ಕೊಲ್ಲಮೊಗರು -ಹರಿಹರ ಸೊಸೈಟಿ ಚುನಾವಣೆ ಫಲಿತಾಂಶ ಹೈಕೋರ್ಟ್ ತಡೆಯಜ್ಞೆಯಿಂದ ವಿಳಂಬವಾಗಿದೆ. ಮಾಜಿ ಅಧ್ಯಕ್ಷ ಹರ್ಷಕುಮಾರ ದೇವಜನ.

ಸುಬ್ರಹ್ಮಣ್ಯ ಮಾ.8: ಕೊಲ್ಲಮೊಗರು ಹರಿಹರ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ 19/1/25 ರಂದು ನಡೆದಿದ್ದು, ಸದರಿ ಚುನಾವಣೆಯಲ್ಲಿ ಸಹಕಾರಿ ಅಭಿವೃದ್ಧಿ ಬಳಗ, ಸಹಕಾರ ಭಾರತಿ, ಹಾಗೂ ಸ್ವಾಭಿಮಾನ ಬಳಗದ ಮೂರು ತಂಡಗಳು ಸ್ಪರ್ಧಿಸಿರುತ್ತವೆ. ಈ ಪೈಕಿ ಆಡಳಿತ ಮಂಡಳಿ ವಿಳಂಬವಾಗಿರುವುದು ಉಚ್ಚ ನ್ಯಾಯಾಲಯದಿಂದ ತಂದಿರುವಂತಹ ತಡೆಯಾಜ್ಜೆಯಲ್ಲಿ ಮತದಾನದ ಹಕ್ಕಿನಲ್ಲಿ ಸುಸ್ತಿದಾರರು ಹಾಗೂ ಮೃತಪಟ್ಟವರ ಹೆಸರಿರುವುದಿಂದ ಆಗಿರುತ್ತದೆ ಎಂದು ಸೊಸೈಟಿಯ ಮಾಜಿ ಅಧ್ಯಕ್ಷ ಹರ್ಷ ಕುಮಾರ ದೇವಜನ ಪತ್ರಿಕಾಗೋಷ್ಠಿಯಲ್ಲಿ ಶನಿವಾರ ತಿಳಿಸಿರುತ್ತಾರೆ.



ಈಗಾಗಲೇ ಸಹಕಾರ ಭಾರತಿ ಅಭ್ಯರ್ಥಿಗಳು ನಮ್ಮ ಮೇಲೆ ಆರೋಪ ಮಾಡಿರುವುದು ಪೂರ್ತಿ ಸುಳ್ಳಾಗಿರುತ್ತದೆ . ಪ್ರಸ್ತುತ ಸೊಸೈಟಿಗೆ ಆಡಳಿತಾಧಿಕಾರಿ ನೇಮಕವಾಗಿದ್ದು ಸಂಘದ ಸದಸ್ಯರಿಗೆ ಬೇಕಾದವರಿಗೆ ಸಾಲದ ಸೌಲಭ್ಯ ,ಬೆಳೆಸಾದ ರಿನಿವಲ್, ಹೊಸದಾಗಿ ಬೆಳೆ ಸಾಲ, ದೀರ್ಘಾವಧಿ ಸಾಲ, ನವೋದಯ ಸ್ವಸಹಾಯ ಸಂಘಗಳಿಗೆ ಸಾಲ ಸೌಲಭ್ಯ, ಮತ್ತು ಕೃಷಿಯೇತರ ಉದ್ದೇಶಕ್ಕಾಗಿ ಸಾಲಬೇಕಾದವರಿಗೆ ಸಾಲ ಮಂಜೂರ್ ಆಗುತ್ತ ಇದೆ. ಚುನಾವಣೆಯ ಫಲಿತಾಂಶ ವಿಳಂಬವಾಗಿರುವುದಕ್ಕೆ ನಾವು ಭಾ ದ್ಯಾಸ್ಥರಲ್ಲ, ಸುಸ್ತಿದಾರರು ಮತ ಚಲಾಯಿಸಿರುವುದು ಕಾರಣವಾಗಿದೆ ,ಎಂದು ಸೊಸೈಟಿ ಮಾಜಿ ಅಧ್ಯಕ್ಷ ಹರ್ಷಕುಮಾರ್ ದೇವಜನ ತಿಳಿಸಿರುತ್ತಾರೆ.
ಸುದ್ದಿಗೋಷ್ಠಿಯಲ್ಲಿ ಸಹಕಾರಿ ಅಭಿವೃದ್ಧಿ ಸಂಘದ ಅಭ್ಯರ್ಥಿ ಗಳಾದ ವಿಜಯ ಕೂಜುಗೋಡು, ಶೇಖರ ಅಂಬೆಕಲ್ಲು, ಮಣಿಕಂಠ ಕೊಳಗೆ ,ಮೋನಪ್ಪ .ಕೆ ಉಪಸ್ಥಿತರಿದ್ದರು.

Post a Comment

Previous Post Next Post