ಕುಕ್ಕೆ ಸುಬ್ರಹ್ಮಣ್ಯ- ಭಾರೀ ಮಳೆ, ಸಂಕಷ್ಟದಲ್ಲಿ ಜಾತ್ರಾಮಹೋತ್ಸವಕ್ಕೆ ವ್ಯಾಪಾರಸ್ಥರು.


ಕುಕ್ಕೆ ಸುಬ್ರಹ್ಮಣ್ಯ: ಫೆಂಗಲ್ ಚಂಡಮಾರುತ ಪ್ರಭಾವದಿಂದ ದ.ಕ ಜಿಲ್ಲೆ ಸೇರಿದಂತೆ ಕರಾವಳಿ ತೀರದಲ್ಲಿ ಭಾರೀ ಮಳೆಯಾಗಿದೆ.
ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯದಲ್ಲೂ ಡಿ.5 ರ ಸಂಜೆ ಮಳೆ ಸುರಿದಿದ್ದು ಷಷ್ಠಿ ಮಹೋತ್ಸವಕ್ಕೆ ಬಂದ ವ್ಯಾಪಾರಿಗಳು ಸಂಕಷ್ಟಕ್ಕೆ ಒಳಗಾಗಿದ್ದಾರೆ.

 ಬಾಡಿಗೆ ನೆಲೆಯಲ್ಲಿ ಸ್ಥಳ ಪಡೆದು ವ್ಯಾಪಾರ ಮಾಡುವ ಸಲುವಾಗಿ ಅಂಗಡಿಗಳನ್ನು ತೆರೆದಿದ್ದು ಸುಮಾರು ಎರಡು ಗಂಟೆಗಳ ಕಾಲ ಮಳೆ ಬಂದ ಕಾರಣ ಹಲವು ಅಂಗಡಿಗಳಿಗೆ ನೀರು ನುಗ್ಗಿದೆ.ವ್ಯಾಪಾರ ಕ್ಕೆ ಸಂಬಂಧಿಸಿದ ವಸ್ತುಗಳು ನೀರಿನಲ್ಲಿ ಒದ್ದೆಯಾಗಿರುವುದಾಗಿ ವರದಿಯಾಗಿದೆ. 

 ಅಂಗಡಿ ಹಾಕಿರುವ ಸ್ಥಳದಲ್ಲಿ ಕ್ರಷರ್ ರೂಪದ ಜಲ್ಲಿ ಹಾಕಿದ್ದಲ್ಲಿ ಕೆಲಸರು ಕಡಿಮೆಯಾಗಲಿದೆ, ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಿದರೆ ಅನುಕೂಲ ಎನ್ನುತ್ತಾರೆ ಸಂಚಾರಿ ವ್ಯಾಪಾರಿಗಳು ತಿಳಿಸಿದ್ದಾರೆ.

Post a Comment

أحدث أقدم