ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಹೊರಗುತ್ತಿಗೆ ಕಂಪ್ಯೂಟರ್ ಇಂಜಿನಿಯರ್ ಭರತ್ ಎಂಬವರನ್ನು ವಜಾಗೊಳಿಸಿ ಸ್ವಿಸ್ ಶಾರ್ಪ್ ವಾಚ್ ಇನ್ವೆಸ್ಟಿಗೇಶನ್ ಸೆಕ್ಯುರಿಟಿ ಸರ್ವೀಸ್ ಪ್ರೈ.ಟಿ. LTD.ಸಂಸ್ಥೆಯಿಂದ ಆದೇಶ..!

ಕುಕ್ಕೆ ಸುಬ್ರಮಣ್ಯ ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಅವರಿಗೆ ಸಂಬಂಧಪಟ್ಟ ಕಂಪ್ಯೂಟರ್ ಗುಪ್ತ ಸಂಖ್ಯೆಗಳನ್ನು ಬಳಸಿ, ಟೆಂಡರ್ ಪ್ರಕ್ರಿಯೆಗಳ ವಿಶ್ವಾಸ ಘಾತಕ ಚಟುವಟಿಕೆ ತೊಡಗಿಕೊಂಡಿದ್ದ ಹೊರಗುತ್ತಿಗೆ ಕಂಪ್ಯೂಟರ್ ಇಂಜಿನಿಯರ್ ಭರತ್ ಎಂಬವರನ್ನು ವಜಾಮಾಡುವಂತೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತ್ತಗುಂಡಿ ಯವರು ಗುತ್ತಿಗೆ ಸಂಸ್ಥೆಗೆ ದೂರು ನೀಡಿದ ಮೇರೆಗೆ ಸಂಸ್ಥೆಯು ಸದ್ರಿ ಆರೋಪಿ ಇಂಜಿನಿಯರ್ ಭರತ್ ಎಂಬಾತನನ್ನು ಕೆಲಸದಿಂದ ವಜಾಗೊಳಿಸಿ ಆದೇಶಿಸಿದೆ ಎಂದು ತಿಳಿದು ಬಂದಿದೆ.
ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಹಲವಾರು ಹೊರ ಗುತ್ತಿಗೆ ಸಿಬ್ಬಂದಿಗಳು ಕರ್ತವ್ಯನಿರ್ವಹಿಸುತ್ತಿದ್ದು ನಿಯಮಬಾಹಿರವಾಗಿ ಕೆಲವೊಂದು ಗಂಭೀರ ಆರ್ಥಿಕ ವ್ಯವಹಾರ ಮತ್ತು ಖಾಯಂ ಸಿಬ್ಬಂದಿಗಳು ಮಾತ್ರ ಕರ್ತವ್ಯ ನಿರ್ವಹಿಸಬೇಕಾದ ಕೆಲವೊಂದು ಪ್ರಮುಖ ಆಡಳಿತಾತ್ಮಕ ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವುದು ಕಂಡುಬಂದಿರುತ್ತದೆ.
ಈ ಲೋಪ ದೋಷಗಳನ್ನು ಸರಿಪಡಿಸಬೇಕು ಎಂದು ಸಾರ್ವಜನಿಕ ಭಕ್ತಾಭಿಮಾನಿಗಳು ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.


Post a Comment

Previous Post Next Post