ದಿ.ಪ್ರದೀಪ್ ಬಾಕಿಲರವರ ಆತ್ಮಕ್ಕೆ ಶಾಂತಿ ಕೋರಿ ಶ್ರದ್ಧಾಂಜಲಿ ಸಭೆ.

ಕಡಬ; ವೃತ್ತಿಯಲ್ಲಿ ಶಿಕ್ಷಕರಾಗಿದ್ದ ದಿ.ಪ್ರದೀಪ್ ಬಾಕಿಲರವರಿಗೆ ಡಿ, 14ರ ಶನಿವಾರ ಸಂಜೆ 4 ಗಂಟೆಗೆ ಅಲಂಕಾರು ಸಿ.ಎ,ಬ್ಯಾಂಕಿನ ದೀನ ದಯಾಳ್ ಸಭಾಂಗಣದಲ್ಲಿ ಜೇಸಿಐ ಅಲಂಕಾರು ಮತ್ತು ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಸಾರ್ವಜನಿಕವಾಗಿ ಆತ್ಮಕ್ಕೆ ಶಾಂತಿ ಕೋರಿ ಶ್ರದ್ದಾಂಜಲಿ ಸಭೆ ನಡೆಸಲಾಗುವುದು ಎಂದು ಸಂಘಟಕರು ಮಾದ್ಯಮಕ್ಕೆ ತಿಳಿಸಿದ್ದಾರೆ.
ಕಡಬ ತಾಲೂಕಿನ ಆಲಂಕಾರು ಗ್ರಾಮದ ಬಾಕಿಲ ನಿವಾಸಿ ವೃತ್ತಿಯಲ್ಲಿ ಶಿಕ್ಷಕರಾಗಿದ್ದ ಪ್ರದೀಪ್ ಬಾಕಿಲ(43) ಹೃದಯಾಘಾತದಿಂದ ನಿಧನ ಹೊಂದಿದ್ದರು .
ಮೃತರು  ಗೋಳಿತೊಟ್ಟು ಶಾಂತಿನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಪ್ರಭಾರ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಆಲಂಕಾರು ಕ್ಲಸ್ಟರ್ ಸಿ.ಆರ್.ಪಿಯಾಗಿ ಸೇವೆ ಸಲ್ಲಿಸಿದ್ದ ಮೃತರು ಜೆಸಿಐ ಸಂಸ್ಥೆಯ ತರಬೇತುದಾರರಾಗಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯಕ್ರಮ ನೀಡುತ್ತಿದ್ದರು. ಮಾತ್ರವಲ್ಲದೆ ಒಬ್ಬ ಉತ್ತಮ ಕಾರ್ಯಕ್ರಮ ನಿರೂಪಕರಾಗಿ ಸಾರ್ವಜನಿಕ ವಲಯದಲ್ಲಿ ಗುರುತಿಸಿಕೊಂಡಿದ್ದರು, ಮೃತರು ಪತ್ನಿ ಪೆರಾಬೆ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಹೇಮಲತಾ, ಪುತ್ರ, ಪುತ್ರಿಯನ್ನು,ಹಾಗೂ ಅಪಾರ ಬಂಧು ಮಿತ್ರರರನ್ನು ಅಗಲಿದ್ದಾರೆ.

Post a Comment

Previous Post Next Post