ಅಧಿಕಾರಿಗಳೇ ಸ್ವಲ್ಪ ಇತ್ತ ಗಮನಿಸಿ ನಮ್ಮ ಸುತ್ತಮುತ್ತ ಭಿಕ್ಷುಕರಿದ್ದಾರೆ.ಭಿಕ್ಷಾಟನೆ ಮಾಡುವುದು ಕಾನೂನು ರೀತಿ ಅಪರಾಧ ಅಲ್ಲವೇ..?

ಕುಕ್ಕೆ ಸುಬ್ರಹ್ಮಣ್ಯ; ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಎಲ್ಲರೂ ಭಕ್ತರೇ, ಶ್ರೀ ದೇವರ ಮುಂದೆ ನಾವೆಲ್ಲ ಸಮಾನರು ನಾವೆಲ್ಲ ಒಂದೇ, ಒಂದಲ್ಲ ಒಂದು ರೀತಿಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವರ ಅನುಗ್ರಹದಿಂದ ನಾವೆಲ್ಲರೂ ಚೆನ್ನಾಗಿದ್ದೇವೆ ಶ್ರೀ ದೇವರ ಪ್ರಸಾದವನ್ನು ಸ್ವೀಕರಿಸುತ್ತೇವೆ. 
ಬಿಕ್ಷುಕರು, ಮಾನಸಿಕವಾಗಿ ತೊಂದರೆಗೊಳಗಾದವರು ನಮ್ಮ ಹಾಗೆ ಅವರು ಭಿಕ್ಷಾಟನೆ ಮಾಡಿ ಅವರ ಹೊಟ್ಟೆಪಾಡಿಗೆ ಒಂದಷ್ಟು ದುಡ್ಡು ಮಾಡುತ್ತಾರೆ, ಒಂದು ಹೊತ್ತಿನ ಊಟ ಮಾಡುತ್ತಾರೆ. 
ಮಾನವೀಯತೆ ,ಮನುಷ್ಯತ್ವದ ನೆಲೆಯಲ್ಲಿ ಕುಕ್ಕೆಗೆ ಬರುವ ಭಕ್ತರು ಭಿಕ್ಷುಕರಿಗೆ ದುಡ್ಡು ನೀಡುತ್ತಾರೆ. 

ಭಾರತ ದೇಶದ ಕಾನೂನಿನ ಪ್ರಕಾರ ಭಿಕ್ಷಾಟನೆ ಮಾಡುವುದು ಅಪರಾಧ.

ದೆಹಲಿ ಹೈಕೋರ್ಟ್ ಮಹತ್ವದ ತೀರ್ಪಿನಲ್ಲಿ ( ಹರ್ಷ್ ಮಂದರ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಮತ್ತು ಕಾರ್ನಿಕಾ ಸಾವ್ನಿ ವರ್ಸಸ್ ಯೂನಿಯನ್ ಆಫ್ ಇಂಡಿಯಾ ) 1959 ರ ಬಾಂಬೆ ಪ್ರಿವೆನ್ಶನ್ ಆಫ್ ಭಿಕ್ಷಾಟನೆ ಕಾಯಿದೆಯನ್ನು ಅಸಂವಿಧಾನಿಕ ಎಂದು ಪರಿಗಣಿಸಿದೆ , ಇದು ಆರ್ಟಿಕಲ್ 14 (ಕಾನೂನಿನ ಮುಂದೆ ಸಮಾನತೆ) ಅನ್ನು ಉಲ್ಲಂಘಿಸುತ್ತದೆ. ) ಮತ್ತು ಅನುಚ್ಛೇದ 21 (ಜೀವನದ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯ) ಬೇರಾವುದೇ ಜೀವನೋಪಾಯವನ್ನು ಹೊಂದಿರದ ವ್ಯಕ್ತಿಗಳ ಹಕ್ಕುಗಳನ್ನು ಹುಡುಕುವುದು ಜೀವನಾಂಶಕ್ಕಾಗಿ ಭಿಕ್ಷೆ. 1959ರ ಬಾಂಬೆ ಪ್ರಿವೆನ್ಶನ್ ಆಫ್ ಭಿಕ್ಷಾಟನೆ ಕಾಯಿದೆಯನ್ನು 1960ರಲ್ಲಿ ಕೇಂದ್ರ ಸರ್ಕಾರದ ತಿದ್ದುಪಡಿಯ ಮೂಲಕ ದೆಹಲಿಗೆ ವಿಸ್ತರಿಸಿದ ನಂತರ ದೆಹಲಿಯಲ್ಲಿ ಭಿಕ್ಷಾಟನೆಯನ್ನು ಕ್ರಿಮಿನಲ್ ಅಪರಾಧವನ್ನಾಗಿ ಮಾಡಲಾಯಿತು. ಈ ಕಾಯಿದೆಯು ಭಿಕ್ಷುಕನ ಮನೆಯಲ್ಲಿ ಮೊದಲ ಬಾರಿಗೆ ಮೂರು ವರ್ಷಗಳ ಬಂಧನದ ಶಿಕ್ಷೆಯನ್ನು ಸೂಚಿಸುತ್ತದೆ. ಭಿಕ್ಷಾಟನೆಗಾಗಿ ಶಿಕ್ಷೆಗೊಳಗಾದ 'ಅಪರಾಧಿಗಳು' ಮತ್ತು ವ್ಯಕ್ತಿಯನ್ನು ನಂತರದ ಅಪರಾಧಕ್ಕಾಗಿ 10 ವರ್ಷಗಳ ಕಾಲ ಬಂಧನದಲ್ಲಿಡಲು ಆದೇಶಿಸಬಹುದು.


