ಕುಕ್ಕೆ ದೇವಳಕ್ಕೆ ರಾಜ್ಯ ಸಾಂಸ್ಥಿಕ ಹಾಗೂ ಯೋಜನಾ ಸಚಿವ ಸುಧಾಕರ್ ಭೇಟಿ.

ಸುಬ್ರಮಣ್ಯ ಮಾ.22: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ರಾಜ್ಯ ಸರ್ಕಾರದ ಸಾಂಸ್ಥಿಕ ಹಾಗೂ ಯೋಜನಾ ಸಚಿವ ಸುಧಾಕರ್ ಇಂದು ಮಧ್ಯಾಹ್ನ ಭೇಟಿ ನೀಡಿದರು. ಸಚಿವರನ್ನ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಯೇಸುರಾಜ್ ಅವರು ಸ್ವಾಗತಿಸಿ ಬರಮಾಡಿಕೊಂಡರು. ಸಚಿವರು ಇಂದು ಸುಬ್ರಮಣ್ಯದಲ್ಲಿ ತಂಗಿ ನಾಳೆ ಆಶ್ಲೇಷ ಬಲಿ ಪೂಜೆ ಹಾಗೂ ತುಲಾಭಾರ ಸೇವೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

Post a Comment

Previous Post Next Post