ಅಧಿಕಾರಿಗಳು ಬೆರಳಿನ ತುದಿಯಲ್ಲೇ ಕೆಲಸ ಮಾಡಿಸುವ ಈ ಕಾಲದಲ್ಲಿ ,ಇಲ್ಲಿ ತಮ್ಮ ಸ್ವಂತ ಕೈಯಿಂದಲೇ ಸ್ವಚ್ಛತೆಯನ್ನ ಮಾಡಿ ಗಮನ ಸೆಳೆದಿದ್ದಾರೆ.

ಜನಸಾಮಾನ್ಯರ ಮಧ್ಯೆ ಎಲ್ಲರಂತೆ ನಾನೂ ಸಾಮಾನ್ಯ ವ್ಯಕ್ತಿ ಎಂದು ತೋರಿಸಿಕೊಟ್ಟಿದ್ದಾರೆ ಕುಕ್ಕೆ ಸುಬ್ರಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾ ಅಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಅವರು.

ಕುಮಾರಧಾರ ನದಿ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡ ಕುಕ್ಕೆ ಶ್ರೀ ದೇವಳದ ಅಧಿಕಾರಿಗಳು ಹಾಗೂ ನೌಕರರು ನದಿಯಲ್ಲಿ ಸ್ವಚ್ಛತೆಯನ್ನು ಮಾ.26ರಂದು ಮಾಡಿದ್ದಾರೆ.
ಸುಬ್ರಹ್ಮಣ್ಯ  ಕುಕ್ಕೆ ಶ್ರೀ ಸುಬ್ರಹ್ಮಣ್ಯದ ಕುಮಾರಧಾರ ಸ್ನಾನಘಟ್ಟ ಹಾಗೂ ಪರಿಸರದ ಪ್ರದೇಶಗಳಲ್ಲಿ ವಿಪರೀತ ತ್ಯಾಜ್ಯ ವಸ್ತುಗಳನ್ನ ಭಕ್ತಾದಿಗಳು ಎಸೆದು ಇಡೀ ನೀರು ಹಾಗೂ ಪರಿಸರ ಮಲಿನಗೊಳಿಸುತ್ತಾರೆ.
 ಶ್ರೀ ದೇವಳದ ವತಿಯಿಂದ ಅಲ್ಲಿಯ ನೌಕರರು ನೀರಿನಿಂದ ಎಷ್ಟೇ ತ್ಯಾಜ್ಯಗಳಾದ ಬಟ್ಟೆ ಬರೆಗಳನ್ನ ತೆಗೆದರೂ ಮತ್ತೆ ಮತ್ತೆ ಭಕ್ತಾದಿಗಳು ನೀರಲ್ಲೇ ಬಟ್ಟೆಗಳನ್ನ ಬಿಡುವ ಚಾಳಿಯನ್ನು ಮುಂದುವರಿಸುತ್ತಿರುವುದು ನೋವಿನ ವಿಚಾರ. ಇದನ್ನು ಗಮನಿಸಿದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗೊಂಡಿ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಏಸುರಾಜ್ ಹಾಗೂ ಅಧಿಕಾರಿ ವೃಂದದವರು ಹಾಗೂ ಸುಮಾರು 150ಕ್ಕೂ ಮಿಕ್ಕಿ ನೌಕರರು ಸ್ವತಹ ಈ ದಿನ ಬುಧವಾರ ಕುಮಾರ ಸ್ಥಾನಘಟ್ಟದ ಪ್ರದೇಶದಲ್ಲಿ ನೀರಿಗಿಳಿದು ಬಟ್ಟೆ ಬರೆಗಳನ್ನು ಮೇಲಕೆತ್ತಿದ್ದಾರೆ.
ರಾಶಿ ರಾಶಿಯಾಗಿ ಇದ್ದಂತ ಬಟ್ಟೆ ಬರೆಗಳನ್ನು ಗ್ರಾಮ ಪಂಚಾಯಿತಿ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಸಾಗಿಸಲಾಗಿದೆ. 

ಜನಸಾಮಾನ್ಯರ ಮಧ್ಯೆ ನಾನೊಬ್ಬ ಸಾಮಾನ್ಯ ವ್ಯಕ್ತಿ; 
ಕುಕ್ಕೆ ಸುಬ್ರಮಣ್ಯ ದೇವಸ್ಥಾನದ ಅಧಿಕಾರದ ಚುಕ್ಕಾಣಿ ಹಿಡಿದಿರುವ ಅರವಿಂದ ಅಯ್ಯಪ್ಪ ಸುತಗುಂಡಿ ಅವರು. 
ಸ್ವತಹ ತಾವೇ ನೀರಿಗೆ ಇಳಿದು ಸ್ವಚ್ಛತೆ ಮಾಡಿರುವುದು ವಿಶೇಷವಾಗಿತ್ತು. 
ಎಷ್ಟೇ ದೊಡ್ಡ ಸರಕಾರಿ ಅಧಿಕಾರಿಯಾಗಿದ್ದರು ನಾವು ನಮ್ಮ ಅಧಿಕಾರವನ್ನು ದುರ್ಬಳಕೆ ಮಾಡದೆ ,ಸಮಾಜದ ಸೇವೆ ಮಾಡಬೇಕು ಎಂಬ ಸಂದೇಶವನ್ನು ಸ್ವಚ್ಛತೆ ಮಾಡುವುದರ ಮೂಲಕ ಎಲ್ಲರಿಗೂ ತಿಳಿಸಿದ್ದಾರೆ.
ಅಧಿಕಾರಿಗಳ, ದೇವಳದ ನೌಕರರ ಈ ಪ್ರಯತ್ನಕ್ಕೆ ಯಶಸ್ಸುಸಿಗಲಿ ಎಂಬುದು ನಮ್ಮ ಆಶಯ.

Post a Comment

أحدث أقدم