ಗೋಳಿತಟ್ಟು ಶಾಂತಿನಗರ ಶಾಲೆ ಪ್ರಭಾರ ಮುಖ್ಯ ಶಿಕ್ಷಕ ಪ್ರದೀಪ್ ಬಾಕಿಲ(42ವ) ಹೃದಯಾಘಾತದಿಂದ ಡಿ.5 ರಂದು ನಿಧನರಾಗಿದ್ದಾರೆ.

ಕಡಬ/ಆಲಂಕಾರು: ಅಲಂಕಾರು ಗ್ರಾಮದ ಬಾಕಿಲ ನಿವಾಸಿ, ಗೋಳಿತಟ್ಟು ಶಾಂತಿನಗರ ಶಾಲೆ ಪ್ರಭಾರ ಮುಖ್ಯ ಶಿಕ್ಷಕ ಪ್ರದೀಪ್ ಬಾಕಿಲ(42ವ) ಹೃದಯಾಘಾತದಿಂದ ಡಿ.5 ರಂದು ನಿಧನರಾಗಿದ್ದಾರೆ

ಪ್ರದೀಪ್ ಬಾಕಿಲ ಅವರು ಜೇಸಿಐ ಆಲಂಕಾರು ಇದರ ಪೂರ್ವಾಧ್ಯಕ್ಷರಾಗಿದ್ದರು. ವೃತ್ತಿಯಲ್ಲಿ ಶಿಕ್ಷಕರಾಗಿ, ಪ್ರವೃತ್ತಿಯಲ್ಲಿ ತರಬೇತುದಾರರಾಗಿರುವ ಇವರು ತಾವು ಸೇವೆ ಸಲ್ಲಿಸುತ್ತಿರುವ ಶಾಂತಿನಗರ ಸರಕಾರಿ ಶಾಲೆಯಲ್ಲಿ ಹಲವು ವಿನೂತನ ಕಾರ್ಯಕ್ರಮಗಳ ಮೂಲಕ ಶಿಕ್ಷಣ ನೀಡುತ್ತಿದ್ದರು.

ರಾಜ್ಯದಾದ್ಯಂತ ಸುಮಾರು 200ಕ್ಕಿಂತಲೂ ಹೆಚ್ಚು ತರಬೇತಿಗಳನ್ನೂ ನೀಡಿದ ಹೆಗ್ಗಳಿಕೆ ಇವರದು. ಇವರ ನಿಧನಕ್ಕೆ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ.

Post a Comment

Previous Post Next Post