ದಿನಾಂಕ 29 ಮಾರ್ಚ್ 2025 ಶನಿವಾರದಂದು ಶ್ರೀರಾಮ ವಿದ್ಯಾಲಯ ನೆಲ್ಯಾಡಿಯಲ್ಲಿ ಫೆಬ್ರವರಿ, ಮಾರ್ಚ್ ಹಾಗೂ ಏಪ್ರಿಲ್ ತಿಂಗಳ ಸಾಮೂಹಿಕ ಹುಟ್ಟುಹಬ್ಬ ವನ್ನು ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಶಿಶುಮಂದಿರದ ಸಹಾಯಕಿಯಾದ ಶ್ರೀಮತಿ ಪುಷ್ಪವತಿ, ಶಿಶು ಮಂದಿರದ ಮಾತಾಜಿಯಾದ ಶ್ರೀಮತಿ ಸುಮಲತಾ ಹಾಗೂ ಶಾಲಾ ಅಡುಗೆ ಸಹಾಯಕರಾದ ಶ್ರೀಮತಿ ಕುಮುದ ಇವರು ವಿದ್ಯಾರ್ಥಿಗಳಿಗೆ ಆರತಿ ಎತ್ತಿ, ಹಣೆಗೆ ತಿಲಕವಿಟ್ಟು, ಬಾಯಿಗೆ ಸಿಹಿ ನೀಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಆದ ಶ್ರೀಮತಿ ಭಾಗೀರಥಿಯವರು ಉಪಸ್ಥಿತರಿದ್ದೂ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಎಲ್ಲಾ ವಿದ್ಯಾರ್ಥಿಗಳು, ಶಾಲಾ ಶಿಕ್ಷಕ ವೃಂದದವರು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು. ಶ್ರೀಮತಿ ಶುಭರಾಣಿ ಅವರು ಧನ್ಯವಾದವಿತ್ತು ,ಕುಮಾರಿ ರಮ್ಯಾ ಇವರು ಸ್ವಾಗತಿಸಿ, ಶ್ರೀಮತಿ ಕೋಮಲಾಂಗಿ ಮಾತಾಜಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.
ನೆಲ್ಯಾಡಿ ಶ್ರೀ ರಾಮ ವಿದ್ಯಾಲಯಯದಲ್ಲಿ ಸಾಮೂಹಿಕ ಹುಟ್ಟುಹಬ್ಬ.
Newspad
0
Premium By
Raushan Design With
Shroff Templates
Post a Comment