ತಾಲೂಕಿನ ಗಡಿ ಭಾಗದಲ್ಲಿ ಕಸದ ರಾಶಿ: ತ್ಯಾಜ್ಯದ ಉಸ್ತುವಾರಿ ಯಾರಿಗೆ? ಕೊಯಿಲ & ಹಿರೆಬಂಡಾಡಿ ಕಸ ಸಮರ..!

ಕೊಯ್ಲಿ; ಕಡಬ ತಾಲೂಕು,ಕೊಯ್ಲಿಲ ಗ್ರಾಮ ಹಾಗೂ ಪುತ್ತೂರು ತಾಲೂಕು ಹಿರೇಬಂಡಾಡಿ ಗ್ರಾಮದ ಗಡಿ ಸೇರುವ ಜಾಗ ಒಂದಿದೆ,
ಅದೇ ಗಂಡಿಬಾಗಿಲು ಶಾಲೆಯಿಂದ ಬಲಕ್ಕೆ ತಿರುಗಿ ಹೋಗುವಾಗ ಬಡ್ಡಮೆ ಅಂತ ಕರೀತಾರೆ. ಗಂಡಿ ಬಾಗಿಲು ಇಂದ ಬೊಳುಮ್ಬುಡ ತೆರಳುವ ರಸ್ತೆ.
ರಸ್ತೆ ಬದಿಯಲ್ಲಿ ಸರಕಾರಿ ಜಾಗದಲ್ಲಿ ವಾಹನಗಳಲ್ಲಿ ಕಸದ ರಾಶಿಯನ್ನು ತಂದು ಸುರಿಯುತ್ತಾರೆ.
ರಪಕ್ಕ ನೋಡುವಾಗ ಗ್ರಾಮ ಪಂಚಾಯತ್ ನವರು ಹೊಸ ಕಸ ವಿಲೇವಾರಿ ಮಾಡಲು ಚಿಕ್ಕ ಕೌಂಟರ್ ಏನಾದರೂ ಓಪನ್ ಮಾಡಿದರೋ ಎಂದು ಅನಿಸುತ್ತಿದೆ.




