ಕುಕ್ಕೆ ಸುಬ್ರಮಣ್ಯ; ಮಾ,29, ಕುಕ್ಕೆ ಸುಬ್ರಹ್ಮಣ್ಯ ಶ್ರೀ ಕ್ಷೇತ್ರಕ್ಕೆ ಬರುವ ಭಕ್ತರು.
ಯಾರೋ ಜ್ಯೋತಿಷ್ಯರು ಹೇಳಿದ್ದಾರೆ, ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗಿ ಕುಮಾರಧಾರ ನದಿಯಲ್ಲಿ ಇಂದು ತಾವು ಉಟ್ಟ ಬಟ್ಟೆಗಳನ್ನು ಬಿಡಬೇಕು, ಬಟ್ಟೆಗಳನ್ನು ನದಿ ನೀರಲ್ಲಿ ಎಸೆಯಬೇಕು ಹೇಳಿದ ಕಾರಣ. ಕುಮಾರಧಾರ ನದಿ ಕಲುಷಿತಆಗುತ್ತದೆ, ನದಿ ನೀರಿನಲ್ಲಿ ವಾಸಿಸುವ ಜಲಚರಗಳಿಗೆ ತೊಂದರೆಯಾಗುತ್ತದೆ, ಸಾವಿರಾರು ಜನರು ಕುಮಾರಧಾರ ನದಿ ನೀರನ್ನು ಕುಡಿದು ಜೀವಿಸುತ್ತಾರೆ, ನಾವು ಪವಿತ್ರತೀರ್ಥವನ್ನು ಮಲಿನ ಮಾಡಬಾರದು ಎಂಬ ಸಾಮಾನ್ಯ ಜ್ಞಾನ ಇಲ್ಲದ ಭಕ್ತರು ಕುಮಾರಧಾರ ಸೇತುವೆ ಮೇಲಿನಿಂದ ಬಟ್ಟೆ ಇನ್ನಿತರ ತ್ಯಾಜ್ಯ ವಸ್ತುಗಳನ್ನು ನದಿನೀರಿಗೆ ಎಸೆದು,
ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಯಾರು ನದಿ ನೀರಿಗೆ ತ್ಯಾಜ್ಯ ವಸ್ತುಗಳನ್ನು ಎಸೆಯಬಾರದು ಕಸ ಇನ್ನಿತರ ತ್ಯಾಜ್ಯ ವಸ್ತುಗಳನ್ನು ಎಸೆದರೆ ದಂಡ ವಿಧಿಸಲಾಗುವುದು, ಎಂದು ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಇಂದು ಸೇತುವೆಯ ಮೇಲೆ ಸೂಚನಾ ಫಲಕವನ್ನು ಅಳವಡಿಸಿದ್ದಾರೆ.
ಈ ಸೂಚನಾ ಫಲಕ ಪ್ರಾಯೋಜಕತ್ವವನ್ನ ಕುಕ್ಕೆ ಸುಬ್ರಹ್ಮಣ್ಯ ಶ್ರೀ ಸ್ವಾಮಿ ಸನ್ನಿಧಿ ಪೂಜಾ ಸಾಮಗ್ರಿಗಳು ಹಾಗೂ ವಿಗ್ರಹಗಳ ಮಳಿಗೆ ಇಂದ ನೀಡಲಾಗಿದೆ.
ಸೂಚನಾ ಫಲಕ ಅಳವಡಿಸುವ ಸಂದರ್ಭದಲ್ಲಿ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಜಾತ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹೇಶ್ ಜಿ.ಏನ್, ಸುಬ್ರಮಣ್ಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಕಾರ್ತಿಕ್, ಪಿಡಬ್ಲ್ಯೂಡಿ ಇಂಜಿನಿಯರ್ ಪ್ರಮೋದ್, ಸುಬ್ರಮಣ್ಯ ಗ್ರಾಮ ಪಂಚಾಯತಿ ಸದಸ್ಯ ಹರೀಶ ಇಂಜಾಡಿ,ಸೌಮ್ಯ, ಹೆಚ್.ಎಲ್.ವೆಂಕಟೇಶ್, ಸುಬ್ರಹ್ಮಣ್ಯ, ಕುಕ್ಕೆ ಸುಬ್ರಹ್ಮಣ್ಯ ಮಾಸ್ಟರ್ ಪ್ಲಾನ್ ಸದಸ್ಯರಾದ ಲೋಲಾಕ್ಷ ಕೈಕಂಬ, ಪವನ್ ಸುಬ್ರಮಣ್ಯ,
ಐನಿಕೀದು ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ರವೀಂದ್ರ ಕುಮಾರ್ ರುದ್ರಪಾದ, ಓಂ ಶ್ರೀ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟ ಸುಬ್ರಹ್ಮಣ್ಯ ಇದರ ಸದಸ್ಯೆ ರತ್ನಕುಮಾರಿ ನುಚೀಲ, ಸಮಾಜಸೇವಕ ಡಾ|ರವಿಕಕ್ಕೆ ಪದವು,ಪಂಚಾಯತ್ ಸಿಬ್ಬಂದಿ ರಾಮಚಂದ್ರ,ಸ್ಥಳೀಯರಾದ ಭರತ್,ಸುರೇಶ್ ಭಟ್ ಆದಿ ಸುಬ್ರಮಣ್ಯ,ಶೇಷಕುಮಾರ್ ಶೆಟ್ಟಿ, ಜಗದೀಶ ಪಡುಪು ಉಪಸ್ಥಿತರಿದ್ದರು.
إرسال تعليق