ಪಶು ಆಸ್ಪತ್ರೆಯಲ್ಲಿ ಕಳ್ಳತನ – ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಸುಳ್ಯ ತಾಲೂಕು ಐವತ್ತೊಕ್ಲು ಗ್ರಾಮದಲ್ಲಿರುವ ಪಂಜ ಪಶು ಆಸ್ಪತ್ರೆಯಲ್ಲಿ ಕಳ್ಳತನ ನಡೆದಿರುವ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣದ ಅನುಸಾರ Cruze+ 2kv Inverter ಒಂದನ್ನು ಅಪರಿಚಿತ ವ್ಯಕ್ತಿಗಳು ಕಳವು ಮಾಡಿದ್ದಾರೆ.
ಪಶು ಆಸ್ಪತ್ರೆಯ ಮುಖ್ಯ ಪಶು ವೈಧ್ಯಾಧಿಕಾರಿಗಳಾದ ಡಾ. ಬಿ.ಕೆ. ಸೂರ್ಯನಾರಾಯಣ, ಅವರು ಈ ಬಗ್ಗೆ ದೂರು ದಾಖಲಿಸಿದ್ದಾರೆ. ಅವರು 2025ರ ಮೇ 23ರಂದು ಸಂಜೆ 4 ಗಂಟೆಗೆ ಆಸ್ಪತ್ರೆ ಬಾಗಿಲು ಹಾಕಿ, ಬೀಗ ಹಾಕಿ ತೆರಳಿದ್ದರು. ನಂತರ 24 ಮತ್ತು 25ರಂದು (ಶನಿವಾರ ಮತ್ತು ಭಾನುವಾರ) ಆಸ್ಪತ್ರೆ ಮುಚ್ಚಲಾಗಿತ್ತು.
ಮೇ 26ರಂದು ಬೆಳಿಗ್ಗೆ 9 ಗಂಟೆಗೆ ಆಸ್ಪತ್ರೆಗೆ ಆಗಮಿಸಿದ ಡಿ ದರ್ಜೆಯ ನೌಕರ ನಾರಾಯಣ ನಾಯ್ಕ ಆಸ್ಪತ್ರೆ ಬಾಗಿಲಿಗೆ ಹಾಕಿದ್ದ ಬೀಗ ಮುರಿದ ಸ್ಥಿತಿಯಲ್ಲಿ ಪತ್ತೆಯಾಗಿರುವುದಾಗಿ ತಿಳಿಸಿದ್ದಾರೆ. ಮುರಿದ ಬಾಗಿಲು ಮೂಲಕ ಒಳಗೆ ಪ್ರವೇಶಿಸಿ, ಕಚೇರಿಯ ಒಳಭಾಗದಲ್ಲಿ ಇಡಲಾಗಿದ್ದ Cruze+ 2kv inverter ಅನ್ನು ಕಳ್ಳತನ ಮಾಡಲಾಗಿದೆ ಎಂದು ತಿಳಿಸಲಾಗಿದೆ. ಕಳವಾದ inverter ನ ಮೌಲ್ಯ ರೂ.11,200/- ಆಗಿದೆ.
ಈ ಕುರಿತು ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 27/2025, ಭಾರತೀಯ ನ್ಯಾಯ ಸಂಹಿತೆ (BNS-2023) ಅಡಿಯಲ್ಲಿ ಕಲಂ 331(3), 331(4), 305 ಅನ್ವಯ ಪ್ರಕರಣ ದಾಖಲಿಸಲಾಗಿದೆ.
إرسال تعليق