ನೆಲ್ಯಾಡಿ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಸಕ್ರಿಯ ರಾಜಕಾರಣಿ, ಹಲವು ಸಂಘ ಸಂಸ್ಥೆಗಳ ಮೂಲಕ ಸಾಮಾಜಿಕವಾಗಿ ಗುರುತಿಸಿಕೊಂಡಿರುವ ನೆಲ್ಯಾಡಿ ಸಜ್ಜನ ಸಹಕಾರಿ ಬಾಲಕೃಷ್ಣ ಬಿ.ಬಾಣಜಾಲ್ ರವರು ಅಧ್ಯಕ್ಷರಾಗಿ ಅವಿರೋದವಾಗಿ ಆಯ್ಕೆಗೊಂಡರು. ಉಪಾಧ್ಯಕ್ಷರಾಗಿ ರವಿಚಂದ್ರ ಗೌಡ ಹೊಸವಕ್ಲು ಆಯ್ಕೆಗೊಂಡರು
12ನಿರ್ದೇಶಕ ಸ್ಥಾನಗಳಿಗೆ ಅವಿರೋದ ಆಯ್ಕೆ ನಡೆದು 9ಸ್ಥಾನ ಸಹಕಾರ ಭಾರತಿ 3ಸ್ಥಾನ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ನಾಗೇಂದ್ರರವರು ಭಾಗವಹಿಸಿದರು ಕಾರ್ಯನಿರ್ವಹಣಾಧಿಕಾರಿ ದಯಕರ ರೈ ಸಹಕರಿಸಿದರು,ಎಸ್ ಸಿ ಡಿ ಸಿ ಸಿ ಬ್ಯಾಂಕ್ ನಿರ್ದೇಶಕ ಶಶಿ ಕುಮಾರ್ ರೈ ಬಾಲ್ಯೊಟ್ಟು, ಬ್ಯಾಂಕಿನ ನಿಕಟ ಪೂರ್ವ ಅಧ್ಯಕ್ಷರು ಪಟ್ಟೆ ಉಮೇಶ್ ಶೆಟ್ಟಿ, ನಿರ್ದೇಶಕರು ಗಳು, ಬ್ಯಾಂಕಿನ ಸಿಬ್ಬಂದಿ ಮತ್ತು ಹಲವು ಗಣ್ಯರು ಉಪಸ್ಥಿತರಿದ್ದರು.
Post a Comment