ಕಾಂಚನ: ಶ್ರವಣದೋಷವುಳ್ಳ ಮಕ್ಕಳಲ್ಲಿ ಜ್ಞಾನದ ಬೆಳಕು ನೀಡುವ 17 ಮಂದಿ ಶಿಕ್ಷಕರಿಗೆ ಮತ್ತು ಸಿಬ್ಬಂದಿಗಳಿಗೆ ಸನ್ಮಾನ ಮಾಡಿ ಕೃತಜ್ಞತೆ ಸಲ್ಲಿಸಿದ ಕಾಂಚನದ ನೆಕ್ಕರೆ ಪೋಷಕರು.

ಕಾಂಚನ: ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕೌಡಳ್ಳಿ ಎನ್ .ಕೆ.ಗಣಪ್ಪಯ್ಯ ರೋಟರಿ ಶ್ರವಣದೋಷವುಳ್ಳ ಮಕ್ಕಳ ಶಾಲೆಯ ಶಿಕ್ಷಕರಿಗೆ ಮತ್ತು ಸಿಬ್ಬಂದಿಗಳಿಗೆ ಪೋಷಕರಾದ ಶ್ರೀ ಯಾದವ ಗೌಡ ಮತ್ತು ಕುಟುಂಬಸ್ಥರು ತಮ್ಮ ಮಗಳಾದ ಕುಮಾರಿ ಸೌಜನ್ಯ ನೆಕ್ಕರೆಯವರಿಗೆ ಯೋಗ್ಯ ಶಿಕ್ಷಣ ಮತ್ತು ಮಾರ್ಗದರ್ಶನ ನೀಡಿದ್ದಕ್ಕಾಗಿ ಕೃತಜ್ಞತಾ ಪೂರ್ವಕವಾಗಿ ಪೋಷಕರ ಸಭೆಯಲ್ಲಿ ಸಂಸ್ಥೆಯ 17 ಮಂದಿಯನ್ನು ಶಾಲು, ಹಾರ ಮತ್ತು ನೆನಪಿನ ಕಾಣಿಕೆಯನ್ನು ನೀಡಿ ಸನ್ಮಾನಿಸಿದರು.ಶಾಲೆಯ ಪ್ರಾಂಶುಪಾಲರಾದ ಶ್ರೀ ಲೋಕೇಶ್ , ಮುಖ್ಯೋಪಾಧ್ಯಾಯರಾದ ಈಶ್ವರಪ್ಪ ಹಕಾರಿ,
ಶಿಕ್ಷಕರಾದ ಶೋಭಾ ಗುರ್ಲಕಟ್ಟಿ, ರೇಣುಕಾ .ಎಚ್.ಟಿ., ಪ್ರಕಾಶ್ ಶಾಲದಾರ್ , ಭಾರತಿ.ಎಚ್.ಟಿ., ಸಾವಿತ್ರಿ.ಡಿ.ಕೆ., ಅನಿಲ್ ಕುಮಾರ್, ಷಣ್ಮುಖ ಬಿ.ಕೆ.ಯಲ್ಲಪ್ಪ ವಗ್ಗನವರ್ , ಮತ್ತು ಸಿಬ್ಬಂದಿಗಳಾದ ಕಾಂಚನ ,ಸಿ., ಮಂಜುನಾಥ್ ,ಶಾಂತಾ ಎಚ್.ಸಿ, ಶಶಿಕಲಾ, ಚೈತ್ರ, ಪವಿತ್ರ ಮತ್ತು ಮಲ್ಲಿಕಾರ್ಜುನ ಸನ್ಮಾನ ಸ್ವೀಕರಿಸಿದರು .
ಸಂಸ್ಥೆಯ ಪ್ರಾಂಶುಪಾಲರಾದ ಲೋಕೇಶ್ ಅಧ್ಯಕ್ಷತೆ ವಹಿಸಿದ್ದರು.ಪುತ್ತೂರು ತಾಲೂಕು ಪಂಚಾಯತ್ ನಿಕಟಪೂರ್ವ ಸದಸ್ಯರಾದ ಶ್ರೀ ಮುಕುಂದ ಬಜತ್ತೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ಸಂಸ್ಥೆಯ ವಿದ್ಯಾರ್ಥಿ ಕುಮಾರಿ ಸೌಜನ್ಯ ನೆಕ್ಕರೆ ಅವರ ತಾಯಿ ಸುಜಾತ ನೆಕ್ಕರೆ ಮತ್ತು ಪೋಷಕರಾದ ವಿಮಲ ನೆಕ್ಕರೆ,ಯಾದವ ನೆಕ್ಕರೆ, ಸುದರ್ಶನ್ ನೆಕ್ಕರೆ, ರಮೇಶ್ ಕಾಯರ್ತಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಉಪನ್ಯಾಸಕ ಜೇಸಿ ಮೋಹನ್ ಚಂದ್ರ ತೋಟದ ಮನೆ ಪ್ರಸ್ತಾವನೆ ಯೊಂದಿಗೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ಧನ್ಯವಾದ ಅರ್ಪಿಸಿದರು.
ಕುಶಾಲಪ್ಪ ಮುಖ್ಯ ಸಹಕರಿಸಿದರು.

Post a Comment

Previous Post Next Post