ದೊಂತಿಲ ಶ್ರೀ ಮಹಾವಿಷ್ಣು, ಸುಬ್ರಹ್ಮಣ್ಯಶ್ವರ ದೇವಸ್ಥಾನ ಷಡಾಧರ ಪ್ರತಿಷ್ಠೆ.... ದೇವಸ್ಥಾನ ಗಳ ಜೀರ್ಣೋದ್ದಾರದಲ್ಲಿ ಸಮರ್ಪಣ ಭಾವದಿಂದ ತೊಡಗಿಸಿಕೊಳ್ಳಿ,ಮಾಣಿಲ ಸ್ವಾಮಿ.

 *ನೆಲ್ಯಾಡಿ ದೊಂತಿಲ ಶ್ರೀ ಮಹಾವಿಷ್ಣು, ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಷಡಾಧರ ಪ್ರತಿಷ್ಠೆ -ಸಭಾಕಾರ್ಯಕ್ರಮ..*
   ದೇವಸ್ಥಾನಗಳ ಜೀರ್ಣೋದ್ದಾರ ಕಾರ್ಯದಲ್ಲಿ ಸಮರ್ಪಣಾ ಭಾವದಿಂದ ತೊಡಗಿಸಿ ಕೊಳ್ಳಿ....
  ಮಾಣಿಲ ಶ್ರೀ 
      
   ನೆಲ್ಯಾಡಿ ಕೌಕ್ರಾಡಿ ಗ್ರಾಮದ ದೊಂತಿಲ ಶ್ರೀ ಮಹಾ ವಿಷ್ಣು ಸುಬ್ರಮಣ್ಯ ದೇವಸ್ಥಾನದ ಜೀರ್ಣೋದ್ದಾರ ನಿಮಿತ್ತ ಷಡಾಧರ ಪ್ರತಿಷ್ಠೆ, ಇಷ್ಟಕಾನ್ಯಾಸ, ಗರ್ಭನ್ಯಾಸಾ ದಿಗಳನ್ನು ಕೆಂಮಿಂಜೆ ಕಾರ್ತಿಕ್ ತಂತ್ರಿಗಳು ನಡೆಸಿಕೊಟ್ಟರು.
    
