ಬಂಟ್ವಾಳ: ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಪುದು ಗ್ರಾಮದ ಪರಂಗಿಪೇಟೆಯಲ್ಲಿ ಇರುವ ವಿಶ್ವಾಸ ಸಿಟಿ ಸೆಂಟರ್‌ನ ವೈಟ್ ಲೈನ್ ಕಿಡ್ಸ್ ವರ್ಲ್ಡ್ ಬಟ್ಟೆ ಅಂಗಡಿಯಲ್ಲಿ ಏಪ್ರಿಲ್ 11 ರಿಂದ 12ರ ಮಧ್ಯರಾತ್ರಿ ಕಳ್ಳತನ ನಡೆದಿತ್ತು. ಅಂಗಡಿಯ ಶಟರ್‌ಗೆ ಅಳವಡಿಸಲಾದ ಬೀಗವನ್ನು ಮುರಿದು ಒಳ ನುಗ್ಗಿದ ಆರೋಪಿಗಳು, ಕ್ಯಾಶ್ ಕೌಂಟರ್‌ನಲ್ಲಿದ್ದ ನಗದನ್ನು ಕಳವುಗೈದಿದ್ದರು.
ಈ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 42/2025ರಡಿಯಲ್ಲಿ ಭದ್ರತಾ ಕಾಯ್ದೆಯ ಕಲಂ 331(4) ಹಾಗೂ 305 ಬಿಎನ್‌ಎಸ್ ಅನ್ವಯ ಪ್ರಕರಣ ದಾಖಲಾಗಿತ್ತು.
ತಕ್ಷಣ ಕ್ರಮ ಕೈಗೊಂಡ ಪೊಲೀಸರು ನಡೆದ ಕೃತ್ಯದ ತನಿಖೆ ಆರಂಭಿಸಿ, ಆರೋಪಿಯಾದ ನಝೀರ್ ಮಹಮ್ಮದ್ (26), ಕಣ್ಣೂರು, ಅಡ್ಯಾರು ಗ್ರಾಮ, ಮಂಗಳೂರು ತಾಲೂಕು ನಿವಾಸಿಯನ್ನು ಏಪ್ರಿಲ್ 19ರಂದು ಬಂಧಿಸಿದ್ದಾರೆ. ತನಿಖೆ ವೇಳೆ ಆರೋಪಿಯಿಂದ ರೂ. 1,09,490 ನಗದು ಹಾಗೂ ಕಳ್ಳತನಕ್ಕೆ ಬಳಸಿದ ಮೋಟಾರ್ ಸೈಕಲ್ ವಶಪಡಿಸಿಕೊಳ್ಳಲಾಗಿದೆ.
ಆರೋಪಿ ನಝೀರ್ 2024ರಲ್ಲಿ ಮಂಗಳೂರು ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಟಿವಿಎಸ್ ಶೋರೂಂನಲ್ಲಿ ಗಾಜು ಒಡೆದು ಹಣ ಕಳವು ಮಾಡಿದ ಪ್ರಕರಣದಲ್ಲೂ ಭಾಗಿಯಾಗಿದ್ದನು ಎಂಬ ಮಾಹಿತಿ ಲಭಿಸಿದೆ.
ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಬಂಟ್ವಾಳ ಗ್ರಾಮಾಂತರ ಠಾಣೆಯ ಪೊಲೀಸ್ ನಿರೀಕ್ಷಕ ಶಿವಕುಮಾರ ಬಿ. ಅವರ ನೇತೃತ್ವದಲ್ಲಿ ಸಿಬ್ಬಂದಿಯು ಕಾರ್ಯ ನಿರ್ವಹಿಸಿದ್ದು, ಸಾರ್ವಜನಿಕರಿಂದ ಮೆಚ್ಚುಗೆಗೆ ಪಾತ್ರವಾಗಿದೆ.
إرسال تعليق