ಪಂಜ ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್, ಪಂಚಶ್ರೀ ಜೀವರಕ್ಷಕ ಆಂಬುಲೆನ್ಸ್ ಐದನೇ ವರ್ಷದ ಪಾದಾರ್ಪಣೆ ಪ್ರಯುಕ್ತ 65 ಕೆ. ಜಿ.ವಿಭಾಗದ ಸೂರ್ಯಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟ ಪದಗ್ರಹಣ ಹಾಗೂ ಸನ್ಮಾನ ಸಮಾರಂಭ ಜ.04,ರಂದು ಪಂಜದಲ್ಲಿ ನಡೆಯಿತು.
ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ಬಗ್ಗೆ ಗಣ್ಯರಿಂದ ಪ್ರಶಂಸೆ;
ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ಕ್ರೀಡೆ ಮಾತ್ರವಲ್ಲದೆ ನಿರಂತರವಾಗಿ ಸಮಾಜಮುಖಿ ಕಾರ್ಯಗಳನ್ನು ಮಾಡಿಕೊಂಡು ಬಂದಿದೆ.
ಪಂಜ ಹಾಗೂ ಸುತ್ತಮುತ್ತಲಿನ ಹಳ್ಳಿ ಜನರಿಗೆ ಅನುಕೂಲಕ್ಕೆ ಐದು ವರ್ಷದಿಂದ ಪಂಚಶ್ರೀ ಜೀವರಕ್ಷಕ ಆಂಬುಲೆನ್ಸ್ ಸೇವೆ ನೀಡುತ್ತಬಂದಿದ್ದಾರೆ.ಒಂದೇ ವರ್ಷದಲ್ಲಿ ನಲವತ್ತಕ್ಕೂ ಹೆಚ್ಚು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಿದ್ದಾರೆ.
ಸುಳ್ಯ ತಾಲೂಕು ಸೇರಿದಂತೆ ಜಿಲ್ಲೆಯಾದ್ಯಂತ ನಿರಂತರವಾಗಿ ಉತ್ತಮ ಕಾರ್ಯಗಳನ್ನು ಮಾಡುತ್ತುವ ಬರುತ್ತಿರುವ ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ಯುವಕರ ತಂಡದ ಬಗ್ಗೆ ಊರ ಪರವೂರ ಗಣ್ಯರು,ಜನಸಾಮಾನ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಜನವರಿ 04 ರಂದು ,ಕ್ರೀಡೆ, ಮನೋರಂಜನೆಗಾಗಿ ಮ್ಯಾಟ್ ಕಬಡ್ಡಿ ಪಂದ್ಯಾಟ ಆಯೋಜಿಸಿದ್ದರು. ಈ ಸಂದರ್ಭದಲ್ಲಿ ಪದಗ್ರಹಣ ಹಾಗೂ ಸನ್ಮಾನ ಸಮಾರಂಭ ನಡೆಯಿತು.
ಸಮಾರಂಭದ ಅಧ್ಯಕ್ಷತೆಸ್ಥಾನವನ್ನು ಪವನ್ ಪಲ್ಲತ್ತಡ್ಕ, ಅಧ್ಯಕ್ಷರು, ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ವಹಿಸಿದ್ದರು, ರಾಕೇಶ್ ಮಲ್ಲಿ, ಚೇರ್‌ಮೆನ್.ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಬೆಂಗಳೂರು ಅವರು ದೀಪಬೆಳಗಿಸುವುದರ ಮೂಲಕ ಸಮಾರಂಭಕ್ಕೆ ಚಾಲನೆ ನೀಡಿದರು.
ಪ್ರಮಾಣವಚನ ಬೋಧನೆ : ವಿಜಯಕುಮಾರ್ ಉಬರಡ್ಕ, ಅಧ್ಯಕ್ಷರು, ಯುವಜನ ಸಂಯುಕ್ತ ಮಂಡಳಿ (ರಿ.) ಸುಳ್ಯ,ಸನ್ಮಾನಿಸುವವರು :
ಶ್ರೀ ಶ್ರೇಯಾನ್ಸ್‌ಕುಮಾರ್ ಶೆಟ್ಟಿಮೂಲೆ, ಪ್ರಗತಿಪರ ಕೃಷಿಕರು ಪಂಜ
ಮುಖ್ಯ ಅತಿಥಿಗಳಾಗಿ ಶ್ರೀಮತಿ ವಿಜಯಲಕ್ಷ್ಮೀ ಜಲಕದಹೊಳೆ, ಅಧ್ಯಕ್ಷರು, ಪಂಜ ಗ್ರಾಮ ಪಂಚಾಯತ್, ಮಹೇಶ್ ಕುಮಾರ್ ಕರಿಕ್ಕಳ, ಅಧ್ಯಕ್ಷರು, ಕಲ್ಮಡ್ಕ ಗ್ರಾಮ ಪಂಚಾಯತ್
ಹರ್ಷಿತ್ ಕಾರ್ಜ, ಅಧ್ಯಕ್ಷರು, ಬಳ ಗ್ರಾಮ ಪಂಚಾಯತ್,ಚಂದ್ರಹಾಸ ರೈ, ಕಾರ್ಯಾಧ್ಯಕ್ಷರು, ದ.ಕ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ,ಪುರುಷೋತ್ತಮ ಪೂಜಾರಿ, ಗೌರವ ಸಲಹೆಗಾರರು, ದ.ಕ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್,ಶಿವರಾಮ ಏನೆಕಲ್ಲು, ಅಧ್ಯಕ್ಷರು, ನಿರ್ಣಾಯಕರ ಮಂಡಳಿ ದ.ಕ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್,ಮಾಧವ ಬಿ.ಕೆ, ಅಧ್ಯಕ್ಷರು, ಸುಳ್ಯ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಶನ್,ಮಂಜುನಾಥ್ ಎನ್, ವಲಯಾರಣ್ಯಾಧಿಕಾರಿಗಳು ಸುಳ್ಯ ವಲಯ ,ಶ್ರೀಮತಿ ಸಂಧ್ಯಾ, ವಲಯಾರಣ್ಯಾಧಿಕಾರಿಗಳು ಪಂಜ ವಲಯ
إرسال تعليق