ಬೆಂಗಳೂರು ಮಂಗಳೂರು ರಾಷ್ಟ್ರೀಯಹೆದ್ದಾರಿ ಪೆರಿಯಶಾಂತಿಎಂಬಲ್ಲಿ ಕೋತಿ ಇಂದ ಜನರ ಮೇಲೆ ಧಾಳಿ.

ನೆಲ್ಯಾಡಿ;ಧರ್ಮಸ್ಥಳ- ಕುಕ್ಕೆ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಕೋತಿ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರ ಮೇಲೆ ದಾಳಿ ಮಾಡುತ್ತಿದೆ ಎಂದು ಸಾರ್ವಜನಿಕರು ಮಾಹಿತಿ ನೀಡಿದ್ದಾರೆ.
ಧರ್ಮಸ್ಥಳ- ಕುಕ್ಕೆ ಸುಬ್ರಹ್ಮಣ್ಯ ಕ್ಕೆ ಹೋಗುವ ರಾಷ್ಟೀಯಹೆದ್ದಾರಿ ಪೆರಿಯಶಾಂತಿ ಪರಿಸರದಲ್ಲಿ ಕಳೆದ ಒಂದು ವಾರದಿಂದ ಕೋತಿಯೊಂದು ಪ್ರಯಾಣಿಕರನ್ನು ಗುರಿಯಾಗಿಸಿ ದಾಳಿಮಾಡಿ ಕಚ್ಚಿ ಗಾಯ ಗೊಳಿಸುತ್ತಿರುವ ಬಗ್ಗೆ ತಿಳಿದುಬಂದಿದೆ.
ಅರಣ್ಯ ಇಲಾಖೆ ನಿಯಮ ಪ್ರಕಾರ ಕಾಡು ಪ್ರಾಣಿಗಳಿಗೆ ಯಾವುದೇ ಆಹಾರ ಪದಾರ್ಥಗಳನ್ನು ನೀಡಬಾರದು.ಎಂದು
ಇಲಾಖೆ ಸಾರ್ವಜನಿಕರ ಗಮನಕ್ಕೆ ಸೂಚನಾ ಪಲಕ ಅಳವಡಿಸಿದ್ದಾರೆ.
ಕುಕ್ಕೆಗೆ ,ಧರ್ಮಸ್ಥಳ ತೆರಳುವ ಭಕ್ತರು ಕೋತಿಗಳಿಗೆ ತಾವು ತಂದ ಆಹಾರ ನೀಡುತ್ತಾರೆ.
ಇದೀಗ ಆಹಾರ ಸಿಗದೇ ಇದ್ದಾಗ ದಾಳಿ ಮಾಡುತ್ತಿದೆ.
ಆದ್ದರಿಂದ ಸಾರ್ವಜನಿಕರು ಈ ಬಗ್ಗೆ ಗಮನ ಕೊಡಬೇಕು.
ಕಳೆದ ಎರಡು ದಿನಗಳಲ್ಲಿ ಇಂತಹ ಮೂರು ಘಟನೆ ನಡೆದಿದ್ದು. ಸಂಬಂಧ ಪಟ್ಟ ಅರಣ್ಯಇಲಾಖೆಯವರು ಇದರ ಬಗ್ಗೆ ಗಮನಹರಿಸಿ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಇದನ್ನು ನಿರ್ಲಕ್ಷಿಸಿದರೆ ಅಪಾಯಕಾರಿಯಾಗಿ ಇನ್ನಷ್ಟು ಜನರ ಮೇಲೆ ಧಾಳಿ ಮಾಡುವ ಸಾಧ್ಯತೆಗಳಿವೆ ಎಂದು ಸಾರ್ವಜನಿಕರು ಮಾಧ್ಯಮದ ಮೂಲಕ ಮನವಿ ಮಾಡಿದ್ದಾರೆ.

Post a Comment

Previous Post Next Post