ಹರಿಹರ ಪಳ್ಳತಡ್ಕ ದಲ್ಲಿ ಮಕ್ಕಳ ಬೇಸಿಗೆ ಶಿಬಿರ ಆರಂಭ.

ಸುಬ್ರಹ್ಮಣ್ಯ ಏ.6: ಕೌಸ್ತುಭ ಕಲಾ ಟ್ರಸ್ಟ್ (ರಿ) ಕೂಜುಗೋಡು, ಸುಬ್ರಹ್ಮಣ್ಯ ಆಯೋಜಿಸಿರುವ ಎ.4 ರಿಂದ ಎ.11 ರವರೆಗೆ ಹರಿಹರೇಶ್ವರ ದೇವಾಲಯದಲ್ಲಿ ನಡೆಯಲಿರುವ ಮಕ್ಕಳ ಬೇಸಿಗೆ ಶಿಬಿರ ಕಲರವ ಎ.4 ರಂದು ಉದ್ಘಾಟನೆಗೊಂಡಿತು. 

ಹರಿಹರ ದೇವಾಲಯದ ವ್ಯವಸ್ಥಾಪನ ಸಮಿತಿ ಸದಸ್ಯ ಶ್ರೀಯುತ ಚಂದ್ರಹಾಸ ಶಿವಾಲ ದೀಪ ಬೆಳಗಿ ಶಿಬಿರವನ್ನು ಉದ್ಘಾಟಿಸಿದರು. ಹರಿಹರ ದೇವಾಲಯದ ವ್ಯವಸ್ಥಾಪನಸಮಿತಿ ಅಧ್ಯಕ್ಷ ಶ್ರೀಯುತ ಕಿಶೋರ್ ಕುಮಾರ್ ಕೂಜುಗೋಡು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸುಬ್ರಮಣ್ಯ ಐನಕ್ಕಿದು ಪ್ರಾ. ಕೃ.ಪ.ಸ. ಸಂಘದ ನಿರ್ದೇಶಕ ಶ್ರೀಯುತ ಜಯಪ್ರಕಾಶ್ ಕೂಜುಗೋಡು ಹರಿಹರೇಶ್ವರ ದೇವಾಲಯದ ವ್ಯವಸ್ಥಾಪನ ಸಮಿತಿ ಸದಸ್ಯೆ ಶ್ರೀಮತಿ ರೇಷ್ಮಾ ಪ್ರಕಾಶ್ ಕಟ್ಟೆಮನೆ, ವಕೀಲರಾದ ಶ್ರೀಯುತ ಮಧುಸೂದನ್ ಕಾಪಿ ಕಾಡು ಉಪಸ್ಥಿತರಿದ್ದರು. ಶಿಬಿರದ ಸಂಯೋಜಕಿ ಶ್ರೀಮತಿ ವನಿತಾ ಉದಯ್ ಕೂಜುಗೋಡು ಕಾರ್ಯಕ್ರಮ ನಿರೂಪಿಸಿದರು. ಸಂಪನ್ಮೂಲ ವ್ಯಕ್ತಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Post a Comment

أحدث أقدم