ಕಡಬ: ಕೊಂಬಾರು ಗ್ರಾಮದ ಸಿರಿಬಾಗಿಲು ಸರಕಾರಿ ಪ್ರಾಥಮಿಕ ಶಾಲಾ ಎಸ್.ಡಿ.ಎಂ.ಸಿ. ಹಾಗೂ ಹಳೆ ವಿದ್ಯಾರ್ಥಿ ಸಂಘದ ಸಹಯೋಗದೊಂದಿಗೆ ಶಾಲಾ ವಾರ್ಷಿಕೋತ್ಸವದ ಅಂಗವಾಗಿ ಕ್ರೀಡೋತ್ಸವ ಸಿರಿಬಾಗಿಲು ಶಾಲೆಯಲ್ಲಿ ಡಿ.25ರಂದು ನಡೆಯಲಿದೆ.
ಬೆಳಗ್ಗೆ ಗಂಟೆ 9ಕ್ಕೆ ಕಾರ್ಯಕ್ರಮವನ್ನು ಕೊಂಬಾರು ಗ್ರಾ.ಪಂ. ಸದಸ್ಯ ಚೆನ್ನಕೇಶವ ಕೈಂತಿಲ ಉದ್ಘಾಟಿಸುವರು. ಸಂಜೆ 4ಕ್ಕೆ ಬಹುಮಾನ ವಿತರಣೆ ನಡೆಯಲಿದೆ. ಗ್ರಾ.ಪಂ. ಸದಸ್ಯ ಗಣೇಶ್ ಪಿಲಿಕಜೆ ಬಹುಮಾನ ವಿತರಿಸುವರು. ಎಸ್.ಡಿ.ಎಂ.ಸಿ. ಮಾಜಿ ಅಧ್ಯಕ್ಷ ಚೆನ್ನಕೇಶವ ಗೌಡ ಕಟ್ಟೆ ಇಡ್ಯಡ್ಕ ಅಧ್ಯಕ್ಷತೆ ವಹಿಸುವರು. ಬಂಟ್ರ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಕುಮಾರ್ ಕೆ.ಜೆ., ಧರ್ಮಸ್ಥಳ ಯೋಜನೆಯ ಮೇಲ್ವಿಚಾರಕ ರವಿಪ್ರಸಾದ್, ಎಸ್.ಡಿ.ಎಂ.ಸಿ. ಮಾಜಿ ಅಧ್ಯಕ್ಷ ಮನೋಹರ ಕಟ್ಟೆ, ಹಳೆ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಗಣೇಶ್ ಅನಿಲ ಮುಖ್ಯ ಅತಿಥಿಗಳಾಗಿರುವರು.
Post a Comment