ಪಡೀಲ್ - ಬಿ.ಸಿ.ರೋಡ್ ರಸ್ತೆಯಲ್ಲಿ 18 ಎಪ್ರಿಲ್ ರಂದು ಸಂಚಾರ ನಿರ್ಬಂಧ: ಸಾರ್ವಜನಿಕರಿಗಾಗಿ ಬದಲಿ ಮಾರ್ಗ ಸೂಚನೆಗಳು.

ಮಂಗಳೂರು, ಏಪ್ರಿಲ್ 15: ಕಣ್ಣೂರು ಆಡ್ಯಾರ್‌ನ ಷಾ ಗಾರ್ಡನ್ ಮೈದಾನದಲ್ಲಿ ದಿನಾಂಕ 18-04-2025 ರಂದು ಕೇಂದ್ರ ಸರ್ಕಾರದ ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧದ ಬೃಹತ್ ಪ್ರತಿಭಟನಾ ಸಮಾವೇಶ ಏರ್ಪಡಿಸಲಾಗಿದ್ದು, ಸುಮಾರು 50,000 ಜನರು ಭಾಗವಹಿಸುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ, ಸಾರ್ವಜನಿಕ ಹಿತದೃಷ್ಟಿಯಿಂದ ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಪಡೀಲ್ - ಬಿ.ಸಿ.ರೋಡ್ ಮುಖ್ಯ ರಸ್ತೆಯಲ್ಲಿ (ಎರಡೂ ದಿಕ್ಕುಗಳಲ್ಲಿ) ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಪೊಲೀಸ್ ಇಲಾಖೆ ಈ ನಿರ್ಧಾರವನ್ನು ಕೈಗೊಂಡಿದ್ದು, ಟ್ರಾಫಿಕ್ ದಟ್ಟಣೆ ಹಾಗೂ ಸಾರ್ವಜನಿಕ ಅವ್ಯವಹಾರ ತಪ್ಪಿಸುವ ನಿಟ್ಟಿನಲ್ಲಿ ವಾಹನಚಾಲಕರಿಗೆ ಬದಲಿ ಮಾರ್ಗಗಳನ್ನು ಸೂಚಿಸಲಾಗಿದೆ. ಕೈಗಾರಿಕಾ ಘಟಕಗಳಿಗೆ ಪೂರೈಕೆ ಮಾಡುತ್ತಿರುವ ಟ್ಯಾಂಕರ್ ಹಾಗೂ ಇತರ ಘನ ಸರಕು ವಾಹನಗಳು ಈ ಮಾರ್ಗಗಳನ್ನು ಅನುಸರಿಸಬೇಕೆಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಿಗೆ ಪತ್ರ ಮೂಲಕ ಸೂಚನೆ ನೀಡಲಾಗಿದೆ.
ಮೂಲವಾಗಿ ನಿರ್ಬಂಧಿತ ಮಾರ್ಗ ಹಾಗೂ ಬದಲಿ ರಸ್ತೆ ಈ ಕೆಳಗಿನಂತಿದೆ; 
> ಮೆಲ್ಕಾರು ಜಂಕ್ಷನ್- ಪುತ್ತೂರು/ಬಂಟ್ವಾಳ/ಬೆಳ್ತಂಗಡಿ ಕಡೆಯಿಂದ ಮಂಗಳೂರು ನಗರ/ಕಾಸರಗೋಡು ಕಡೆಗೆ ಬರುವ ವಾಹನಗಳು ಮೆಲ್ಕಾರ್ ಜಂಕ್ಷನ್ ಬೋಳಿಯಾರ್ ಮುಡಿಪು ದೇರಳಕಟ್ಟೆ - ತೊಕ್ಕೊಟ್ಟು ಮೂಲಕ ಸಂಚರಿಸುವುದು.

> ಬಿ.ಸಿ. ರೋಡ್ ಪೊಳಲಿ ದ್ವಾರ ಬಿ.ಸಿ.ರೋಡ್ ಕಡೆಯಿಂದ ಮಂಗಳೂರು/ಉಡುಪಿ ಕಡೆಗೆ ಸಂಚರಿಸುವ ವಾಹನಗಳು ಬಿ.ಸಿ.ರೋಡ್ ಕೈಕಂಬದ ಪೊಳಲಿ ದ್ವಾರದ ಮುಖಾಂತರ ಕಲ್ಪನೆ ಜಂಕ್ಷನ್ ನೀರುಮಾರ್ಗ ಬೈತುರ್ಲಿ ಕುಲಶೇಖರ ನಂತೂರು ಮೂಲಕ ಸಂಚರಿಸುತ್ತಾರೆ.

