ಸೇವಾ ಮನೋಭಾವನೆಯಿಂದ ಯುವ ಜನಾಂಗದ ಬದುಕಿನಲ್ಲಿ ಶಿಸ್ತಿನ ಔನತ್ಯರೋವರ್ ಮತ್ತು ರೇಂಜರ್ ಬೀಳ್ಕೊಡುಗೆ ಸಮಾರಂಭದಲ್ಲಿ ಪ್ರಾಚಾರ್ಯ ಸೋಮಶೇಖರ್ ನಾಯಕ್ ಅಭಿಮತ.

ಸುಬ್ರಹ್ಮಣ್ಯ: ಸಮಾಜಮುಖಿಯಾದ ಸೇವಾ ಮನೋಭಾವನೆಯಿಂದ ಯುವ ಜನಾಂಗದ ಬದುಕಿನಲ್ಲಿ ಶಿಸ್ತಿನ ಔನತ್ಯ ಉಂಟಾಗುತ್ತದೆ.ಯುವ ಮನಸುಗಳು ಸದಾ ಸಾರ್ವಜನಿಕರಿಗೆ ಒಂದಲ್ಲ ಒಂದು ರೀತಿಯಾಗಿ ಸಹಕಾರ ಮಾಡುವ ಅಧಮ್ಯ ಮನಸ್ಥಿತಿಯನ್ನು ಹೊಂದಬೇಕಾದುದು ಅತ್ಯಗತ್ಯ.ವ್ಯಾಸಂಗದ ಅವಧಿಯಲ್ಲಿ ಬದುಕಿನ ಪಾಠವನ್ನು ಕಲಿಯಲು ರೋವರ್ ರೇಂಜರ್‌ನಂತಹ ಸಂಸ್ಥೆಗಳು ಪೂರಕ ವಾತಾವರಣ ಕಲಿಸುತ್ತದೆ.ವಿದ್ಯಾಸಂಸ್ಥೆಯಲ್ಲಿ ರೋವರ್ ರೇಂಜರ್ ಘಟಕದ ವಿದ್ಯಾರ್ಥಿಗಳು ನೆರವೇರಿಸಿದ ಅಪ್ರತಿಮ ಸೇವೆಯು ಸದಾ ನಮ್ಮ ಮನಸಲ್ಲಿ ಹಸಿರಾಗಿರುತ್ತದೆ.ಮುಂದೆ ಜೀವನದಲ್ಲಿ ಉನ್ನತಿ ಸಾಧಿಸಲು ತಮ್ಮ ಈ ಸೇವೆಯೂ ಅಡಿಗಲ್ಲಾಗಲಿದೆ ಎಂದು ಎಸ್‌ಎಸ್‌ಪಿಯು ಕಾಲೇಜಿನ ಪ್ರಾಚಾರ್ಯ ಸೋಮಶೇಖರ ನಾಯಕ್ ಹೇಳಿದರು.
 ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತದ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನ ರೋವರ್ ರೇಂಜರ್ ಘಟಕದ ಸೀನಿಯರ್ ರೋವರ್ ರೇಂಜರ್ ವಿದ್ಯಾರ್ಥಿಗಳಿಗೆ ಶನಿವಾರ ನಡೆದ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ರೋವರ್ ರೇಂಜರ್ ಘಟಕದ ವಿದ್ಯಾರ್ಥಿಗಳು ಸದಾ ಶಿಸ್ತು ಮತ್ತು ಸಂಯಮದಿAದ ಸೇವಾ ಕಾರ್ಯವನ್ನು ಕಳೆದ ಎರಡು ವರ್ಷಗಳಿಂದ ನೆರವೇರಿಸಿಕೊಂಡು ಬಂದಿರುವುದು ಶ್ಲಾಘನೀಯ.ನಿಮ್ಮ ಮುಂದಿನ ಜೀವನಕ್ಕೆ ಸಂಸ್ಥೆಯಲ್ಲಿ ಕಲಿತ ಜ್ಞಾನಗಳು ಮತ್ತು ಸೇವಾ ಮನೋಭಾವನೆಯು ದಾರಿದೀಪವಾಗಲಿ ಎಂದು ಹಾರೈಸಿದರು.
 ಹಿರಿಯ ಉಪನ್ಯಾಸಕಿ ರೇಖಾರಾಣಿ ಸೋಮಶೇಖರ್, ವಿದ್ಯಾರ್ಥಿ ಸಂಘದ ಸಂಚಾಲಕ ಜಯಪ್ರಕಾಶ್.ಆರ್, ಉಪನ್ಯಾಸಕರಾದ 
ಯೋಗಣ್ಣ ಎಂ.ಎಸ್, ಸೌಮ್ಯಾ ದಿನೇಶ್, ಸೌಮ್ಯಾ ಕೀರ್ತಿ, ಶ್ರುತಿ ಮುಖ್ಯಅತಿಥಿಗಳಾಗಿದ್ದರು. ರೇಂಜರ್ ಲೀಡರ್ ಸವಿತಾ ಕೈಲಾಸ್, ರೋವರ್ ಸ್ಕೌಟ್ ಲೀಡರ್ ಪ್ರವೀಣ್ ಎರ್ಮಾಯಿಲ್, ರೋವರ್ ವಿದ್ಯಾರ್ಥಿ ನಾಯಕ ಜೀವನ್, ರೇಂಜರ್ ವಿದ್ಯಾರ್ಥಿ ನಾಯಕಿ ರಶ್ಮಿ ವೇದಿಕೆಯಲ್ಲಿದ್ದರು.
 ಈ ಕಾರ್ಯಕ್ರಮದಲ್ಲಿ ರೋವರ್ ಮತ್ತು ರೇಂಜರ್ ಘಟಕದಲ್ಲಿ ಸಾಧನೆ ಮಾಡಿದ ಮತ್ತು ಉತ್ತಮ ರೋವರ್ ರೇಂಜರ್ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ರೇಂಜರ್ ಭೂಮಿಕಾ ಮಾನಾಡು ಕಾರ್ಯಕ್ರಮ ನಿರೂಪಿಸಿದರು. ರೇಂಜರ್ ವಿದ್ಯಾರ್ಥಿ ನಾಯಕಿ ಕೃತಿಕಾ ಸ್ವಾಗತಿಸಿದರು, ರೇಂಜರ್ ವಿದ್ಯಾರ್ಥಿ ನಾಯಕ ದಿಗಂತ್ ಕೊಂಡಾಲ ವಂದಿಸಿದರು.

Post a Comment

Previous Post Next Post