ಸುಬ್ರಹ್ಮಣ್ಯ, ಮೇ 27 – ಕಡಬ ತಾಲೂಕು ಬಿಳಿನೆಲೆ ಕೈಕಂಬ ಯುವಕ ಮಂಡಲವು ತನ್ನ 50 ವರ್ಷದ ಸುವರ್ಣ ಮಹೋತ್ಸವವನ್ನು ಜರುಗಿಸಿಕೊಂಡಿತು. ಬಿಳಿನೆಲೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಾರದಾ ದಿನೇಶ್ ಅವರು ಕಾರ್ಯಕ್ರಮ ಉದ್ಘಾಟಿಸಿ, ಯುವಕರು ಸಂಘಟಿತರಾಗಿ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಬೆಳಗ್ಗೆ ಗಣಪತಿ ಹವನ, ಭಜನೆ ಬಳಿಕ ನೂತನ ಕಟ್ಟಡವನ್ನು ಶ್ರೀಮತಿ ಲೀಲಾವತಿ ದೇವರಾಜ್ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಶಿವಪ್ರಸಾದ್ ನಡುತೋಟ ವಹಿಸಿದ್ದರು. ಪ್ರಮುಖ ಅತಿಥಿಗಳಾಗಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ,ಸುಧೀರ್ ಕುಮಾರ್ ಶೆಟ್ಟಿ,
ವೆಂಕಟ ಒಳಲಂಬೆ, ಶಿವಪ್ರಸಾದ್ ಮೈಲೇರಿ, ವಾಡ್ಯಪ್ಪ ಗೌಡ, ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.
ದಾನ ಧಾರ್ಮಿಕರಲ್ಲಿ ₹20,000, ₹10,000 ಮತ್ತು ₹5,000 ಮೀರಿದ ದಾನಿಗಳನ್ನು ಗೌರವಿಸಲಾಯಿತು. ಪ್ರವೀಣ್ ಕುಮಾರ್ ಪಿಲಿಕಜೆ ಸ್ವಾಗತ, ವಿಜಯಕುಮಾರ್ ನಡುತೋಟ ಪ್ರಸ್ತಾವನಾ, ಹರೀಶ್ ಚೇರು ಧನ್ಯವಾದ ಸಲ್ಲಿಸಿದರು. ಕಾರ್ಯಕ್ರಮ ನಿರೂಪಣೆಯನ್ನು ಜಯಪ್ರಕಾಶ್ ಎರ್ಮೈಲ್ ಮಾಡಿದರು.
ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮಕ್ಕಳ ನೃತ್ಯ, ಯುವಕರ ಡ್ಯಾನ್ಸ್ ಬೀಟ್, ದಿನೇಶ್ ಕೊಡಪದವ್ ಅವರ ನೇತೃತ್ವದಲ್ಲಿ ಯಕ್ಷ. ತೆಲಿಕೆ ಪ್ರದರ್ಶನ ನಡೆಯಿತು.
إرسال تعليق