> ಪಂಪ್‌ವೆಲ್ ಜಂಕ್ಷನ್ ಮಂಗಳೂರು ನಗರ ಕಡೆಯಿಂದ ಬಿ.ಸಿ.ರೋಡ್ ಕಡೆಗೆ ಸಂಚರಿಸುವ ವಾಹನಗಳು ತೊಕ್ಕೊಟ್ಟು - ದೇರಳಕಟ್ಟೆ - ಮುಡಿಪು ಬೋಳಿಯಾರ್ ಮೆಲ್ಕಾರ್ ಮೂಲಕ ಸಂಚರಿಸುವುದು.

> ನಂತೂರು ವೃತ್ತ-ಬಿಕರ್ನಕಟ್ಟೆ-ಬೈತುರ್ಲಿ ಜಂಕ್ಷನ್- ಮಂಗಳೂರು ನಗರ / ಸುರತ್ಕಲ್ ಕಡೆಯಿಂದ ಬಿ.ಸಿ.ರೋಡ್ ಕಡೆಗೆ ಸಂಚರಿಸುವ ವಾಹನಗಳು ಕುಲಶೇಖರ -ಬೈತುರ್ಲಿ -ನೀರುಮಾರ್ಗ - ಬಿ ಸಿ ರೋಡ್ ಕೈಕಂಬದ ಪೊಳಲಿ ದ್ವಾರದ ಮೂಲಕ ಸಂಚರಿಸುವುದು,

> ಕೆ.ಪಿ.ಟಿ. ವೃತ್ತ- ಮಂಗಳೂರು ನಗರ / ಸುರತ್ಕಲ್ ಕಡೆಯಿಂದ ಬಿ.ಸಿ.ರೋಡ್ ಕಡೆಗೆ ಸಂಚರಿಸುವ ವಾಹನಗಳು ಪದವಿನಂಗಡಿ ಪಚ್ಚನಾಡಿ - ಬೈತುರ್ಲಿ ಮೂಲಕ ಅಥವಾ ಬೋಂಡೆಲ್ - ಕಾವೂರು ವೆಡ್ - ಕೈಕಂಬ - ಮೂಡಬಿದ್ರೆ ಮೂಲಕ ಸಂಚರಿಸುವುದು. 

> ಮುಲ್ಕಿ ವಿಜಯಸನ್ನಿದಿ:- ಉಡುಪಿ / ಮುಲ್ಕಿ ಕಡೆಯಿಂದ ಬಿ.ಸಿ.ರೋಡ್ ಕಡೆಗೆ ಸಂಚರಿಸುವ ವಾಹನಗಳು ಕಿನ್ನಿಗೊಳಿ - ಮೂಡಬಿದ್ರೆ - ಸಿದ್ದಕಟ್ಟೆ - ಬಂಟ್ವಾಳ ಮೂಲಕ ಸಂಚರಿಸುವುದು.

> ಪಡುಬಿದ್ರೆ:- ಉಡುಪಿ ಕಡೆಯಿಂದ ಬಿ.ಸಿ.ರೋಡ್ ಕಡೆಗೆ ಸಂಚರಿಸುವ ವಾಹನಗಳು ಕಾರ್ಕಳ ಮೂಡಬಿದ್ರೆ -ಸಿದ್ದಕಟ್ಟೆ - ಬಂಟ್ವಾಳ ಮೂಲಕ ಸಂಚರಿಸುವುದು.

ಸಾರಾಂಶ:
18 ಏಪ್ರಿಲ್ 2025ರಂದು ಮಧ್ಯಾಹ್ನದಿಂದ ರಾತ್ರಿ ವರೆಗೆ ಬೃಹತ್ ಪ್ರತಿಭಟನೆಯ ಕಾರಣದಿಂದ ಪ್ರಮುಖ ರಸ್ತೆಯಲ್ಲಿ ಸಂಚಾರ ನಿರ್ಬಂಧ ವಿಧಿಸಲಾಗಿದ್ದು, ಸಾರ್ವಜನಿಕರು ಹಾಗೂ ಕೈಗಾರಿಕಾ ವಾಹನ ಚಾಲಕರು ಈ ಮಾರ್ಗಗಳಲ್ಲಿ ಸಂಚರಿಸಿ ಸಹಕರಿಸಬೇಕೆಂದು ಮಂಗಳೂರು ನಗರ ಪೊಲೀಸ್ ಇಲಾಖೆ ವಿನಂತಿಸಿದೆ.

Post a Comment

أحدث أقدم