ಕಶ್ಮಲ ಮನೋಭಾವವಿಲ್ಲದ ಪರಿಶುದ್ಧ ಮನಸ್ಸು,ಭಾವದಿಂದ ದೇವಸ್ಥಾನಗಳ ಜೀರ್ಣೋದ್ದಾರ ಕಾರ್ಯಗಳಲ್ಲಿ ಸಮರ್ಪಣಾ ಭಾವದಿಂದ ತೊಡಗಿಸಿಕೊಂಡರೆ ನಾವು ನಿಜವಾದ ಭಗವಂತನನ್ನು ಕಾಣಲು ಸಾಧ್ಯ, ಸರ್ವವ್ಯಾಪಿ ಯಾದ ಭಗವಂತ ಕೇವಲ ಗರ್ಭ ಗುಡಿಯಲ್ಲಿ ಮಾತ್ರವಲ್ಲ ನಮ್ಮೊಳಗಿನ ಎಲ್ಲಾ ಸತ್ವ ತತ್ವ ಗಳಲ್ಲಿ ಅಡಕವಾಗಿದ್ದಾನೆ.ಎನ್ನುವ ಸತ್ಯವನ್ನು ನಾವಿನ್ನು ಅರ್ಥ ಮಾಡಿಕೊಂಡಿಲ್ಲ.ಗುರು- ಹಿರಿಯರಲ್ಲಿ, ತಂದೆ-ತಾಯಿಯರಲ್ಲಿ,ಪ್ರಕೃತಿಯಲ್ಲಿ ಭಗವಂತನಿದ್ದಾನೆ ಎನ್ನುವುದು ನಮಗೆ ಅರ್ಥ ವಾಗಬೇಕು, ಕೌಟುಂ ಬಿಕಸೇವೆಯಲ್ಲಿ, ಸಾಮಾಜಿಕ ಸೇವೆಯಲ್ಲಿ ದೇವರನ್ನು ನಾವು ಕಾಣಬೇಕಾಗಿದೆ. ಸೇವೆಯಲ್ಲಿ ದೇವರಿದ್ದಾನೆ ಎನ್ನುವ ಮನೋಭಾವದಿಂದ ನಾವು ದುಡಿದರೆ ದೇವಸ್ಥಾನ ನಿರ್ಮಾಣ ಕಾರ್ಯ ಸುಲಭ ಸಾಧ್ಯವಾಗಲಿದೆ ಜೊತೆಗೆ ಪುಣ್ಯವನ್ನು ಪಡೆಯಲು ಸಾಧ್ಯ ಎಂದರು.
      ಧಾರ್ಮಿಕ ಉಪನ್ಯಾಸ ನೀಡಿದ ಕೆಂಮಿಂಜೆ ಕಾರ್ತಿಕ್ ತಂತ್ರಿಗಳು ಮಾತನಾಡುತ್ತಾ.ಸನಾತನ ಹಿಂದೂ ಧರ್ಮ ವ್ಯಕ್ತಿಯಿಂದ ಸಂಕಲ್ಪಿಸಲ್ಪಟ್ಟದಲ್ಲ ಋಷಿ-ಮುನಿಗಳ ಜೀವನ ಕ್ರಮದಿಂದ ಅನುಷ್ಠಾನಗೊಂಡ ಪರಂಪರೆ. ವೇದ ಶಾಸ್ತ್ರಗಳ ಅಡಿಪಾಯದಲ್ಲಿ ಅವಿರ್ಬಾವಗೊಂಡ ನಮ್ಮ ಪರಂಪರೆಯನ್ನು ಉಳಿಸಿ ಬೆಳೆಸ ಬೇಕಾದುದು ನಮ್ಮ ಕರ್ತವ್ಯ.ಕಾಲಾಂತರದಲ್ಲಿ ಜೀರ್ಣವಸ್ಥೆಗೆ ಸಂದ ದೇವಾಲಯದ ಜೀರ್ಣೋದ್ದಾರ ಪ್ರಸ್ತುತ ನಮ್ಮ ಕರ್ತವ್ಯ ಅದು ಈ ಕಾಲದಲ್ಲಿ ನಮ್ಮ ಸೌಭಾಗ್ಯ ಕೂಡ ಎಂದರು ಅಲ್ಲದೆ ಇಷ್ಟಾಕಾನ್ಯಾಸ,ಗರ್ಭನ್ಯಾಸ, ಷಡಾದರಗಳ ಬಗ್ಗೆ ವಿವರಣೆ ನೀಡಿತ್ತಾ , ಗರ್ಭ ಗುಡಿ ನಿರ್ಮಾಣದಲ್ಲಿ ವಿಶ್ವ ವ್ಯಾಪಿ ಭಗವಂತನ ಸಾನಿದ್ಯವನ್ನು ಬಿಂಬದಲ್ಲಿ ಕಲ್ಪಿಸುವುದು ಕ್ರಮ ಆದರೆ ಬಿಂಬ ದೇವರ ಸ್ತೋಲ ಶರೀರ ವಾದರೆ, ಗರ್ಭಗುಡಿಯೂ ಶರೀರವೇ ಆಗಿದೆ.