ಕುಕ್ಕೆ ಸುಬ್ರಹ್ಮಣ್ಯ; ಮಾ.1, ಉಪ್ಪಿನಂಗಡಿ ಕುಕ್ಕೆ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ವೆಂಕಟಾಪುರ ಎಂಬಲ್ಲಿ ರಾತ್ರಿ ಸುಮಾರು 9 ಗಂಟೆ ಹೊತ್ತಿಗೆ ರಸ್ತೆಗೆ ಡಾಮರೀಕರಣ ಮಾಡುವ ಬಗ್ಗೆ ಸಾರ್ವಜನಿಕರು ವಾಹನ ಸವಾರರು ಅಕ್ಷೇಪಾ ವ್ಯಕ್ತಪಡಿಸಿದ ಘಟನೆ ನಡೆದಿದೆ.
ವೆಂಕಟಪುರ ಎಂಬ ಜಾಗದಲ್ಲಿ ಯಾವುದೇ ಬೆಳಕಿನ ವ್ಯವಸ್ಥೆ ಮಾಡಿಕೊಳ್ಳದೆ, ವಾಹನದ ಬೆಳಕಿನಲ್ಲಿ ಡಾಮರೀಕರಣ ಮಾಡುತ್ತಿದ್ದರು,
ವೆಂಕಟಾಪುರ ತಿರುವಿನಿಂದ ಕೂಡಿದ ಪ್ರದೇಶವಾಗಿದ್ದು ಅಪಘಾತ ನಡೆಯುವ ತಿರು ಆಗಿದ್ದು ಆ ಜಾಗದಲ್ಲಿ ರಾತ್ರಿ ಯಾವುದೇ ಸೂಚನಾ ಫಲಕಗಳನ್ನು ಅಳವಡಿಸದೆ ಡಾಮರೀಕರಣ ಮಾಡುತ್ತಿದ್ದಾರೆ.
ರಾತ್ರಿ ಸಮಯದಲ್ಲಿ ಡಾಮರೀಕರಣ ಮಾಡಿದರೆ ಅದು ಸಮರ್ಪಕವಾಗಿ ಆಗುವುದಿಲ್ಲ, ಈ ಮೊದಲು ಮಾಡಿದ ಡಾಮರೀಕರಣ ಕೆಲವೇ ದಿನಗಳಲ್ಲಿ ಎದ್ದು ಹೋಗಿದೆ, ಇನ್ನೂ ರಾತ್ರಿ ಸಮಯದಲ್ಲಿ ದೀಪದ ಬೆಳಕಿಲ್ಲದೆ ಡಾಮರೀಕರಣ ಮಾಡಿದರೆ ಅದು ಹೆಚ್ಚು ಸಮಯಗಳ ಕಾಲ ಉಳಿಯುವುದಿಲ್ಲ,ಎಂಬುದಾಗಿ ಆಕ್ಷೇಪ ವ್ಯಕ್ತಪಡಿಸಿ ಈ ವಿಚಾರವನ್ನು ಪಿಡಬ್ಲ್ಯೂಡಿ ಅಧಿಕಾರಿ ಎ.ಇ. ರಾಜೇಶ್ ರೈ ಅವರ ಗಮನಕ್ಕೆ ತಂದು ರಾತ್ರಿ ಸಮಯದಲ್ಲಿ ಮಾಡುವುದು ಬೇಡ ಹಗಲಿನ ಸಮಯದಲ್ಲಿ ಸೂಚನಾ ಫಲಕವನ್ನ ಅಳವಡಿಸಿ ಸಾರ್ವಜನಿಕರಿಗೆ ವಾಹನ ಸವಾರರಿಗೆ ಯಾವುದೇ ರೀತಿಯ ಸಮಸ್ಯೆಗಳಾಗದ ರೀತಿಯಲ್ಲಿ ಡಾಮರೀಕರಣ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಬೇಕು ಎಂದು ಪುತ್ತೂರು ಲೋಕೋಪಯೋಗಿ ಅಧಿಕಾರಿ ಎ.ಇ.ರಾಜೇಶ್ ರೈ ಅವರ ಗಮನಕ್ಕೆ ತರುವ ಪ್ರಯತ್ನವನ್ನು ಮಾಡಿರುತ್ತಾರೆ.
ಈ ಸಮಯದಲ್ಲಿ ದೀಪಕ್ ನಂಬಿಯಾರ್, ಮಹೇಶ್ ಗುಡ್ಡಮನೆ, ಸತೀಶ್ ಕುಲ್ಕುಂದ, ತೇಜ ದೇವರಗದ್ದೆ, ವಿಕಾಸ್ ಕುಲ್ಕುಂದ, ವಿನೋದ್ ಕುಲ್ಕುಂದ, ಹಾಗೂ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿರುತ್ತಾರೆ.
ಈ ಬಗ್ಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ವಿಚಾರಿಸಿದಾಗ ರಾತ್ರಿ ಡಾಮರೀಕರಣ ಮಾಡಬಹುದು ಸರಿಯಾದ ಬೆಳಕಿನ ವ್ಯವಸ್ಥೆ ಇರಬೇಕು,ಡಾಮರಿನ ಉಷ್ಣಾಂಶ ಕಾಯ್ದುಕೊಳ್ಳಬೇಕು ಇಂದು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
Post a Comment