ಸುಬ್ರಹ್ಮಣ್ಯ ಗ್ರಾ. ಪಂ.ವತಿಯಿಂದ ಸ್ವಚ್ಚತೆ ಬಗ್ಗೆ ಹಾಗೂ ಬೀದಿ ನಾಯಿ,ಹಸುಗಳ ಸ್ಥಳಂತರ ಬಗ್ಗೆ ಸಭೆ.

ಕುಕ್ಕೆ ಸುಬ್ರಹ್ಮಣ್ಯ; ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಕುಮಾರಧಾರ ಸಭಾಂಗಣದಲ್ಲಿ ಸ್ವಚ್ಛತೆ ಬಗ್ಗೆ ಕುಕ್ಕೆ ಸುಬ್ರಮಣ್ಯ ಕ್ಷೇತ್ರದ ಎಲ್ಲಾ ವಸತಿಗೃಹದ ಮಾಲಕರನ್ನು, ವರ್ತಕರನ್ನು ಕರೆಸಿ ಸ್ವಚ್ಛತೆಯ ಬಗ್ಗೆ ಡಿ,03 ರಂದು ಸಭೆ ನಡೆಸಲಾಯಿತು.


ಕುಕ್ಕೆ ಸುಬ್ರಹ್ಮಣ್ಯ ಶ್ರೀ ದೇವರ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ, ಸ್ವಚ್ಛತೆಯನ್ನು ಕಾಪಾಡಬೇಕು, ಹಾಗೂ ಕುಕ್ಕೆ ಬರುವ ಭಗವದ್ಭಕ್ತರು ಸ್ವಚ್ಛತೆಯನ್ನು ಕಾಪಾಡಬೇಕು.
ಈ ಬಗ್ಗೆ ಯಾವ ರೀತಿಯ ನಿಯಮಗಳನ್ನು ನಡೆಸಬೇಕು ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು. 
ಜೊತೆಗೆ ಕುಕ್ಕೆ ಸುಬ್ರಮಣ್ಯ ದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ರಸ್ತೆ ತುಂಬೆಲ್ಲ ಬೀದಿನಾಯಿಗಳು ಕಂಡುಬರುತ್ತದೆ. ಜೊತೆಗೆ ಯಾರು ವಾರಿಸುದಾರರು ಇಲ್ಲದ ಬೀಡಾಡಿ ಹಸುಗಳು ಹೆಚ್ಚಾಗಿದ್ದು ಈ ಬಗ್ಗೆಯೂ ಸಭೆಯಲ್ಲಿ ಪ್ರಸ್ತಾಪವಾಗಿದ್ದು.
 ಒಂದೆರಡು ದಿನಗಳಲ್ಲಿ ಬೀದಿನಾಯಿಗಳನ್ನು ಹಾಗೂ ಬೀದಿಯಲ್ಲಿ ಕಂಡುಬರುವ ವಾರಿಸುದಾರರಿಲ್ಲದ ಹಸುಗಳನ್ನು ಸ್ಥಳಾಂತರ ಮಾಡುವ ಬಗ್ಗೆ ಚರ್ಚೆಗಳು ನಡೆದವು. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಜಾತ್ರಾ ಸಂದರ್ಭದಲ್ಲಿ ಬಂದು ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವಂತ ವ್ಯಾಪಾರಸ್ಥರು ಸ್ವಚ್ಛತೆ ಕಾಪಾಡಬೇಕು ಈ ಬಗ್ಗೆ ಗ್ರಾಮ ಪಂಚಾಯತ್ ವತಿಯಿಂದ ಅವರಿಗೆ ಅರಿವು ಮೂಡಿಸುವ ಕಾರ್ಯವನ್ನು ಮಾಡಬೇಕು ಹಾಗೂ ತಪ್ಪಿದಲ್ಲಿ ಕ್ರಮ ಕೈಗೊಳ್ಳುವ ಬಗ್ಗೆ ಸಭೆಯಲ್ಲಿ ನಿರ್ಣಯ ಗಳನ್ನು ಕೈಗೊಂಡರು. 
ಈ ಸಂದರ್ಭದಲ್ಲಿ ಸಭೆಯ ಅಧ್ಯಕ್ಷತೆಯನ್ನ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಜಾತಾ ವರು ವಹಿಸಿದ್ದರು. 
ವೇದಿಕೆಯಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಹೆಚ್ ಎಲ್ ವೆಂಕಟೇಶ್, ಸದಸ್ಯರಾದ ರಾಜೇಶ್ ಏನ್ ಎಸ್, ಭಾರತಿ ದಿನೇಶ್,ದಿವ್ಯಯಶೋದ ಕೃಷ್ಣ,
,ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಮಹೇಶ್, ಕಾರ್ಯದರ್ಶಿ ಮೋನಪ್ಪ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸಿಬ್ಬಂದಿ ಯೋಗೀಶ್, ಮಾಸ್ಟರ್ ಪ್ಲಾನ್ ಸದಸ್ಯ ಪವನ್,ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಲಲಿತಾ ಗುಂಡಡ್ಕ, ಉಪಸ್ಥಿತರಿದ್ದರು.

Post a Comment

Previous Post Next Post