ನೆಲ್ಯಾಡಿ;ಧರ್ಮಸ್ಥಳ- ಕುಕ್ಕೆ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಕೋತಿ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರ ಮೇಲೆ ದಾಳಿ ಮಾಡುತ್ತಿದೆ ಎಂದು ಸಾರ್ವಜನಿಕರು ಮಾಹಿತಿ ನೀಡಿದ್ದಾರೆ.
ಧರ್ಮಸ್ಥಳ- ಕುಕ್ಕೆ ಸುಬ್ರಹ್ಮಣ್ಯ ಕ್ಕೆ ಹೋಗುವ ರಾಷ್ಟೀಯಹೆದ್ದಾರಿ ಪೆರಿಯಶಾಂತಿ ಪರಿಸರದಲ್ಲಿ ಕಳೆದ ಒಂದು ವಾರದಿಂದ ಕೋತಿಯೊಂದು ಪ್ರಯಾಣಿಕರನ್ನು ಗುರಿಯಾಗಿಸಿ ದಾಳಿಮಾಡಿ ಕಚ್ಚಿ ಗಾಯ ಗೊಳಿಸುತ್ತಿರುವ ಬಗ್ಗೆ ತಿಳಿದುಬಂದಿದೆ.
ಅರಣ್ಯ ಇಲಾಖೆ ನಿಯಮ ಪ್ರಕಾರ ಕಾಡು ಪ್ರಾಣಿಗಳಿಗೆ ಯಾವುದೇ ಆಹಾರ ಪದಾರ್ಥಗಳನ್ನು ನೀಡಬಾರದು.ಎಂದು
ಇಲಾಖೆ ಸಾರ್ವಜನಿಕರ ಗಮನಕ್ಕೆ ಸೂಚನಾ ಪಲಕ ಅಳವಡಿಸಿದ್ದಾರೆ.
ಕುಕ್ಕೆಗೆ ,ಧರ್ಮಸ್ಥಳ ತೆರಳುವ ಭಕ್ತರು ಕೋತಿಗಳಿಗೆ ತಾವು ತಂದ ಆಹಾರ ನೀಡುತ್ತಾರೆ.
ಇದೀಗ ಆಹಾರ ಸಿಗದೇ ಇದ್ದಾಗ ದಾಳಿ ಮಾಡುತ್ತಿದೆ.
ಆದ್ದರಿಂದ ಸಾರ್ವಜನಿಕರು ಈ ಬಗ್ಗೆ ಗಮನ ಕೊಡಬೇಕು.
إرسال تعليق