೆ ಸರ್ವಧರ್ಮವುಕ್ಕು ಒಳ್ಳೆಯದಾಗಲಿ ಎಂದು ಸುಬ್ರಹ್ಮಣ್ಯ ದೇವರು ಅನುಗ್ರಹಿಸುತ್ತಾರೆ. ಸರ್ವಧರ್ಮದವರು ಒಂದಾಗಿ ಬಾಳೋಣ ಎಂದರು.
إرسال تعليق