ಪಾದುಕ, ಜಗತಿ, ಗಳ,ಕುಮುದ,ಪಡಿ, ಗೋಡೆ, ಬಿತ್ತಿ, ಮಾಡು, ಶಿಖರಾದಿಗಳು ನಿರ್ಮಾಣ ಮಾಡುವ ಮೂಲಕ ಪರಿಪೂರ್ಣ ಗುಡಿ ನಿರ್ಮಾಣವಾಗುತ್ತದೆ. ದೇವಸ್ಥಾನದ ದ್ವಾರದಲ್ಲಿ ಇಷ್ಟಾಕಾನ್ಯಾಸ ಮಾಡಿದ ಬಳಿಕ ಗರ್ಭಗುಡಿಯ ಬಲ ಭಾಗದಲ್ಲಿ ಗರ್ಭನ್ಯಾಸ ಮಾಡಲಾಗುತ್ತದೆ. ಗರ್ಭ ಗುಡಿಯ ದೇವರ ಬಿಂಬಕ್ಕೆ ಚೈತನ್ಯ ಗರ್ಭನ್ಯಾಸದ ಮೂಲಕ ನೀಡಲಾಗುತ್ತದೆ ನವ- ಖಂಡಗಳ ಗರ್ಭ ಪಾತ್ರೆಯಲ್ಲಿ ಜಗತ್ತಿನ ಚೈತನ್ಯ ಶಕ್ತಿಯನ್ನು ಶ್ರೇಷ್ಠ ಮಣ್ಣು, ಧಾನ್ಯ, ನವರತ್ನ, ಧಾತು ದೃವ್ಯ, ಗೆಡ್ಡೆಗಳು,ದೇವರಆಯುಧಗಳ ಮೂಲಕ ಧಾರಣೆ ಮಾಡಲಾಗುತ್ತದೆ. ಇದರಿಂದ ಪ್ರಾಸಾದ ಪುರುಷ ಎನ್ನುವ ಚೈತನ್ಯ ನಿರ್ಮಾಣದ ಸಂಕಲ್ಪಮಾಡಲಾಗುತ್ತದೆ. ಷಢಾದರ ಪ್ರತಿಷ್ಠೆಯಲ್ಲಿ ಆಧಾರ ಶಿಲೆಯಲ್ಲಿ ಪ್ರಣವ ಮಂತ್ರ, ಅದರಮೇಲೆ ಪದ್ಮ ಕುಂಭ, ನಂತರ ನಿಧಿಕುಂಭ ಪಾತ್ರೆಯಲ್ಲಿ ಚಿನ್ನ ಬೆಳ್ಳಿಯನ್ನು ತುಂಬಿ ಅದರ ಮೇಲೆ ಶಿಲಾ ಕೂರ್ಮ ದಲ್ಲಿ ಯೋಗ ನಾಳ ವನ್ನು ಇಟ್ಟು ಪ್ರತಿಷ್ಠೆ ಮಾಡಲಾಗುತ್ತದೆ. ನಂತರ ಅದರ ಮೇಲೆ ಪಾಣಿಪೀಠದಲ್ಲಿ ಬಿಂಬ ಪ್ರತಿಷ್ಠೆ ಮಾಡಲಾಗುತ್ತದೆ ಎಂದರು.
      ವೇದಿಕೆಯಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರ ಸತೀಶ್ ಬಾಳ್ತಿಲ್ಲಾಯ, ಶಿಲ್ಪಿ ಗುಣವಂತೇಶ್ವರ ಭಟ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನೆಲ್ಯಾಡಿ ವಲಯ ಮೇಲ್ವಿಚಾರಕರು ಆನಂದ ಡಿ. ಪಿ ಉಪಸ್ಥಿತರಿದ್ದರು.
       ಕಾರ್ಯದರ್ಶಿ ರವಿ ಭಟ್ ಸ್ವಾಗತಿಸಿ, ಮಹಾಬಲ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು, ಉದಯ ಕುಮಾರ್ ಗೌಡ ವಂದಿಸಿದರು, ಚಿನ್ಮಯಿ ನಿರೂಪಿಸಿದರು
        ಕೆಮ್ಮಿಂಜೆ ಕಾರ್ತಿಕ್ ತಂತ್ರಿ ಮತ್ತು ಸಹ ಪುರೋಹಿತರು ಷಡಾದರದ ವೈದಿಕ ಕಾರ್ಯಕ್ರಮ ನಡೆಸಿಕೊಟ್ಟರು.
          ಆಡಳಿತ ಸಮಿತಿ ಸದಸ್ಯರು, ಊರ ಭಗವದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಬಂಗಾರದ ನಾಣ್ಯ ವನ್ನು ಷಡಾದರಕ್ಕೆ ಅರ್ಪಿಸಿದರು.

Post a Comment

Previous Post Next Post