"ಸುಬ್ರಹ್ಮಣ್ಯ ದರ್ಪಣ ತೀರ್ಥದಲ್ಲಿ ಕಸ ಸಂಗ್ರಹ – ತ್ವರಿತ ಕ್ರಮಕ್ಕೆ ಪ್ರೆಸ್ ಕ್ಲಬ್ ಆಗ್ರಹ"

ಕುಕ್ಕೆ ಸುಬ್ರಹ್ಮಣ್ಯ, ಏಪ್ರಿಲ್ 9:
ಪ್ರಸಿದ್ಧ ಧಾರ್ಮಿಕ ಸ್ಥಳವಾದ ಕುಕ್ಕೆ ಸುಬ್ರಹ್ಮಣ್ಯದ ಆದಿ ಸುಬ್ರಹ್ಮಣ್ಯ ದರ್ಪಣ ತೀರ್ಥ ನದಿಯಲ್ಲಿ ಇತ್ತೀಚೆಗೆ ಕಸ ಎಸೆಯಲಾಗುತ್ತಿರುವ ಘಟನೆಗಳು ಹೆಚ್ಚುತ್ತಿವೆ. ಭಕ್ತರು ನದಿಗೆ ಪ್ಲಾಸ್ಟಿಕ್ ಬಾಟಲಿ, ಮದ್ಯದ ಬಾಟಲಿ, ಬಟ್ಟೆ ಮತ್ತು ಇತರ ತ್ಯಾಜ್ಯ ವಸ್ತುಗಳನ್ನು ಎಸೆಯುತ್ತಿರುವುದು ಕಂಡುಬಂದಿದೆ.

ಪವಿತ್ರ ನದಿಯ ಸ್ವಚ್ಚತೆ ಕಾಪಾಡುವುದು ಎಲ್ಲರ ಹೊಣೆ. ಆದರೆ ಕೆಲವರು ನಿರ್ಲಕ್ಷ್ಯದಿಂದ ನದಿಗೆ ಕಸ ಎಸೆದು ಮಾಲಿನ್ಯ ಮೂಡಿಸುತ್ತಿದ್ದಾರೆ. ಇದು ಅಲ್ಲಿಗೆ ಭೇಟಿ ನೀಡುವ ಸಾವಿರಾರು ಭಕ್ತರಿಗೆ ದುಃಖ ನೀಡುವಂತಹ ದೃಶ್ಯವಾಗಿದೆ.

ಈ ಬಗ್ಗೆ ಸುಬ್ರಹ್ಮಣ್ಯ ಪ್ರೆಸ್ ಕ್ಲಬ್ ಅಧ್ಯಕ್ಷ ವಿಶ್ವನಾಥ್ ನಡುತೋಟ ಅವರು ಕಳವಳ ವ್ಯಕ್ತಪಡಿಸಿ, “ನದಿ ಶುದ್ಧವಾಗಿರಬೇಕು. ಅಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು ಸ್ವಚ್ಚತಾ ಕಾರ್ಯ ಆರಂಭಿಸಬೇಕು. ಜನರಲ್ಲಿಯೂ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು” ಎಂದು ಹೇಳಿದ್ದಾರೆ.
ಅಧಿಕಾರಿಗಳು ಕೂಡ ಈ ಸಮಸ್ಯೆಗೆ ತಕ್ಷಣ ಸ್ಪಂದಿಸಬೇಕು. ನದಿಯನ್ನು ಸ್ವಚ್ಚವಾಗಿಟ್ಟುಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ ಎಂಬ ಅರಿವು ಪ್ರತಿ ಭಕ್ತನಲ್ಲಿ ಮೂಡಬೇಕಿದೆ.


Post a Comment

Previous Post Next Post