ನಾಲ್ಕೂರು ಗ್ರಾಮದ ನಡುಗಲ್ಲು ಬಳಿ ಇರುವ ದೇರಪ್ಪಜ್ಜನ ಮನೆ ಎಂಬಲ್ಲಿ ತಾಯಿ ಮತ್ತು ಮಗ ವಿಷ ಸೇವಿಸಿದ ಘಟನೆ ಒಂದು ಭಾರಿ ಆಘಾತವನ್ನುಂಟು ಮಾಡಿದೆ. ಈ ದುರ್ಘಟನೆಯಲ್ಲಿ ಮಗ ನಿತಿನ್ ಕುಮಾರ್ (ವಯಸ್ಸು 35) ಮೃತಪಟ್ಟಿದ್ದು, ತಾಯಿ ಸುಲೋಚನಾರವರನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಾತೃಪುತ್ರರು ಇಂದು ಬೆಳ್ಳಿಗ್ಗೆ ಇಲಿ ಪಾಷಣ ಸೇವಿಸಿದರೆಂದು ಶಂಕಿಸಲಾಗಿದೆ. ಘಟನೆ ಸಂಭವಿಸಿದ ನಂತರ ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಮಗ ನಿತಿನ್ ಅವರನ್ನು ವೈದ್ಯರು ಮೃತ ಎಂದು ಘೋಷಿಸಿದರು. ತಾಯಿ ಸುಲೋಚನಾರವರ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಮೃತ ನಿತಿನ್ ಕುಮಾರ್ ಅವರು ಪತ್ನಿ ದೀಕ್ಷಾ ಮತ್ತು ತಂದೆ ಕುಶಾಲಪ್ಪರನ್ನು ಅಗಲಿದ್ದಾರೆ. ಈ ಸಂಬಂಧ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಹಾಗೂ ಮುಂದಿನ ತನಿಖೆ ನಡೆಯುತ್ತಿದೆ.
Post a Comment