ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಪತ್ತೆಯಾದ ಬಿಕ್ಷುಕರನ್ನು ಸಾಮಾಜ ಕಲ್ಯಾಣ ಇಲಾಖೆ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಕಳುಹಿಸಿದ ಸುಬ್ರಹ್ಮಣ್ಯ ಗ್ರಾಮಪಂಚಾಯತ್.

ಕುಕ್ಕೆ ಸುಬ್ರಹ್ಮಣ್ಯ;ಸಾಮಾಜ ಕಲ್ಯಾಣ ಇಲಾಖೆ ನಿರಾಶ್ರಿತರ ಪರಿಹಾರ ಕೇಂದ್ರ ಅಧೀಕ್ಷಕರು(ಸುಪರಿಡೆಂಟ್)ಅಶೋಕ ಶೆಟ್ಟಿ.ಹಾಗೂ ಅವರ ತಂಡ ,ಸುಬ್ರಹ್ಮಣ್ಯ ಗ್ರಾಮಪಂಚಾಯತ್ ಅಬಿವೃದ್ಧಿ ಅಧಿಕಾರಿ ಮಹೇಶ್,ಕಾರ್ಯದರ್ಶಿ ಮೋನಪ್ಪ.ಹಾಗೂ ಸಿಬ್ಬಂದಿಗಳು,ದೇವಸ್ಥಾನದ ಭದ್ರತಾ ಸಿಬ್ಬಂದಿಗಳು ಫೆ.6 ರಂದು ಕಾರ್ಯಾಚರಣೆಗೆ ನಡೆಸಿದರು.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಪರಿಸರದಲ್ಲಿ ಸುಮಾರು 10 ಮಂದಿ ಭಿಕ್ಷುಕನ್ನು ಪತ್ತೆ ಹಚ್ಚಿ.ಮಂಗಳೂರುನಲ್ಲಿರುವ ಕರ್ನಾಟಕ ಸರಕಾರದ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾರೆ.


ಮಾಧ್ಯಮದ ಮೂಲಕ ಸುಬ್ರಹ್ಮಣ್ಯ ಗ್ರಾ.ಪಂ.ಸದಸ್ಯ ಹರೀಶ್ ಇಂಜಾಡಿ ಅವರನ್ನು ವಾರದ ಹಿಂದೆ ವಿಚಾರಿಸಿದಾಗ ಮಾದ್ಯಮಕ್ಕೆ ಸಂದರ್ಶನ ನೀಡಿದ್ದರು.
ಕುಕ್ಕೆ ಸುಬ್ರಮಣ್ಯ ಶ್ರೀ ಕ್ಷೇತ್ರದಲ್ಲಿ ದಿನ ಕಳೆದಂತೆ ಬಿಕ್ಷುಕರ ಸಂಖ್ಯೆ ಹೆಚ್ಚಾಗುತ್ತಿದೆ ರಥಬೀದಿಯಲ್ಲಿ ಸಾಲಾಗಿ ಕುಳಿತುಕೊಂಡು ಭಿಕ್ಷೆ ಬೇಡುವುದು, ಕುಕ್ಕೆಗೆ ಬರುವ ಭಕ್ತರಿಗೆ ಅನುಕಂಪ ಬರುವ ರೀತಿಯಲ್ಲಿ ಪುಟ್ಟ ಮಕ್ಕಳನ್ನು ಅಂಗವಿಕಲರನ್ನು ಬಳಸಿಕೊಂಡು ಬಿಕ್ಷೆ ಬೇಡುವುದು ಕಂಡುಬರುತ್ತದೆ, ಮಾನಸಿಕ ಖಿನ್ನತೆಗೆ ಒಳಗಾಗಿರುವ ಒಬ್ಬ ವ್ಯಕ್ತಿ ವಿಚಿತ್ರ ಬಟ್ಟೆಗಳನ್ನ ಧರಿಸುವುದು, ಕುಕ್ಕೆಗೆ ಬರುವ ಭಕ್ತರ ಜೊತೆ ಅಸಭ್ಯ ರೀತಿಯಲ್ಲಿ ವರ್ತನೆ ಮಾಡುವುದು, ಬೈಯೊದು,ದೇವಸ್ಥಾನದ ಒಳಾಂಗಣ,ರಥಬೀದಿ ಇದ್ದಬದ್ದಲ್ಲಿ ತಿರುಗಾಡುವುದು ಕಂಡುಬರುತ್ತಿದೆ. ಬಿಕ್ಷೆ ಬೇಡುವುದು ಕಾನೂನು ರೀತಿಯಲ್ಲಿ ಅಪರಾಧ,
ಸಂಬಂಧಪಟ್ಟ ಸಮಾಜ ಕಲ್ಯಾಣ ಇಲಾಖೆ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಗ್ರಾಮಪಂಚಾಯತ್ ಕಡೆಯಿಂದ ಪತ್ರಬರೆದು ಈ ಬಗ್ಗೆ ಶೀಘ್ರ ಕ್ರಮ ಕೈ ಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದರು.
ಭಿಕ್ಷುಕರ ಹಾಗೂ ಮಾನಸಿಕ ಸಮಸ್ಯೆಗೆ ಒಳಗಾದ ವ್ಯಕ್ತಿಗಳ  ರಕ್ಷಣೆ ಮಾಡ್ಬೇಕು. ಈ ರೀತಿ ಸಮಸ್ಯೆಗೆ ಒಳಗಾದವರಿಗೆ ಸರಕಾರದಿಂದ ಸಿಗುವ ಸೌಲಭ್ಯಗಳು ಸಿಗುವಂತೆ ಆಗಬೇಕು ಎಂದು ಸಾಮಾಜಿಕ ಕಳಕಳಿ ಇಂದ ಮಾಧ್ಯಮದ ಮೂಲಕ ಪ್ರಸಾರ ಮಾಡಿ ಅಧಿಕಾರಿಗಳ ಗಮನಕ್ಕೆ ತರುವ ಪ್ರಯತ್ನ ಮಾಡಿದ್ದೆವು.
ಫೆ.6ರಂದು ಸದ್ಯಕ್ಕೆ ಪತ್ತೆಯಾದ ನಿರಾಶ್ರಿತರನ್ನು ಸಮಾಜಸೇವಾ ಕಲ್ಯಾಣ ಇಲಾಖೆ ಕರೆದುಕೊಂಡು ಹೋಗಿದ್ದಾರೆ.


Post a Comment

Previous Post Next Post