ಸುಬ್ರಹ್ಮಣ್ಯ, ಏಪ್ರಿಲ್ 22: ಕುಕ್ಕೆ ಸುಬ್ರಹ್ಮಣ್ಯ ಬಳಿಯ ಏನೇಕಲ್ ಗ್ರಾಮದಲ್ಲಿ ಜೇಸಿಐ ಪಂಜ ಪಂಚಪಂಚಶ್ರೀ ಹಾಗೂ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಪಂಜ ಸಂಸ್ಥೆಯ ಸಹಯೋಗದೊಂದಿಗೆ ಏಪ್ರಿಲ್ 20 ರಿಂದ 26 ರವರೆಗೆ ನಡೆಯುವ ಈಜು ತರಬೇತಿ ಶಿಬಿರಕ್ಕೆ ಭವ್ಯವಾಗಿ ಚಾಲನೆ ನೀಡಲಾಗಿದೆ.
ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಸ್ಕೌಟ್ಸ್ ಮತ್ತು ಗೈಡ್ಸ್ ಆಯುಕ್ತ ಪಿ.ಜಿ.ಆರ್ ಸಿಂಧ್ಯಾ ಉದ್ಘಾಟಿಸಿದರು. ನದಿಯೊಂದರಲ್ಲಿ ಶಿಬಿರಾರ್ಥಿ ಮಕ್ಕಳೊಂದಿಗೆ ಸ್ವತಃ ಈಜು ಮಾಡಿ, ಮಕ್ಕಳಿಗೆ ಆತ್ಮವಿಶ್ವಾಸ ತುಂಬುವ ಅಪೂರ್ವ ನುಡಿಸಂಕೆ ನೀಡಿದರು.
"ಇಂತಹ ಶಿಬಿರಗಳು ಗ್ರಾಮೀಣ ಮಕ್ಕಳಿಗೆ ಉತ್ತಮ ಅವಕಾಶ. ಈಜು ಕೇವಲ ಕೌಶಲ್ಯವಷ್ಟೇ ಅಲ್ಲ, ಇದು ದೈಹಿಕ-ಮಾನಸಿಕ ಬೆಳವಣಿಗೆಗೆ ಸಹಾಯಕ. ಮಕ್ಕಳು ಮುಂದೆ ಜಿಲ್ಲೆಯೇ ಅಲ್ಲ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲೂ ಮಿಂಚಲಿ" ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಪಂಜ ಪಂಚಪಂಚಶ್ರೀ ಅಧ್ಯಕ್ಷ ವಾಚಣ್ಣ ಕೆರೆಮೂಲೆ ವಹಿಸಿದ್ದರು. ಪುರಂದರ ರೈ, ಕಾಶೀನಾಥ್ ಗೋಗಟೆ, ವಿಮಲಾ ರಂಗಯ್ಯ, ಯಶವಂತ ಬಿ ಮತ್ತು ಶ್ರೀಕಾಂತ ಪ್ರಭು ಪ್ರಮುಖ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಶಿಬಿರದ ಯಶಸ್ಸಿಗೆ ದೇವಿಪ್ರಸಾದ್ ಜಾಕೆ, ದಾಮೋದರ ನೆರಳ, ಮಾಧವ ಬಿಕೆ, ಉದಯಕುಮಾರ ರೈ, ಗಗನ್ ತೆಂಕಪಾಡಿ, ಪ್ರವೀಣ್ ಕುಂಜತ್ತಾಡಿ, ಕಿರಣ್ ಕರ್ಮಲ್, ಅಶ್ವಥ್ ಮತ್ತು ಇತರರು ಶ್ರಮಿಸಿದ್ದಾರೆ.
ಸಿಂಧ್ಯಾ ಅವರು ಪತ್ರಕರ್ತರೊಂದಿಗೆ ಮಾತನಾಡುತ್ತಾ, "ಮಕ್ಕಳಿಗೆ ಪಾಠದೊಂದಿಗೆ ಪಾಠೇತರ ಚಟುವಟಿಕೆಗಳ ಅಗತ್ಯವಿದೆ. ಈಜು ತರಬೇತಿ ಶಿಬಿರದಂತಹ ಅವಕಾಶಗಳು ಮಕ್ಕಳಲ್ಲಿ ಆರೋಗ್ಯ, ಶಿಸ್ತು ಹಾಗೂ ಜ್ಞಾನವೃದ್ಧಿಗೆ ನೆರವಾಗುತ್ತವೆ" ಎಂದು ಹೇಳಿದರು.
إرسال تعليق