ಸುಬ್ರಹ್ಮಣ್ಯ ಜ.4: ಸುಬ್ರಹ್ಮಣ್ಯ ರೋಟರಿ ಕ್ಲಬ್ಬಿನವರು ಬೆಂಗಳೂರು ರೋಟರಿ ಜಿಲ್ಲೆ 3192ರ ಜಾಲಹಳ್ಳಿ ರೋಟರಿ ಕ್ಲಬ್ ಮೂಲಕ ಕುಮಾರಸ್ವಾಮಿ ವಿದ್ಯಾಲಯದ 400 ವಿದ್ಯಾರ್ಥಿನಿಯರಿಗೆ ಹದಿ ಹರೆಯದ ಶಿಕ್ಷಣ ಮಾಹಿತಿ ಹಾಗೂ ಸಾನಿಟರಿ ಪ್ಯಾಡ್ ಗಳನ್ನ ಗುರುವಾರ ವಿತರಣೆ ಮಾಡಲಾಯಿತು.ಬೆಂಗಳೂರು ಚಾಲಹಳ್ಳಿ ರೋಟರಿ ಕ್ಲಬ್ಬಿನ ಸಮುದಾಯ ವಿಭಾಗದ ನಿರ್ದೇಶಕಿ ರಮಣಿ ಉಪ್ಪಲ್ ಅವರು ವಿದ್ಯಾರ್ಥಿನಿಯರಿಗೆ ಹದಿಹರಯದ ಶಿಕ್ಷಣದ ಬಗ್ಗೆ ಹಾಗೂ ಸುರಕ್ಷತೆಯ ಕುರಿತು ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಜಾಲಹಳ್ಳಿ ರೋಟರಿ ಕ್ಲಬ್ಬಿನವರು ಕೊಡ ಮಾಡಿದ 400 ಸ್ಯಾನಿಟರಿ ಪ್ಯಾಡ್ ಗಳನ್ನು ವಿದ್ಯಾರ್ಥಿನಿಯರಿಗೆ ನೀಡಲಾಯಿತು.
ಸುಬ್ರಹ್ಮಣ್ಯ ರೋಟರಿ ವತಿಯಿಂದ ಹದಿಹರೆಯದ ವಿದ್ಯಾರ್ಥಿನಿಯರಿಗೆ ಮಾಹಿತಿ ಹಾಗೂ ಪ್ಯಾಡ್ ವಿತರಣೆ.
Newspad
0
Premium By
Raushan Design With
Shroff Templates
إرسال تعليق