ಬಿಕ್ಷಾಟನೆಯನ್ನು ನಿರ್ಮೂಲನೆ ಮಾಡಬೇಕಾದ  ಇಲಾಖೆಗಳ ಅಧಿಕಾರಿಗಳು ಎಲ್ಲಿದ್ದಾರೆ?

ಶ್ರೀಸಾಮಾನ್ಯರು ನೀಡುವ ಕಂದಾಯ ಹಾಗೂ ಅನೇಕ ತೆರಿಗೆಗಳಲ್ಲಿ ಭಿಕ್ಷಾಟನೆ ನಿರ್ಮೂಲನಕ್ಕಾಗಿ ಸರ್ಕಾರ ಸೆಸ್ ಮೂಲಕ ಹಣ ಸಂಗ್ರಹಿಸುತ್ತದೆ. ಪ್ರತಿ ವರ್ಷ ಸೆಸ್‌ನಿಂದ ಕೋಟ್ಯಂತರ ಹಣ ಸಂಗ್ರಹವಾಗುತ್ತದೆ. ಭಿಕ್ಷಾಟನೆ ನಿರ್ಮೂಲನೆ ಹಾಗೂ ಭಿಕ್ಷುಕರ ಪುನರ್ವಸತಿಗಾಗಿ ಸರ್ಕಾರ, ವಿವಿಧ ಕೌಶಲ ತರಬೇತಿ, ಸ್ವಉದ್ಯೋಗಕ್ಕೆ ಸಹಕಾರ, ನಿರ್ಗತಿಕ ಅರ್ಹರಿಗೆ ಗುತ್ತಿಗೆ ಆಧಾರ ಮೇಲೆ ಕೆಲಸಕ್ಕೆ ನೇಮಕ ಮಾಡಿಕೊಳ್ಳುವುದು.
ಪಿಂಚಣಿ ಮತ್ತು ಅಂಗವಿಕಲ ವೇತನ ಮೊದಲಾದ ಯೋಜನೆಗಳನ್ನು ಜಾರಿಗೊಳಿಸಿದೆ. ಸರ್ಕಾರ ಯೋಜನೆಗಳನ್ನು ಸಮರ್ಥವಾಗಿ ಅನುಷ್ಠಾನಗೊಳಿಸಬೇಕಾದ ಅಧಿಕಾರಿಗಳಿಗೆ ಮಾತ್ರ ಭಿಕ್ಷುಕರು ಕಾಣುವುದಿಲ್ಲ ಎಂಬುದೇ ವಿಷಾದದ ಸಂಗತಿ.

ಕುಕ್ಕೆ ಸುಬ್ರಹ್ಮಣ್ಯ ಶ್ರೀ ಕ್ಷೇತ್ರ ದಲ್ಲಿ ದಿನ ಕಳೆದಂತೆ ಭಿಕ್ಷುಕರಸಂಖ್ಯೆ ಹೆಚ್ಚಾಗುತ್ತಿದೆ.
ಕುಕ್ಕೆ ಸುಬ್ರಮಣ್ಯ ಶ್ರೀ ಕ್ಷೇತ್ರದಲ್ಲಿ ದಿನ ಕಳೆದಂತೆ ಬಿಕ್ಷುಕರ ಸಂಖ್ಯೆ ಹೆಚ್ಚಾಗುತ್ತಿದೆ ರಥಬೀದಿಯಲ್ಲಿ ಸಾಲಾಗಿ ಕುಳಿತುಕೊಂಡು ಭಿಕ್ಷೆ ಬೇಡುವುದು, ಕುಕ್ಕೆಗೆ ಬರುವ ಭಕ್ತರಿಗೆ ಅನುಕಂಪ ಬರುವ ರೀತಿಯಲ್ಲಿ ಪುಟ್ಟ ಮಕ್ಕಳನ್ನು ಅಂಗವಿಕಲರನ್ನು ಬಳಸಿಕೊಂಡು ಬಿಕ್ಷೆ ಬೇಡುವುದು ಕಂಡುಬರುತ್ತದೆ, ಮಾನಸಿಕ ಖಿನ್ನತೆಗೆ ಒಳಗಾಗಿರುವ ಒಬ್ಬ ವ್ಯಕ್ತಿ ವಿಚಿತ್ರ ಬಟ್ಟೆಗಳನ್ನ ಧರಿಸುವುದು, ಕುಕ್ಕೆಗೆ ಬರುವ ಭಕ್ತರ ಜೊತೆ ಅಸಭ್ಯ ರೀತಿಯಲ್ಲಿ ವರ್ತನೆ ಮಾಡುವುದು, ಬೈಯೊದು,ದೇವಸ್ಥಾನದ ಒಳಾಂಗಣ,ರಥಬೀದಿ ಇದ್ದಬದ್ದಲ್ಲಿ ತಿರುಗಾಡುವುದು ಕಂಡುಬರುತ್ತಿದೆ.
ಸಂಬಂಧಪಟ್ಟ ಇಲಾಖೆಯ ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಬೇಕು.
ಭಿಕ್ಷುಕರ ಹಾಗೂ ಮಾನಸಿಕ ಸಮಸ್ಯೆಗೆ ಒಳಗಾದ ವ್ಯಕ್ತಿಗಳ ರಕ್ಷಣೆ ಮಾಡ್ಬೇಕು. ಈ ರೀತಿ ಸಮಸ್ಯೆಗೆ ಒಳಗಾದವರಿಗೆ ಸರಕಾರದಿಂದ ಸಿಗುವ ಸೌಲಭ್ಯಗಳು ಸಿಗುವಂತೆ ಆಗಬೇಕು ಎಂಬುದು ನಮ್ಮ ಆಶಯ.


Post a Comment

Previous Post Next Post