ಗ್ರಾಮೀಣ ವಿಕಾಸ ಬ್ಯಾಂಕಿನಿಂದ ಕುಂತೂರುಪದವು ಅನುದಾನಿತ ಪ್ರೌಢಶಾಲೆಗೆ ಕಂಪ್ಯೂಟರ್ ಕೊಡುಗೆ.

ಕುಂತೂರುಪದವು: ಸಂತ ಜಾರ್ಜ್ ಕನ್ನಡ ಅನುದಾನಿತ ಪ್ರೌಢಶಾಲೆಗೆ ಗ್ರಾಮೀಣ ವಿಕಾಸ ಬ್ಯಾಂಕ್, ಕಾಣಿಯೂರು ಶಾಖೆಯು ಮೂರು ಕಂಪ್ಯೂಟರ್‌ಗಳನ್ನು ಉಡುಗೊರೆಯಾಗಿ ನೀಡಿದೆ. ಈ ಕಂಪ್ಯೂಟರ್‌ಗಳನ್ನು ಬ್ಯಾಂಕ್ ಮ್ಯಾನೇಜರ್ ಚೇತನ್ ಅವರು ಶಾಲೆಯ ಮುಖ್ಯಶಿಕ್ಷಕ ಹರಿಶ್ಚಂದ್ರ ಅವರಿಗೆ ಹಸ್ತಾಂತರಿಸಿದರು.

ಕಾರ್ಯಕ್ರಮದಲ್ಲಿ ಚಿತ್ರಕಲಾ ಶಿಕ್ಷಕ ಕಿಶೋರ್ ಬಿ, ಇಂಗ್ಲಿಷ್ ಶಿಕ್ಷಕಿ ಸ್ಮಿತಾ ಡಿ, ದ್ವಿತೀಯ ದರ್ಜೆ ಸಹಾಯಕ ಸಿರಿಲ್ ಮತ್ತು ಕಂಪ್ಯೂಟರ್‌ಗಳನ್ನು ತರುವಲ್ಲಿ ಸಹಕರಿಸಿದ ಕಿರಣ್-ರೇಖಾ ದಂಪತಿ (ಬೆಳ್ಳಾರೆ) ಉಪಸ್ಥಿತರಿದ್ದರು.

Post a Comment

Previous Post Next Post