ಉಪ್ಪಿನಂಗಡಿ: ಯುವಜನತೆಯ ಆತ್ಮವಿಶ್ವಾಸವನ್ನು ಜೇಸಿಐ ಸಂಸ್ಥೆ ಹೆಚ್ಚಿಸುತ್ತದೆ-ಜೇಸಿ ಮೋಹನಚಂದ್ರ.

ಉಪ್ಪಿನಂಗಡಿ: ಅಂತಾರಾಷ್ಟ್ರೀಯ ಜೇಸಿಐ ಸಂಸ್ಥೆಯು ಯುವಜನತೆಗೆ ವೇದಿಕೆ ಕಲ್ಪಿಸಿ ಧೈರ್ಯ, ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.ಇಂತಹ ವೇದಿಕೆಯನ್ನು ಬಳಸಿಕೊಂಡು ಅತ್ಯುತ್ತಮವಾಗಿ ವ್ಯಕ್ತಿತ್ವ ರೂಪಿಸಿಕೊಳ್ಳಲು ಮುಂದಾಗಬೇಕೆಂದು ಉಪನ್ಯಾಸಕ ಮತ್ತು ವಲಯ 15ರ ವಲಯಾಧಕಾರಿ ಜೇಸಿ ಮೋಹನ್ ಚಂದ್ರ ತೋಟದ ಮನೆ ಜೇಸಿಐ ಉಪ್ಪಿನಂಗಡಿ ಘಟಕದ ಸಾಮಾನ್ಯ ಸಭೆಯಲ್ಲಿ ಸದಸ್ಯರಿಗೆ ತರಬೇತಿ ನೀಡಿ ಕರೆ ನೀಡಿದರು.ಸಭೆಯ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷ ಜೇಸಿ ನಟೇಶ್ ಪೂಜಾರಿ ವಹಿಸಿದ್ದರು.ಜೇಸಿ ಜಯಾನಂದ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು.ಜೇಸಿ ಗಣೇಶ್ ಜೇಸಿವಾಣಿ ವಾಚಿಸಿದರು.ಘಟಕದ ಕಾರ್ಯದರ್ಶಿ ಜೇಸಿ ಮಹೇಶ್ ವರದಿ ಮಂಡಿಸಿದರು.
ನಿಕಟಪೂರ್ವ ಅಧ್ಯಕ್ಷರಾದ ಜೇಸಿ ಲವೀನಾ ಪಿಂಟೊ, ಜೇಸಿಐ ಉಪ್ಪಿನಂಗಡಿ ಟ್ರಸ್ಟ್ ಅಧ್ಯಕ್ಷ ಜೇಸಿ ಪ್ರಶಾಂತ್ ಕುಮಾರ್ ರೈ, ಪೂರ್ವವಲಯಾಧಿಕಾರಿ ಜೇಸಿ ಶೇಖರ್ ಗೌಂಡತ್ತಿಗೆ ಸಹಕರಿಸಿದರು.

Post a Comment

أحدث أقدم