ಸುಬ್ರಹ್ಮಣ್ಯ ರೋಟರಿ ವತಿಯಿಂದ ನಿರಂತರ ಸಮಾಜ ಸೇವಾ ಕಾರ್ಯ ಶ್ಲಾಘನೀಯ. ಎ.ಜಿ. ವಿನಯ್ ಕುಮಾರ್.

ಸುಬ್ರಹ್ಮಣ್ಯ ಜ.7: ರೋಟರಿ ಅಂತರಾಷ್ಟ್ರೀಯ ಜಿಲ್ಲೆ 31 81 ವಲಯ 5ರ ಸುಬ್ರಹ್ಮಣ್ಯ ರೋಟರಿ ಕ್ಲಬ್ಬಿ ನಲ್ಲಿ ಕಳೆದ ಜುಲೈಯಿಂದ ಅಧ್ಯಕ್ಷ ಚಂದ್ರಶೇಖರ್ ನಾಯರ್ ಅವರ ಸಾರಥ್ಯದಲ್ಲಿ ನಿರಂತರವಾಗಿ ಸಮಾಜ ಸೇವಾ ಕಾರ್ಯಗಳು ನಡೆಯುತ್ತಿದ್ದು, ಅಶಕ್ತ ಜನರಿಗೆ ಸ್ವಾಭಿಮಾನದ ಬದುಕು ನೀಡುವಲ್ಲಿ ಸಹಾಯ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಅಗತ್ಯ ಮಾಹಿತಿ ಕಾರ್ಯಕ್ರಮಗಳು ,ಶಾಲೆ ಹಾಗೂ ಅಂಗನವಾಡಿಗಳಿಗೆ ಅಗತ್ಯತೆಯ ಕೊಡುಗೆಗಳು ,
ಸಮಾಜದಲ್ಲಿ ಮಹಿಳೆಯರಿಗೆ ಸ್ವಾವಲಂಬನೆ ಬದುಕನ್ನ ನಡೆಸುವಲ್ಲಿ ಪ್ರೋತ್ಸಾದೊಂದಿಗೆ ಸಹಾಯ, ಉಚಿತ ಆರೋಗ್ಯ ಶಿಬಿರಗಳು ,ಕುಕ್ಕೆ ಕ್ಷೇತ್ರದ ನಿರಂತರ ಸ್ವಚ್ಛತಾ ಕಾರ್ಯಗಳು, ಇತ್ಯಾದಿ ಸಮಾಜಮುಖಿ ಕಾರ್ಯಕ್ರಮಗಳನ್ನ ಮಾಡುತ್ತ ಬಂದಿರುವುದು ಶ್ಲಾಘನೀಯ, ಎಂದು ರೋಟರಿ ವಲಯ 5ರ ಸಹಾಯಕ ಗವರ್ನರ್ ವಿನಯ್ ಕುಮಾರ್, ನುಡಿದರು.
ಸೋಮವಾರ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದಲ್ಲಿ ನಡೆದ ರೋಟರಿ ವಲಯ5 ರ ಎಲ್ಲಾ ಕ್ಲಬ್ಬುಗಳ ಪ್ರಗತಿ ಪರಿಶೀಲನ ಸಭೆಯಲ್ಲಿ ಅವರು ಮಾತನಾಡಿದರು. ವೇದಿಕೆಯಲ್ಲಿ ವಲಯ 5ರ ಸಹಾಯಕ ಗವರ್ನರ್ ಗಳಾದ ಸೂರ್ಯನಾಥ ಆಳ್ವ, ಹರ್ಷಕುಮಾರ್ ರೈ ,ವಲಯ ಸೇನಾಧಿಕಾರಿಗಳಾದ ಪ್ರಭಾಕರ ನಾಯರ್, ವಿಶ್ವನಾಥ ನಡುತೋಟ, ಮುರಳಿದ ರೈ ,ಸುಬ್ರಹ್ಮಣ್ಯ ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಶೇಖರ ನಾಯರ್ ಉಪಸ್ಥಿತರಿದ್ದರು. ಪ್ರಗತಿ ಪರಿಶೀ ಲನ ಸಭೆಯಲ್ಲಿ ಸುಳ್ಯ, ಪುತ್ತೂರು, ಬೆಳ್ಳಾರೆ ಯ ವಿವಿಧ ಕ್ಲಬ್ಗಳ ಅಧ್ಯಕ್ಷ, ಕಾರ್ಯದರ್ಶಿ, ಹಾಗೂ ಪದಾಧಿಕಾರಿಗಳು ಹಾಜರಿದ್ದರು.

Post a Comment

Previous Post Next Post