ಸುಬ್ರಹ್ಮಣ್ಯ, ಏಪ್ರಿಲ್ 14 – ರೋಟರಿ ಜಿಲ್ಲೆ 3181ರ ಜಿಲ್ಲಾ ಗವರ್ನರ್ ರೋ. ವಿಕ್ರಂ ದತ್ತ ಅವರು ಸುಬ್ರಹ್ಮಣ್ಯ ರೋಟರಿ ಕ್ಲಬ್‌ಕ್ಕೆ ಅಧಿಕೃತವಾಗಿ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ರೋಟರಿ ಕ್ಲಬ್ ಸಂಸ್ಥೆ, ಇದು ವಿಶ್ವದಾದ್ಯಂತ ಸೇವಾ ಚಟುವಟಿಕೆ ನಡೆಸುತ್ತಿದ್ದು, ಬಡವರು, ಅಗತ್ಯವಿರುವವರ ನೆರವಿಗಾಗಿ ನಿರಂತರವಾಗಿ ಕೆಲಸ ಮಾಡುತ್ತಿದೆ" ಎಂದು ಹೇಳಿದರು.
ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ರೋಟರಿ ಸಂಸ್ಥೆಯ ಮುಖ್ಯ ಉದ್ದೇಶಗಳು ಮತ್ತು ಸಮಾಜ ಸೇವೆಯ ಮಹತ್ವದ ಬಗ್ಗೆ ವಿವರಿಸಿದರು – ಆಹಾರ, ಕುಡಿಯುವ ನೀರು, ಆರೋಗ್ಯ ತಪಾಸಣೆ, ಮನೆ ನಿರ್ಮಾಣ, ಶಿಕ್ಷಣ, ಮಹಿಳೆಯರ ಕೌಶಲ್ಯಾಭಿವೃದ್ಧಿ, ರಕ್ತದಾನ ಶಿಬಿರಗಳು ಮುಂತಾದ ಹಲವಾರು ಚಟುವಟಿಕೆಗಳು ನಡೆಯುತ್ತಿವೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಲಬ್ ಅಧ್ಯಕ್ಷ ಚಂದ್ರಶೇಖರ ನಾಯರ್ ವಹಿಸಿದ್ದರು. ಇದೇ ವೇಳೆ ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಡಾ. ತ್ರಿಮೂರ್ತಿ, ಪಹರೆಯ ಸೇವೆಯಲ್ಲಿ ಕಾರ್ಯನಿರ್ವಹಿಸಿದ ವಿಠಲ ಮೂಲ್ಯ ಹಾಗೂ ಅಂಗನವಾಡಿ ಅಭಿವೃದ್ಧಿಗೆ ಶ್ರಮಿಸಿದ ಜಯಲಕ್ಷ್ಮಿ ಅವರನ್ನು ಸನ್ಮಾನಿಸಲಾಯಿತು.
ಇದೆ ಸಂದರ್ಭದಲ್ಲಿ ಹಲವಾರು ಸೇವಾ ಚಟುವಟಿಕೆಗಳು ನಡೆಯುವಂತಾಯಿತು:
ಬಸ್ ನಿಲ್ದಾಣ, ಶೌಚಾಲಯ ಹಾಗೂ ಶುದ್ಧ ನೀರಿನ ಘಟಕ ಉದ್ಘಾಟನೆ
ಕ್ರೀಡಾ ಪರಿಕರ ಲೋಕಾರ್ಪಣೆ, ಟೈಲರಿಂಗ್ ತರಬೇತಿ ಕೇಂದ್ರ ಅಭಿವೃದ್ಧಿ
ಶಿಕ್ಷಕಿಗೆ ಮಾಸಿಕ ವೇತನ ಹಸ್ತಾಂತರ
ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಪತ್ನಿ ಲತಾ ವಿಕ್ರಂ ದತ್ತ, ಸಹಾಯಕ ಗವರ್ನರ್ ಸೂರ್ಯನಾಥ ಆಳ್ವ, ಜೋನಲ್ ಲೆಫ್ಟಿನೆಂಟ್ ವಿಶ್ವನಾಥ ನಡುತೋಟ, ಮಾಜಿ ಅಧ್ಯಕ್ಷರು, ಸದಸ್ಯರು ಮತ್ತು ಹೊಸದಾಗಿ ಸೇರ್ಪಡೆಗೊಂಡ ಶಿವಪ್ರಸಾದ್ ಮಾದನಮನೆ ಮತ್ತು ವಿಶ್ರುತ್ ಕುಮಾರ್ ಹಾಜರಿದ್ದರು.
ಸಂಜೆ ಕ್ಲಬ್ ಅಸೆಂಬ್ಲಿಯಲ್ಲಿ ರೋಟರಿ ಕ್ಲಬ್‌ನ ಪ್ರಗತಿ ಪರಿಶೀಲನೆ ನಡೆಯಿತು.
Post a Comment