ಕಸದ ರಾಶಿಯಲ್ಲಿ ಬೇರೇನಿಲ್ಲ ಪ್ಲಾಸ್ಟಿಕ್ ನೀರಿನ ಬಾಟಲ್ ಗಳು, ಪ್ಲಾಸ್ಟಿಕ್ ಗೋಣಿಚೀಲಗಳು, ಊಟಕ್ಕೆ ಉಪಯೋಗ ಮಾಡಿದ ತಟ್ಟೆಗಳು,ಊಟಕ್ಕೆ ಉಪಯೋಗಿಸಿದ ಉಳಿದ ಆಹಾರ, ಪರಿಸರವೆಲ್ಲಾ ದುರ್ಗಂಧ ಪರಿಮಳ ಸೂಸುತ್ತಿದೆ. ನಾಯಿಗಳು ಕಾಡುಪ್ರಾಣಿಗಳು ಕಸದ ರಾಶಿಯಿಂದ ತಟ್ಟೆಗಳನ್ನು,ಲೋಟಗಳನ್ನು, ಉಳಿದ ಆಹಾರಗಳನ್ನು ರಸ್ತೆಗೆ ತಂದು ಹಾಕುತ್ತಿವೆ.
ಸರಕಾರಿ ಜಾಗದಲ್ಲಿ ಕಸ ಹಾಕಿದ್ದು ನಮಗೇನು ಎಂಬಂತೆ ಎಲ್ಲರೂ ಅದೇ ರಸ್ತೆಯಲ್ಲಿ ಮೂಗಿಗೆ ಕೈ ಹಿಡಿದು ಹೋಗುತ್ತಾರೆ. 
ಈ ವಿಚಾರವಾಗಿ ಎರಡು ಗ್ರಾಮದ ಅಧ್ಯಕ್ಷರಿಗೆ ಫೋನ್ ಮಾಡಿ ನೋಡಿ ಸ್ವಾಮಿ ಇಲ್ಲಿ ಕಸ ಹಾಕಿದ್ದಾರೆ ಎಂದು ಹೇಳಿದಾಗ. 
ಕಡಬ ತಾಲೂಕು ಕೊಯ್ಲ ಗ್ರಾಮದ ಅಧ್ಯಕ್ಷರು ತಕ್ಷಣಕ್ಕೆ ಗಂಗಾಧರ ಎಂಬುವರನ್ನು ಕಳಿಸಿಕೊಟ್ಟರು ಗಂಗಾಧರ ಅವರು ಬೈಕಲ್ಲಿ ಬುರ್ರನೇ ಬಂದ್ರು , ಬಂದವರೇ ಅಧ್ಯಕ್ಷರಿಗೆ ಒಂದು ಫೋನ್ ಹಾಯಿಸುತ್ತಾರೆ ಫೋನಿನಲ್ಲಿ ವಿವರಿಸುತ್ತಾರೆ ಕಸ ಎರಡು ಪಿಕಪ್ ತಂದು ಸುರಿದಿದ್ದಾರೆ ಬೇರೇನೂ ಇಲ್ಲ ತಟ್ಟೆ, ಲೋಟ, ಪಾಟೆ, ಹೀಗೆ ಸಂಭಾಷಣೆ ಮಾಡಿದ ಗಂಗಾಧರ ಅವರ ಜೊತೆ
ನಮ್ಮ ಚರ್ಚೆಗಳು ಎಲ್ಲಾ ನಡೆದವು ಕೊನೆಯಲ್ಲಿ ಇದು ಕೊಯ್ಲ ಗ್ರಾಮಕ್ಕೆ ಈ ಭಾಗ ಸೇರಲ್ಲ ಎಂದು ಗಂಗಾಧರ ಅವರು ತೀರ್ಪು ನೀಡುತ್ತಾರೆ. 
ಇನ್ನೇನು ಮಾಡೋದು ಅಲ್ಲಿಂದಲೇ ಪುತ್ತೂರು ತಾಲೂಕು ಹಿರೇಬಂಡಾಡಿ ಗ್ರಾಮದ ಅಧ್ಯಕ್ಷರಿಗೆ ಫೋನ್ ಮಾಡಿದೆವು ಅವರು ಹೇಳುವ ಹಾಗೆ ಅದು ಹಿರೇಬಂಡಾಡಿ ಗ್ರಾಮಕ್ಕೆ ಬರುವುದಿಲ್ಲ. ಅದು ಕೊಯ್ಲಗ್ರಾಮ.

ನಮ್ಮದು ಕಟ್ಟ ಕಡೆಯ ಪ್ರಶ್ನೆ ಈ ಎರಡು ಗ್ರಾಮದ ಗಡಿ ಭಾಗದಲ್ಲಿ ಸುರಿದ ಕಸದ ಸ್ವಚ್ಛತೆ 
ಉಸ್ತುವಾರಿ ಹೊಣೆ ಯಾರದ್ದು? ಇದನ್ನು ಸ್ವಚ್ಛ ಮಾಡಿ ಆ ಭಾಗದಲ್ಲಿ ಸಂಚರಿಸುವ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವವರು ಯಾರು? 
ಅಲ್ಲ ಸ್ವಾಮಿ ಸರ್ಕಾರಿ ಜಾಗದಲ್ಲಿ ಈ ರೀತಿ ಕಸ ಸುರಿಯುತ್ತಿದ್ದಾರಲ್ವ , ಅದರಿಂದ ತಮ್ಮ ತಮ್ಮ ಮನೆಯಲ್ಲಿ ಅದನ್ನು ಸುರಿದರೆ ಒಳ್ಳೇದಲ್ಲವೇ?
ಈ ಕಸದ ರಾಶಿಯನ್ನ ತೆರವು ಮಾಡಲು ಹಾಗೂ ಈ ಗಡಿ ವಿವಾದವನ್ನು ಬಗೆಹರಿಸಲು ಇನ್ನೆಷ್ಟು ದಿನಗಳು ಅಥವಾ ತಿಂಗಳುಗಳು ಬೇಕಾಗಬಹುದು ಎಂದು ಕಾದುನೋಡಬೇಕಾಗಿದೆ.

Post a Comment

Previous Post Next Post