ಕುಕ್ಕೆ ಸುಬ್ರಹ್ಮಣ್ಯ ಶ್ರೀ ಕ್ಷೇತ್ರ ಸ್ವಚ್ಛತೆ ಬಗ್ಗೆ ಜಾಗೃತಿ-ದೇವಾಲಯದ ಆಡಳಿತದಿಂದ ಸೂಚನಾಫಲಕ ಅಳವಡಿಸಿದ್ದಾರೆ.

ಕುಕ್ಕೆ ಸುಬ್ರಮಣ್ಯ; ಡಿ,3, ಪ್ರಸಿದ್ಧ ದೇವಾಲಯ ಕುಕ್ಕೆ ಸುಬ್ರಮಣ್ಯ ಶ್ರೀ ಕ್ಷೇತ್ರದಲ್ಲಿ ಚಂಪಾ ಷಷ್ಠಿ ಮಹೋತ್ಸವ ನಡೆಯುತ್ತಿದ್ದು.
ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಗವದ್ಭಕ್ತರು,ಗಣ್ಯಾತಿ ಗಣ್ಯರು ಕುಕ್ಕೆ ಸುಬ್ರಹ್ಮಣ್ಯ ಶ್ರೀ ದೇವರ ಷಷ್ಟಿ ಮಹೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. 
ಅದ್ದೂರಿಯಿಂದ ಶ್ರೀ ದೇವರ ಜಾತ್ರಾ ಮಹೋತ್ಸವ ನಡೆಯಲಿದೆ. 
ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರುವ ಸಮಯದಲ್ಲಿ ಸ್ವಚ್ಛತೆ ಬಹು ಮುಖ್ಯವಾದಂತ ಅಂಗವಾಗಿದೆ, ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಮಾನ್ಯ ಆಡಳಿತ ಅಧಿಕಾರಿ ಜುಬಿನ್ ಮಹಾಪಾತ್ರ ಅವರ ಆದೇಶದ ಮೇರೆಗೆ, ಕುಕ್ಕೆ ಸುಬ್ರಹ್ಮಣ್ಯ ಶ್ರೀ ಕ್ಷೇತ್ರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು.
ಸ್ವಚ್ಛತೆಗಾಗಿ ಸೂಚನಾ ಫಲಕ ಅಳವಡಿಸಿದ್ದಾರೆ.  
ಕುಕ್ಕೆ ಶ್ರೀ ಸುಬ್ರಹ್ಮಣ್ಯ ಶ್ರೀ ಕ್ಷೇತ್ರಕ್ಕೆ ಬರುವ ಪ್ರತಿಯೊಬ್ಬ ಭಕ್ತರು ಆಡಳಿತ ಮಂಡಳಿ ಸೂಚಿಸಿದ ರೀತಿಯಲ್ಲಿ ಸ್ವಚ್ಛತೆಯನ್ನ ಕಾಪಾಡಬೇಕು ಹಾಗೂ ನಮ್ಮ ದೇವಸ್ಥಾನ ನಾವೇ ಸ್ವಚ್ಛವಾಗಿ ಇರಿಸಬೇಕು. 
ಈ ಸೂಚನಾ ಫಲಕದಲ್ಲಿ ಒಂದು ಸುಂದರವಾದಂತಹ ವಾಕ್ಯವನ್ನು ಬರೆದಿದ್ದಾರೆ.

ನೀವು ಕಸವನ್ನು ರಸ್ತೆಗೆ ಎಸೆಯುವುದಾದರೆ ಮತ್ತು ಅದನ್ನು ಒಬ್ಬ ಅಶಿಕ್ಷಿತ ತೆಗೆಯುವುದಾದರೆ ನೀವು ಪಡೆದಿರುವ ಶಿಕ್ಷಣದ ಲಾಭವಾದರೂ ಏನು?

ಈ ಸಂದೇಶವನ್ನು ಎಲ್ಲ ಪ್ರಜ್ಞಾವಂತ ನಾಗರಿಕರು,
ಕುಕ್ಕೆಗೆ ಬರುವ ಭಕ್ತರು, ಇಲ್ಲಿ ವ್ಯಾಪಾರ ಮಾಡುವಂತ ವರ್ತಕರು, ಸಾರ್ವಜನಿಕರು, ವಾಹನ ಚಾಲಕರು, ಗ್ರಾಮಸ್ಥರು, ಎಲ್ಲರೂ ಅರ್ಥೈಸಿಕೊಂಡು, ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರವನ್ನು ಸ್ವಚ್ಛವಾಗಿಸೋಣ ಇನ್ನಷ್ಟು ಪವಿತ್ರ ಕ್ಷೇತ್ರವನ್ನಾಗಿ ಮಾಡುವ ಎಂದು ಆಡಳಿತ ಮಂಡಳಿ ಮಾಧ್ಯಮದ ಜೊತೆ ಭಗವದ್ಭಕ್ತರಿಗೆ ತಿಳಿಸಿದ್ದಾರೆ.

Post a Comment

Previous Post Next Post